Advertisement
ನಗರಪ್ರದೇಶದಲ್ಲಿ ದುಡಿಯುತ್ತಿರುವ ಮಂದಿಯನ್ನೇಹೆಚ್ಚಾಗಿ ಕ್ರೆಡಿಟ್ ಕಾರ್ಡ್ ಕಂಪನಿಗಳು ಟಾರ್ಗೆಟ್ ಮಾಡುತ್ತವೆ. ಅವರಿಗೆ ಮೇಲಿಂದ ಮೇಲೆ ಕರೆಮಾಡಿ ಒಂದಿಲ್ಲೊಂದು ಆಕರ್ಷಕ ಸವಲತ್ತಿನ ಆಮಿಷ ಒಡ್ಡಿ, ಕ್ರೆಡಿಟ್ ಕಾರ್ಡ್ ಬಳಕೆದಾರರನ್ನಾಗಿ ಮಾಡಿಬಿಡುತ್ತವೆ. ಕೆಲವರ ಪರ್ಸುಗಳನ್ನು, ಹ್ಯಾಂಡ್ ಬ್ಯಾಗುಗಳನ್ನು ತೆರೆದರೆ, ಅಲ್ಲಿ ಮೂರು- ನಾಲ್ಕು ಕ್ರೆಡಿಟ್ ಕಾರ್ಡುಗಳನ್ನು ಕಾಣಬಹುದು. ಮಾಲ್ ಗಳಲ್ಲಿ, ಶೋರೂಂಗಳ ಶಾಪಿಂಗ್ ಕೌಂಟರ್ ಗಳಲ್ಲಿ ಬಿಲ್ಲನ್ನು ಸ್ಪ್ಲಿಟ್ ಮಾಡಿ, ಹಲವು ಕ್ರೆಡಿಟ್ ಕಾರ್ಡುಗಳನ್ನು ಸ್ವೆ„ಪ್ ಮಾಡುವುದನ್ನು ನೋಡಿರಬಹುದು. ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡುಗಳಿದ್ದಾಗ, ಅದನ್ನು ಕಳೆದುಕೊಳ್ಳುವ ಸಾಧ್ಯತೆಯೂ ಹೆಚ್ಚಿರುತ್ತದೆ. ಕ್ರೆಡಿಟ್ ಕಾರ್ಡನ್ನು ದುರುಪಯೋಪಡಿಸಿಕೊಳ್ಳುವ ರಿಸ್ಕ್ ಇರುವುದರಿಂದ, ಆತಂಕ ಸಹಜ. ಕ್ರೆಡಿಟ್ ಕಾರ್ಡ್ ಕಳುವಾದ ಸಮಯದಲ್ಲಿ ಈ ಕೆಳಕಂಡ ಸೂಚನೆಗಳನ್ನು ಪಾಲಿಸಿ.
ಕ್ರೆಡಿಟ್ ಕಾರ್ಡ್ ಕಳುವಾಗಿದೆ ಎಂದು ತಿಳಿದು ಬಂದ ತಕ್ಷಣ, ಕೈಗೊಳ್ಳಬೇಕಾದ ಮೊದಲ ನಡೆ ಇದು. ಕಾರ್ಡ್ ನೀಡಿದ ಸಂಸ್ಥೆಗೆ ಕರೆ ಮಾಡಿ, ಕಳುವಾಗಿರುವ ವಿಚಾರ ತಿಳಿಸಬೇಕು. ಕ್ರೆಡಿಟ್ ಕಾರ್ಡ್ ಸಿಕ್ಕವರು ಅದನ್ನು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಹೀಗಾಗಿ ಅದಕ್ಕೆ ಮುಂಚೆಯೇ ಹಣಕಾಸು ಸಂಸ್ಥೆಗೆ ಸುದ್ದಿ ಮುಟ್ಟಿಸಿದರೆ, ಒಂದು ವೇಳೆ ಕ್ರೆಡಿಟ್ ಕಾರ್ಡ್ ಅನ್ನು ದುರುಪಯೋಗ ಪಡಿಸಿಕೊಂಡರೂ ಕಾರ್ಡ್ ಮಾಲೀಕರನ್ನು ಹೊಣೆಗಾರರನ್ನಾಗಿಸುವುದಿಲ್ಲ. ಕರೆ
