Advertisement

ವೇಶ್ಯಾವಾಟಿಕೆ ಜಾಲ ಪತ್ತೆ: ಮೂವರ ಬಂಧನ

02:57 AM May 27, 2019 | sudhir |

ಮಂಗಳೂರು: ಹೊರ ರಾಜ್ಯದ ಮಹಿಳೆಯರನ್ನು ಬಳಸಿ ವೇಶ್ಯಾವಾಟಿಕೆ ಜಾಲದಲ್ಲಿ ತೊಡಗಿದ್ದ ಮೂವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

Advertisement

ಕೇರಳದ ಕೋಯಿಕ್ಕೋಡ್‌ನ‌ ತಳೇರಿಯ ಜುನೈಸ್‌ (36), ಸುರತ್ಕಲ್‌ನ ಅಬ್ದುಲ್‌ ನಜೀರ್‌ (36) ಹಾಗೂ ಎಡಪದವಿನ ನಿಯಾಜ್‌ (29) ಬಂಧಿತರು. ಓರ್ವ ಮಹಿಳೆಯನ್ನು ರಕ್ಷಿಸಲಾಗಿದೆ.

ಶಕ್ತಿನಗರ ಕ್ರಾಸ್‌ ಸೌಹಾರ್ದ ಲೇನ್‌ ಬಳಿ ಅಲ್‌ ಶಮಾಸ್‌ ಎಂಬ ಹೆಸರಿನ ಬಾಡಿಗೆ ಮನೆಯಲ್ಲಿ ಹೊರ ರಾಜ್ಯದ ಮಹಿಳೆಯನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಎಕನಾಮಿಕ್‌ ನಾರ್ಕೋಟಿಕ್‌ ಕ್ರೈಂ ಇನ್‌ಸ್ಪೆಕ್ಟರ್‌ ರಾಮಕೃಷ್ಣ ಕೆ.ಕೆ. ಅವರಿಗೆ ಬಂದ ಖಚಿತ ಮಾಹಿತಿಯಂತೆ ಶನಿವಾರ ಮನೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ಅವರ ಆದೇಶದಂತೆ ಡಿಸಿಪಿಗಳಾದ ಹನುಮಂತರಾಯ, ಲಕ್ಷ್ಮೀ ಗಣೇಶ್‌ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next