Advertisement

ನೀರಿನ ಸಮಸ್ಯೆ ನಿವಾರಣೆಗೆ ಪರಿಸರ ರಕ್ಷಿಸಿ

11:22 AM Jul 09, 2018 | Team Udayavani |

ಬೀದರ: ದೇಶದಲ್ಲಿ ನೀರಿಗಾಗಿ ರಾಜ್ಯಗಳ ನಡುವೆ ಸಂಘರ್ಷ ನಡೆಯುತ್ತಿದ್ದು, ಜನರು ಬೀದಿಗಳಿದು ಪ್ರತಿ ದಿನ ಹೋರಾಟ ನಡೆಸುತ್ತಿದ್ದಾರೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಪ್ರತಿಯೊಬ್ಬರು ಮೊದಲು ಪರಿಸರ ಸಂರಕ್ಷಣೆಗೆ ಕಾಳಜಿ ತೊರಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಸುಷ್ಮಾ ಸಾಹೂ ಹೇಳಿದರು.

Advertisement

ನಗರದ ರಂಗಮಂದಿರದಲ್ಲಿ ರವಿವಾರ ರಾಷ್ಟ್ರೀಯ ಮಹಿಳಾ ಆಯೋಗ ದೆಹಲಿ ಹಾಗೂ ಶಾಂತೀಶ್ವರಿ ಸ್ವಯಂ ಸೇವಾ ಸಂಸ್ಥೆ ಕಮಠಾಣಾ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ನೀರು, ನೈರ್ಮಲ್ಯ ಮತ್ತು ಶುಚಿತ್ವ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮ
ಉದ್ಘಾಟಿಸಿ ಅವರು ಮಾತನಾಡಿದರು.

ಸಾವಿರಾರು ಮರಗಳನ್ನು ಕಡಿದು ಇಂದು ಕಾಗದ ತಯಾರಿಸುತ್ತಿದ್ದೇವೆ. ಇದರಿಂದ ನೀರಿನ ಅಂಶ ಕಡಿಮೆಯಾಗುತ್ತಿದೆ. ಕೇಂದ್ರ ಸರ್ಕಾರವು ಕಾಗದದ ನಿಯಂತ್ರಣಕ್ಕಾಗಿ “ಈ-ಕಾಗದ’ ಯೋಜನೆ ಜಾರಿಗೆ ತರುತ್ತಿದೆ. ಜೊತೆಗೆ ಗುಜರಾತ ರಾಜ್ಯದಲ್ಲಿ ನೀರು ಸಂಗ್ರಹಣೆಗಾಗಿ ಅನುಷ್ಠಾನಗೊಂಡ ಯೋಜನೆಗಳು ದೇಶದ ಪ್ರತಿಯೊಂದು ರಾಜ್ಯಗಳಲ್ಲಿ ಜಾರಿಯಾದರೆ ನೀರಿನ ಸಮಸ್ಯೆಗೆ ಸ್ವಲ್ಪ ಮಟ್ಟಿಗೆ ಕಡಿವಾಣ ಹಾಕಬಹುದಾಗಿದೆ. ಅಭಿವೃದ್ಧಿ ಹೆಸರಲ್ಲಿ ಮರಗಳನ್ನು ಕಡಿಯುತ್ತಿದ್ದು, ಇದರಿಂದ ಪರಸರ ವಿಕೋಪದತ್ತ
ಸಾಗುತ್ತಿದೆ. ಮಳೆ ಪ್ರಮಾಣ ಕಡಿಮೆಯಾಗುತ್ತಿದೆ.

ಇದರಿಂದ ಆಮ್ಲಜನಕ ಕಡಿಮೆಯಾಗಿ ಹೃದಯರೋಗಗಳ ಪ್ರಮಾಣ ಹೆಚ್ಚಾಗುತ್ತಿವೆ. ದೆಹಲಿ ನಗರಗಳಲ್ಲಿ ವಾಯು ಮಾಲಿನ್ಯ ಹೆಚ್ಚಾಗಿ ಉಸಿರಾಡಲು ಸಹ ತೊಂದರೆ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದರು.

