ಕೋಟ: ದೈವ ಹಾಗೂ ದೇವಾಲಯಗಳ ಅಭಿವೃದ್ಧಿಯಿಂದ ಊರು ಸಮೃದ್ಧಗೊಳ್ಳುತ್ತದೆ ಎಂದು ಬಾಳೆಕುದ್ರು ಮಠದ ಶ್ರೀ ನರಸಿಂಹಾ ಶ್ರಮ ಸ್ವಾಮಿ ಹೇಳಿದರು.
ಅವರು ಶನಿವಾರ ಬನ್ನಾಡಿ ಶ್ರೀ ನಂದಿಕೇಶ್ವರ ಹಾಗೂ ಪರಿವಾರ ದೈವಗಳ ಸಣ್ಣ ಗರೋಡಿ ಪುನಃಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಸಭಾ ಕಾರ್ಯಕ್ರಮ ದಲ್ಲಿ ಆಶೀರ್ವಚನ ನೀಡಿದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸಾಸ್ತಾನ ಹೆಬ್ಟಾರಬೆಟ್ಟು ಚೆನ್ನಯ್ಯ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸ್ಥಳವಂದಿಗರಾದ ಶಂಕರ ಶೆಟ್ಟಿ ಹಾಗೂ ಕ್ಷೇತ್ರದ ಅರ್ಚಕ ಗುಲ್ಲ ಪೂಜಾರಿ ಅವರನ್ನು ಸಮ್ಮಾನಿಸಲಾಯಿತು. ನೂತನ ಸಭಾಂಗಣ, ಕಚೇರಿ ಮತ್ತು ಪಾಕಶಾಲೆಗಳನ್ನು ಉದ್ಘಾಟಿಸಲಾಯಿತು.
ಕುಂದಾಪುರ ಪುರಸಭೆ ಮಾಜಿ ಉಪಾಧ್ಯಕ್ಷ ರಾಜೀವ ಕೋಟ್ಯಾನ್, ಬನ್ನಾಡಿ ಗರೋಡಿ ಆಡಳಿತ ಮೊಕ್ತೇಸರ ಬಿ. ಪ್ರಭಾಕರ ಶೆಟ್ಟಿ, ಕಟಪಾಡಿ ಬಿಲ್ಲವ ಪರಿಷತ್ ಸಂಚಾಲಕ ನವೀನ್ ಅಮೀನ್ ಶಂಕರಪುರ, ಸ್ಥಳವಂದಿಗ ಮಂಜಯ್ಯ ಶೆಟ್ಟಿ ಬನ್ನಾಡಿ ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಜಗದೀಶ್ ಕೆಮ್ಮಣ್ಣು ಸ್ವಾಗತಿಸಿ, ಖಜಾಂಚಿ ವಿನಯ್ ಪೂಜಾರಿ, ಜಂಟಿ ಕಾರ್ಯದರ್ಶಿ ರಾಜು ಶ್ರೀಯಾನ್ ಸಮ್ಮಾನಿತರನ್ನು ಪರಿಚಯಿಸಿ, ಶಿಕ್ಷಕ ಸತೀಶ್ ವಡ್ಡರ್ಸೆ ಕಾರ್ಯಕ್ರಮ ನಿರೂಪಿಸಿದರು.
ಪುನಃ ಪ್ರತಿಷ್ಠೆ ಪ್ರಯುಕ್ತ ವಡ್ಡರ್ಸೆ ರಾಘವೇಂದ್ರ ಭಟ್ ಪೌರೋಹಿತ್ಯದಲ್ಲಿ ಧಾರ್ಮಿಕ ಕಾರ್ಯಕ್ರಮ, ಬ್ರಹ್ಮಕುಂಭಾ ಭಿಷೇಕ, ಅನ್ನಸಂತರ್ಪಣೆ ಬಳಿಕ ಗೀತಾ ಸಾಹಿತ್ಯ ಸಂಭ್ರಮ ನಡೆಯಿತು.