ಮಧುಗಿರಿ: ನರೇಗಾ ಯೋಜನೆಯಡಿ ಸಣ್ಣ ಮತ್ತು ಮಧ್ಯಮ ರೈತರಿಗೆ ಕೊಳವೆಬಾವಿ ಕೊರೆಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿಲ್ಲ. ಈ ಬಗ್ಗೆ ರೈತರಿಂದ ಬೇಡಿಕೆಯಿದ್ದು, ಇದನ್ನು ಮುಂದಿನ ದಿನಗಳಲ್ಲಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಕೆ.ಎಲ್.ಅತೀಕ್ ಅಹ್ಮದ್ ತಿಳಿಸಿದರು.
ಕುಡಿವ ನೀರಿಗೆ ಸಮಸ್ಯೆ: ಇಲ್ಲಿವರೆಗೂ ನರೇಗಾದಲ್ಲಿ ರಸ್ತೆ ಅಭಿವೃದ್ಧಿ, ಹೂಳು ತೆಗೆಯುವುದು ಹಾಗೂ ಚರಂಡಿ ನಿರ್ಮಾಣದಂತ ಕಾಮಗಾರಿಗೆ ಮಾತ್ರ ಸೀಮಿತವಾಗಿತ್ತು. ಆದರೆ, ರೇಷ್ಮೆ, ಮಾವು, ಸೀಬೆ, ಹಲಸು, ತೆಂಗಿನ ತೋಟ ನಿರ್ಮಾಣ ಹಾಗೂ ಪುನ ಶ್ಚೇತನಕ್ಕಾಗಿಯೂ ಅನುದಾನ ನೀಡುವ ಯೋಜನೆ ಯಿದ್ದು, ರೈತರಿಗೆ ಮಾಹಿತಿ ಕೊರತೆಯಿಂದ ಈ ಯೋಜನೆಯ ಲಾಭ ರೈತರಿಗೆ ಸಿಗುತ್ತಿಲ್ಲ. ಇದಕ್ಕಾಗಿ ಇಲಾಖೆಯಿಂದ ಸಚಿವರಾದ ಕೃಷ್ಣ ಬೈರೇಗೌಡರು ಪ್ರತಿ ಜಿಲ್ಲೆಗಳಲ್ಲಿ ಭೇಟಿ ನೀಡಿ ಅಧಿಕಾರಿಗಳಿಂದ ರೈತರಿಗೆ ಜಾಗೃತಿ ಮೂಡಿಸಿದ್ದು, 2019ಕ್ಕೆ ನರೇಗಾ ದಲ್ಲಿ ತೋಟಗಾರಿಕೆ ಬೆಳೆಗಳಿಗೆ ಹೆಚ್ಚಿನ ಅನುದಾನ ಹರಿದು ಬರಲಿದೆ.
ಜಿಲ್ಲೆಯ ಮಧುಗಿರಿ, ಪಾವಗಡ, ತುಮಕೂರು ತಾಲೂಕಿನಲ್ಲಿ ಭೀಕರ ಬರಗಾಲ ಎದು ರಾಗಿದ್ದು, ಕುಡಿಯುವ ನೀರಿಗೆ ಹೆಚ್ಚಿನ ಸಮಸ್ಯೆ ಯಾಗಿದೆ. ಆ ಸಮಸ್ಯೆ ಪರಿಹಾರಕ್ಕಾಗಿ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದ್ದು, ಹೆಚ್ಚಿನ ಹಾಗೂ ಮಿತಿಯಿಲ್ಲದ ಅನುದಾನ ಒದಗಿಸಿದೆ. ಇದರಿಂದಾಗಿ ಜನರ ಸಮಸ್ಯೆಗಳನ್ನು ಪರಿಹರಿಸಲು ನರೇಗಾ ಯೋಜನೆಗೆ ರಾಜ್ಯ ಸರ್ಕಾರ ಮುಂದಾಗಿದೆ ಎಂದರು.