ದೇಶದಲ್ಲಿ ಶೇ.20ರಷ್ಟು ಅತ್ಯಾಚಾರ ಪ್ರಕರಣಗಳು ಗ್ರಾಮೀಣ ಭಾಗದಲ್ಲಿ ನಡೆಯುತ್ತಿವೆ. ಅದು ಮಹಿಳೆಯರು ಶೌಚಕ್ಕೆ ತೆರಳಿದ ಸಂದರ್ಭದಲ್ಲಿ ನಡೆಯುತ್ತಿದ್ದು, ಮಹಿಳೆಯರ ಮಾನ ಉಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಶೌಚಾಲಯ ನಿರ್ಮಾಣ ಕಾರ್ಯ ಆರಂಭಿಸಿ, ಪ್ರತಿಯೊಂದು ಮನೆಗೆ
ಶೌಚಾಲಯ ನಿರ್ಮಾಣಕ್ಕೆ ಮುಂದಾಗಿದೆ. ಇಂದು ಯಾರ ಮನೆಯಲ್ಲಿ ಶೌಚಾಲಯ ಇಲ್ಲ ಅಂತಹ ಮನೆಗೆ ಹೆಣ್ಣು ಕೊಡಲು ಯಾರೂ ಮುಂದಾಗುತ್ತಿಲ್ಲ ಎಂದರು.

Advertisement

ಇದೇ ವೇಳೇ ಡಾ| ಎಸ್‌.ಕೆ. ಮಿತ್ತಲ, ಡಾ| ಬಂಡಯ್ಯ ಸ್ವಾಮಿ, ಪ್ರೊ| ಎಸ್‌.ವಿ. ಕಲ್ಮಠ, ಸಂಜೀವಕುಮಾರ ಜುಮ್ಮಾ, ಯೋಗೇಶ ಮಠದ, ಮಲ್ಲೇಶ ಗಣಪೂರ, ಎಂ.ಬಿ. ಚಿತ್ರಾ, ಮಹಾನಂದಾ ನಾಸಿ ಅವರನ್ನು ಸನ್ಮಾನಿಸಲಾಯಿತು.
 
ಶ್ರೀಶೈಲ ಅಕ್ಕ ಮಹಾದೇವಿ ವೈತನ್ಯ ಕೇಂದ್ರದ ಅಧ್ಯಕ್ಷೆ ಕರುಣಾದೇವಿ ಸಾನ್ನಿಧ್ಯ ವಹಿಸಿದ್ದರು. ಪ್ರಾಣಿ ಕ್ರೌರ್ಯ ತಡೆ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ. ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಭಾರತಿಬಾಯಿ ಶೇರಿಕಾರ, ಸ್ಥಳೀಯ ಶಾಸಕ ರಹಿಮ್‌ ಖಾನ್‌, ಜಿಪಂ ಸದಸ್ಯೆ ಮಂಜುಳಾ ಶಿವಕುಮಾರ ಸ್ವಾಮಿ, ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಅಡಳಿತ ಮಂಡಳಿ ಸದಸ್ಯೆ ಲುಂಬಿಣಿ ಗೌತಮ, ಮಹೇಶ ಅಗರವಾಲ, ಪ್ರವೀಣ ಕೋರ್ಪಲಿ ತೇಲಿ, ರಾಜಕುಮಾರ ಹೆಬ್ಟಾಳೆ, ಪ್ರಾಚಾರ್ಯ ಪ್ರೊ| ಶಿವಶರಣಪ್ಪ ಚಿಟ್ಟಾ, ಈರಣ್ಣ ಪಾಂಚಾಳ, ಕೇಶವ ವಟಗಿಕರ್‌, ವೈಜಿನಾಥ ನೌಬಾದೆ, ಡಾ| ಪಲ್ಲವಿ ಕೇಸರಿ, ಅಬ್ದುಲ ಶಫಿ ಅಹ್ಮದ್‌, ಡಾ| ರವಿಂದ್ರನಾಥ ಪಂಡಿತ, ಡಾ| ಸಿದ್ರಾಮಯ್ಯ ಸ್ವಾಮಿ, ಶಿವಕುಮಾರ ಪಾಂಚಾಳ, ಲಿಂಗಾಕ್ಷಿ ಖೇಣಿ, ಬಸಯ್ಯ ಸ್ವಾಮಿ, ಡಾ| ಧನಲಕ್ಷ್ಮೀ ಪಾಟೀಲ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next