Advertisement

ಹೈಟೆಕ್‌ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ: ಮೂವರ ಬಂಧ‌ನ

12:30 PM Apr 18, 2017 | Team Udayavani |

ಬೆಂಗಳೂರು: ನಗರದ ಬಿಟಿಎಂ ಲೇಔಟ್‌ನ ಕುವೆಂಪು ನಗರದ ಭವ್ಯ ಬಂಗಲೆಯಲ್ಲಿ ಹೈಟೆಕ್‌ ವೇಶ್ಯಾವಾಟಿಕೆ ನಡೆಸುತ್ತಿದ್ದ ಜಾಲದ ಮೇಲೆ ಸೋಮವಾರ ದಾಳಿ ನಡೆಸಿರುವ ಪೊಲೀಸರು ಮೂವರು ಮಧ್ಯವರ್ತಿಗಳನ್ನು ಬಂಧಿಸಿ, ಮೂರು ಜನ ಯುವತಿಯರನ್ನು ರಕ್ಷಿಸಿದ್ದಾರೆ. ಪರ್ವೇಜ್‌ ಖಾನ್‌, ನರೇಶ್‌ ಸಿಂಗ್‌ ಮತ್ತು ಶರವಣ ಬಂಧಿತರು. ಇನ್ನಿಬ್ಬರು ಆರೋಪಿಗಳಾದ ಉಸ್ಮಾನ್‌ ಮತ್ತು ರಿಷಭ್‌ ತಲೆಮರೆಸಿಕೊಂಡಿದ್ದಾರೆ. 

Advertisement

ಖಚಿತ ಮಾಹಿತಿ  ಮೇರೆಗೆ ಮಡಿವಾಳ ಕೆರೆ ಬಳಿ ಇರುವ ಬಂಗಲೆ ಮೇಲೆ ದಾಳಿ ನಡೆಸಿ ಆರೋಪಿಗಳನ್ನ ಬಂಧಿಸಲಾಗಿದೆ ಎಂದು ಮೈಕೋ ಲೇಔಟ್‌ ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಮುಂಬೈ ಮೂಲದ ರೂಪದರ್ಶಿಯರನ್ನು ನಗರಕ್ಕೆ ಕರೆಸಿಕೊಂಡು ದಂಧೆ ನಡೆಸುತ್ತಿದ್ದು, ಶ್ರೀಮಂತ ವ್ಯಕ್ತಿಗಳು ಮತ್ತು ಉದ್ಯಮಿಗಳನ್ನು ಆನ್‌ಲೈನ್‌ ಮೂಲಕ ಯುವತಿಯರ ಫೋಟೋಗಳನ್ನು ಕಳುಹಿಸಿ ವ್ಯವಹಾರ ನಡೆಸುತ್ತಿದ್ದರು.

ಪ್ರತಿ ಗ್ರಾಹಕರಿಂದ 20ರಿಂದ 50 ಸಾವಿರ ರೂಪಾಯಿವರೆಗೆ ವಸೂಲಿ ಮಾಡುತ್ತಿದ್ದರು.  ನಗದು ರೂಪದಲ್ಲಿ ಕೊಡಲು ಸಾಧ್ಯವಾಗದಿದ್ದಲ್ಲಿ, ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ಗಳ ಮೂಲಕ ಹಣ ಪಡೆಯಲು 4 ಸ್ವೆ„ಪಿಂಗ್‌ ಯಂತ್ರ ಇಟ್ಟುಕೊಂಡಿದ್ದರು. ಬ್ರಿಗೇಡ್‌ ಪ್ಲಾಟಿನಂ ಎಸ್ಕಾರ್ಟ್ಸ್ ಹೆಸರಲ್ಲಿ ಕಾರ್ಡ್‌ ವ್ಯವಹಾರದ ನೊಂದಣಿ ಮಾಡಲಾಗಿತ್ತು. 

ಕಾನ್‌ಸ್ಟೆಬಲ್‌ಗೆ ಗೊತ್ತಿತ್ತಾ ದಂಧೆ?
ಸದ್ಯ ಪರಪ್ಪನ ಅಗ್ರಹಾರ ಠಾಣೆಯ ಅಪರಾಧ ವಿಭಾಗದಲ್ಲಿರುವ ಹೆಡ್‌ಕಾನ್‌ಸ್ಟೆಬಲ್‌ ಕರಿಬಸವ ಎಂಬುವರಿಗೆ ದಂಧೆ ಬಗ್ಗೆ ಸಂಪೂರ್ಣ ಮಾಹಿತಿ ಇತ್ತು ಎಂದು ಬಂಧಿತರಾಗಿರುವ ಮೂವರು ಆರೋಪಿಗಳು ವಿಚಾರಣೆ ವೇಳೆ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಕರಿಬಸವ ಅವರನ್ನು ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ವೇಶ್ಯಾವಾಟಿಕೆ ದಂಧೆ ಬಗ್ಗೆ ಹೆಡ್‌ಕಾನ್‌ಸ್ಟೆಬಲ್‌ ಕರಿಬಸವ ಅವರಿಗೆ ಮಾಹಿತಿ ಇತ್ತು ಎಂದಷ್ಟೇ ತಿಳಿದು ಬಂದಿದೆ. ಹಾಗಾಗಿ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ. ಒಂದು ವೇಳೆ ದಂಧೆಗೆ ಸಹಕಾರ ನೀಡುತ್ತಿದ್ದರೆ ಅವರ ವಿರುದ್ಧವೂ ಕ್ರಮಕೈಗೊಳ್ಳಲಾಗುವುದು
-ಬೋರಲಿಂಗಯ್ಯ, ಡಿಸಿಪಿ ಈಶಾನ್ಯ ವಿಭಾಗ

Advertisement
Advertisement

Udayavani is now on Telegram. Click here to join our channel and stay updated with the latest news.

Next