Advertisement

Prostitution: ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ

12:35 PM Feb 26, 2024 | Team Udayavani |

ಬೆಂಗಳೂರು: ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದ ಮೇರೆಗೆ ಸ್ಪಾ ಮೇಲೆ ದಾಳಿ ಮಾಡಿರುವ ಯಲಹಂಕ ಉಪನಗರ ಠಾಣೆ ಪೊಲೀಸರು, ಒಬ್ಬನನ್ನು ಬಂಧಿಸಿ, 7 ಮಂದಿ ವಿದೇಶಿ ಮಹಿಳೆಯರನ್ನು ರಕ್ಷಿಸಿದ್ದಾರೆ.

Advertisement

ಯಲಹಂಕ ಉಪನಗರದ ಬಿ ಸೆಕ್ಟರ್‌ನ ರೋರಾ ಲಕ್ಸುರಿ ಥಾಯಿ ಹೆಸರಿನ ಸ್ಪಾದ ಮ್ಯಾನೇಜರ್‌ ಕಿಶೋರ್‌ ಎಂಬಾತನನ್ನು ಬಂಧಿಸಲಾಗಿದೆ. ಸ್ಪಾದ ಮಾಲೀಕ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಶೋಧ ಮುಂದುವರಿಸಲಾಗಿದೆ. ಸ್ಪಾದಲ್ಲಿ ಅನಧಿಕೃತವಾಗಿ ವಿದೇಶಿ ಮಹಿಳೆಯರನ್ನು ಇರಿಸಿಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಬಗ್ಗೆ ದೊರೆತ ಮಾಹಿತಿ ಮೇರೆಗೆ ದಾಳಿ ನಡೆಸಿ ಏಳು ಮಹಿಳೆಯರನ್ನು ರಕ್ಷಿಸಲಾಗಿದೆ.

ಆರೋಪಿಗಳು ಥಾಯ್ಲಂಡ್‌ ಮೂಲದ ಮಹಿಳೆಯರನ್ನು ಪ್ರವಾಸಿ ವೀಸಾ, ಬಿಜಿನೆಸ್‌ ವೀಸಾದಡಿ ನಗರಕ್ಕೆ ಕರೆಸಿಕೊಳ್ಳುತ್ತಿದ್ದರು. ಬಳಿಕ ಹಣದಾಸೆ ತೋರಿಸಿ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿಸಿದ್ದರು. ಸ್ಪಾದಲ್ಲಿ ಬಾಡಿ ಮಸಾಜ್‌, ಕ್ರಾಸ್‌ ಮಸಾಜ್‌, ಹ್ಯಾಪಿ ಎಂಡಿಂಗ್‌, ಬಾಡಿ ಟೂ ಬಾಡಿ ಮಸಾಜ್‌ ಸೇವೆಯ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರು. ಈ ಸಂಬಂಧ ಯಲಹಂಕ ಉಪನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

 

Advertisement

Udayavani is now on Telegram. Click here to join our channel and stay updated with the latest news.

Next