ಅನುದಾನ ಹೆಚ್ಚಿಸಿ: ರೈತ ಅರುಣ್ ಮಾತನಾಡಿ, ನರೇಗಾದಲ್ಲಿ ರೇಷ್ಮೆ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಿಗೆ ಸಹಕಾರ ನೀಡುತ್ತಿದ್ದು, ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ನಾನು 4 ಎಕರೆಯಲ್ಲಿ ಹನಿ ನೀರಾವರಿ ಅಳವಡಿಸಿಕೊಂಡು ರೇಷ್ಮೆ ಬೆಳೆದಿದ್ದು, ಹೆಚ್ಚಿನ ಲಾಭದ ನಿರೀಕ್ಷೆಯಲ್ಲಿದ್ದೇನೆ. ಈಗಿರುವ ಅನು ದಾನವನ್ನು ಸ್ವಲ್ಪ ಹೆಚ್ಚಿಸಿದರೆ ಖಂಡಿತ ರೈತರು ತೋಟ ಗಾರಿಕೆ ಬೆಳೆಗಳತ್ತ ಮುಖ ಮಾಡುತ್ತಾನೆ ಎಂದರು.
Advertisement
ತಾಲೂಕಿನ ಕಸಬಾ ರಂಗನಹಳ್ಳಿಯಲ್ಲಿ ರೇಷ್ಮೆ ಇಲಾಖೆಯಿಂದ ನಡೆದಿರುವ ನರೇಗಾ ಕಾಮಗಾರಿ ರೇಷ್ಮೆ ಶೆಡ್ ಹಾಗೂ ರೇಷ್ಮೆ ಬೆಳೆ ವೀಕ್ಷಿಸಿ ಮಾತನಾಡಿದರು.
Related Articles
Advertisement
ತಾಪಂ ಇಒ ನಂದಿನಿ ಮಾತನಾಡಿ, ತಾಲೂಕಿನಲ್ಲಿ 52 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಯಿದ್ದು, ಎಲ್ಲಾ ಕಡೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಎಲ್ಲಿಯೂ ಸಮಸ್ಯೆ ಗಂಭೀರ ರೂಪ ಪಡೆಯದಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ರಾಮನಗರದಲ್ಲಿ ಬೇಡಿಕೆ: ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜು ಮಾತನಾಡಿ, ತಾಲೂಕಿನಲ್ಲಿ 1,186 ಎಕರೆ ಪ್ರದೇಶದಲ್ಲಿ ರೇಷ್ಮೆ ಕೃಷಿಯಿದ್ದು, 182 ಪ್ಲಾಂಟೇಷನ್ ಮಾಡಿದ್ದೇವೆ. ರೇಷ್ಮೇ ಶೆಡ್ ನಿರ್ಮಾಣ ಕ್ಕಾಗಿ 3 ಲಕ್ಷ ರೂ. ಸಬ್ಸಿಡಿ ನೀಡುತ್ತಿದ್ದು, ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲೇ ಮಧುಗಿರಿ ರೇಷ್ಮೆಗೆ ಹೆಚ್ಚಿನ ಬೇಡಿಕೆಯಿದ್ದು, ರೈತರಿಗೆ ಇಲಾಖೆಯಿಂದ ಮತ್ತಷ್ಟು ಸಹಕಾರ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಜಿಪಂ ಸಿಇಒ ಶುಭಾ ಕಲ್ಯಾಣ್, ಡಿಎಸ್-2 ಕೃಷ್ಣಪ್ಪ, ಸಹಾಯಕ ನಿರ್ದೇಶಕ ದೊಡ್ಡ ಸಿದ್ದಪ್ಪ, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜು, ಪಂಚಾಯತ್ ರಾಜ್ ಇಲಾಖೆ ಇಇ ಸುರೇಶ್‌ರೆಡ್ಡಿ, ಕುಡಿಯುವ ನೀರು ಸರಬರಾಜು ಇಲಾಖೆ ಎಇಇ ಹೊನ್ನೇಶಪ್ಪ, ಎಇ ರಾಮದಾಸ್, ಗ್ರಾಪಂ ಅಧ್ಯಕ್ಷೆ ಮಂಜುಳಾದೇವಿ, ಪಿಡಿಒ ರೂಪಾ, ಕಾರ್ಯದರ್ಶಿ ಗಂಗಾಧರ್, ಫಲಾನುಭವಿ ರೈತ ಮಹಿಳೆ ಲಕ್ಷ್ಮಮ್ಮ ಹಾಗೂ ಇತರರು ಹಾಜರಿದ್ದರು.