ಮಾಡುವಾಗ ಅಕೌಂಟ್ ನಂಬರ್, ಕಳವಾದ ದಿನಾಂಕ, ಈ ಹಿಂದೆ ಕ್ರೆಡಿಟ್ ಕಾರ್ಡ್ ಬಳಸಿದ ಮೊತ್ತವನ್ನು ತಿಳಿದುಕೊಂಡಿರಿ. 2 ಕಾರ್ಡ್ ಲಾಕ್
ಕ್ರೆಡಿಟ್ ಕಾರ್ಡ್ ಕಳುವಾದ ಸಂದರ್ಭದಲ್ಲಿ, ಆದಷ್ಟು ಬೇಗನೆ ಕ್ರೆಡಿಟ್ ಕಾರ್ಡನ್ನು ಲಾಕ್ ಮಾಡಿಸಬೇಕು. ಇದರಿಂದ ಕ್ರೆಡಿಟ್ ಕಾರ್ಡ್ ಅನ್ನು ಯಾರೂ ಬಳಸಲು
ಸಾಧ್ಯವಾಗುವುದಿಲ್ಲ. ಹಲವು ಕ್ರೆಡಿಟ್ ಕಾರ್ಡ್ ಸಂಸ್ಥೆಗಳು, ಕ್ರೆಡಿಟ್ ಕಾರ್ಡನ್ನು ಮೊಬೈಲ್ ಆ್ಯಪ್/ ಜಾಲತಾಣ/ ಫೋನ್ ಕರೆಯ ಮೂಲಕ ಲಾಕ್ ಮಾಡುವ,
ಇಲ್ಲವೇ ತಾತ್ಕಾಲಿಕವಾಗಿ ನಿರುಪಯುಕ್ತಗೊಳಿಸುವ ಸವಲತ್ತನ್ನು ಒದಗಿಸುತ್ತವೆ. ಈ ಸಂದರ್ಭದಲ್ಲಿ ಕಾರ್ಡ್ ಸ್ಟೇಟ್‌ಮೆಂಟ್ ಅನ್ನು ಪರಿಶೀಲಿಸುತ್ತಾ ಇರಬೇಕಾಗುತ್ತದೆ. ಅನಧಿಕೃತ ವೆಚ್ಚ ಕಂಡುಬಂದರೆ, ತಕ್ಷಣವೇ ಕ್ರೆಡಿಟ್ ಕಾರ್ಡ್ ಸಂಸ್ಥೆಗಳಿಗೆ ವಿಷಯ ತಿಳಿಸಬೇಕು.
Related Articles
ಕಾರ್ಡ್ ಕಳವಾದ ವಿಚಾರವನ್ನು ಸಂಸ್ಥೆಗೆ ತಿಳಿಸಿದ ನಂತರ ಮತ್ತು ಕಾರ್ಡ್ ಬ್ಲಾಕ್ ಆದ ನಂತರ, ಸಂಸ್ಥೆ ಪ್ರಕರಣವನ್ನು ಪರಿಶೀಲಿಸುತ್ತದೆ. ಕಾರ್ಡ್
ಬದಲಾಯಿಸಲು ಅಗತ್ಯ ನಡೆಗಳನ್ನು ಕೈಗೊಳ್ಳುತ್ತದೆ. ಸಾಮಾನ್ಯವಾಗಿ, ಸಂಸ್ಥೆ ಹಳೆಯ ಕಾರ್ಡನ್ನು ಕ್ಯಾನ್ಸಲ್ ಮಾಡಿ ಹೊಸತನ್ನು ನೀಡುತ್ತದೆ. ಇದರಿಂದ ಕ್ರೆಡಿಟ್ ಸ್ಕೋರ್ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಬಹುದು ಎನ್ನುವ ಆತಂಕ ಬೇಡ. ಕ್ರೆಡಿಟ್ ಸಾಲವನ್ನು ಸಮಯಕ್ಕೆ ಸರಿಯಾಗಿ ತೀರಿಸುವುದರ ಮೇಲೆ ಮಾತ್ರ ಕ್ರೆಡಿಟ್ ಸ್ಕೋರ್ ನಿರ್ಧಾರ ವಾಗುತ್ತದೆ.
Advertisement