ನಂಜನಗೂಡು: ಸಂಸ್ಥೆಯಲ್ಲಿ 25ಕ್ಕೂ ಹೆಚ್ಚು ವರ್ಷ ಸೇವೆಸಲ್ಲಿಸಿದವರಿಗೆ ಕಾರುಗಳನ್ನು ನೀಡಿದ್ದ ನಗರದ ಸಿಟಿಜನ್ ಶಿಕ್ಷಣ ಸಂಸ್ಥೆಯು ಈಗ 2015-16ನೇ ಸಾಲಿನಲ್ಲಿ ಪಿಯುಸಿ ಯಲ್ಲಿ ಅತ್ಯುತ್ತಮ ಸಾಧನೆಗೈದ ಕಾಲೇಜಿನ ವಿದ್ಯಾರ್ಥಿಗೆ ಬೈಕ್ ನೀಡಿ ಅಭಿನಂದಿಸಿತು.
ಕಾಲೇಜಿನ ಆವರಣದಲ್ಲಿ ನಡೆದ ಸಮಾರಂಭದಲ್ಲಿ 2015-16ನೇ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ವಿಜಾnನ ವಿಭಾಗದಲ್ಲಿ ಶೇ. 97.80 ಅಂಕ ಪಡೆದ ಅಭಿಲಾಷಗೆ ಬೈಕ್, ವಾಣಿಜ್ಯ ವಿಭಾಗದಲ್ಲಿ ಶೇ.96.33 ಅಂಕ ಪಡೆದು ಕಾಲೇಜು ಹಾಗೂ ನಂಜನಗೂಡಿಗೆ ಹೆಸರು ತಂದ ವಿನುತಾ ಆರ್.ಭಾರದ್ವಾಜ್‌ಗೆ ಲ್ಯಾಪ್‌ಟಾಪ್ ನೀಡಿ ಕಾಲೇಜು ವತಿಯಿಂದ ಅಭಿನಂದಿಸಲಾಯಿತು. ಜೊತೆಗೆ ಕಳೆದ ಬಾರಿ ಪಿಯುಸಿಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ವಿಜೇತರಾದ 46 ವಿದ್ಯಾರ್ಥಿಗಳನ್ನು ಆಮಂತ್ರಿಸಿ ಗೌರವಿಸಲಾಯಿತು.
ಗುರು ಶಿಷ್ಯರ ನಡುವೆ ಜಾತಿ ಕಶ್ಮಲ ಬೇಡ: ಸಮಾರಂಭದಲ್ಲಿ ಮಾತನಾಡಿದ ಕಾಲೇಜಿನ ಜಂಟಿ ನಿರ್ದೇಶಕ ಜಯಪ್ರಕಾಶ್, ತಮ್ಮ ಕಾಲದಲ್ಲಿ ವಿಶ್ವವಿದ್ಯಾಲಯಗಳಲ್ಲಿ ತಾಂಡವ ವಾಡುತ್ತಿದ್ದ ಜಾತಿ ವ್ಯವಸ್ಥೆಯಿಂದ ರ್‍ಯಾಂಕ್ ಪಡೆಯುವುದಿರಲಿ ಪ್ರಥಮ ದರ್ಜೆ ಯಲ್ಲಿ ಉತ್ತೀರ್ಣವಾಗಲು ತಾವು ಹೆಣಗಾಡ ಬೇಕಿತ್ತು. ಶೋಷಣೆ ಇದ್ದಲ್ಲಿ ವಿದ್ಯಾರ್ಥಿಗಳ ಮನೋಸ್ಥೈರ್ಯ ಕುಗ್ಗುತ್ತದೆ ಎಂದ ಜಯಪ್ರಕಾಶ್, ಗುರು ಶಿಷ್ಯರ ಮಧ್ಯೆ ಜಾತಿಯ ಕಶ್ಮಲವಿರಬಾರದು ಎಂದರು.
ತಾಯಿ ಹಾಗೂ ಗುರುವಿನ ಆಶೋತ್ತರಗಳಿಗೆ ಭಂಗವಾಗದ ರೀತಿಯಲ್ಲಿ ವ್ಯಾಸಂಗ ಮಾಡುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಜಯಪ್ರಕಾಶ್, ಯಾವುದೇ ಶಿಕ್ಷಣ ಸಂಸ್ಥೆಯ ಸಾಧನೆಗೆ ಅಲ್ಲಿನ ಶಿಕ್ಷಕರು ಹಾಗೂ ಆಡಳಿತ ವರ್ಗದವರ ಬದ್ಧತೆ, ಪ್ರೇರಣೆ ಅತಿಮುಖ್ಯ. ರಾಜ್ಯದಲ್ಲಿ ಸಾವಿರಾರು ಶಿಕ್ಷಣ ಸಂಸ್ಥೆಗಳಿದ್ದರೂ ಸಿಟಿಜನ್ ಶಿಕ್ಷಣ ಸಂಸ್ಥೆ ಮಾತ್ರ ಎಲ್ಲರಿಗೂ ಮಾದರಿಯಾಗಿ ಹೊರಹೊಮ್ಮಿದೆ ಎಂದು ಶ್ಲಾ ಸಿದರು.
ಕಾಲೇಜಿನ ಪ್ರಾಚಾರ್ಯ ಪ್ರಸಾದ್ ಮಾತನಾಡಿ, ರಾಜ್ಯದಲ್ಲೇ ಅತಿ ಹೆಚ್ಚು ಮಕ್ಕಳು (5800) ಓದುತ್ತಿರುವ ದಾಖಲೆ ನಮ್ಮ ಸಂಸೆಗಿದೆ. ವಿದ್ಯಾಥಿಗಳಿಗೆ ಶೈಕ್ಷಣಿಕ ಸಮಸ್ಯೆ ಬಾರದಂತೆ ನೋಡಿಕೊಂಡಾಗ ಮಾತ್ರ ವಿದ್ಯಾರ್ಥಿಗಳಿಂದ ಹೆಚ್ಚಿನ ಸಾಧನೆ ನಿರೀಕ್ಷಿಸಲು ಸಾಧ್ಯ ಎಂದ ಪ್ರಾಚಾರ್ಯರು, ಅಂತಹ ವಾತಾವರಣ ನಿರ್ಮಿಸಲು ಆಡಳಿತ ಹಾಗೂ ಶಿಕ್ಷಕ ವೃಂದ ಸದಾ ತಮ್ಮೊಡನೆ ಕೈ ಜೊಡಿಸಿರುವುದೇ ಈ ಸಂಸ್ಥೆಯ ಹೆಗ್ಗಳಿಕೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷೆ ಮಸೂದಾ ಬೇಗಂ, ಕಾರ್ಯದರ್ಶಿ ನೂರ್ ಮಹಮದ್ ಆಲಿ, ಅನಿಯಾ, ನೂರ್‌ಫಾಜ್, ಪ್ರಾಚಾರ್ಯರಾದ ಮೈಥಲಿ ಲಕ್ಷ್ಮಣ, ಪ್ರಸಾದ್, ಪುಟ್ಟಸ್ವಾಮಿ, ಹೇನಾ ಕಣ್ಣನ್, ಕುತುಬ್ ತಾರಾ ಮುಂತಾದವರು ಉಪಸ್ಥಿತರಿದ್ದರು.