ಇನ್ನೂ ಹಸಿರು ನಿಶಾನೆ ದೊರೆತಿಲ್ಲ.
Advertisement
ವರ್ಚುವಲ್ ಸೂಪರವಿಷನ್ ಸಹಾಯ ದೊಂದಿಗೆ ಪದವಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ಸುಲಭವಾಗಿ ಪರೀಕ್ಷೆ ನಡೆಸಬಹುದು. ವಿದ್ಯಾರ್ಥಿಗಳು ನೋಟ್‌ಪ್ಯಾಡ್ ಅಥವಾ ಮೊಬೈಲ್ ಬಳಸಿ ಉತ್ತರವನ್ನು ಸರ್ವರ್‌ಗೆ ಅಪ್ಲೋಡ್ ಮಾಡಬಹುದು. ವಿದ್ಯಾರ್ಥಿಗಳು ಮನೆಯಲ್ಲೇ ಇದ್ದು ಉತ್ತರ ಪತ್ರಿಕೆಯಲ್ಲಿ ಉತ್ತರ ನಮೂದಿಸಿ ವೆಬ್ ಸ್ಕಾನರ್ಸ್ ಅಥವಾ ಕ್ಯಾಮರಾದಮೂಲಕ ಅಪ್ ಮಾಡಬಹುದು. ಈ ವೇಳೆ ಬಹು ಆಯ್ಕೆಯ ಪ್ರಶ್ನೆಗಳು ಮತ್ತು ಒಎಂಆರ್ ಸೀಟುಗಳನ್ನು ಉಪಯೋಗಿಸಬಹುದಾಗಿದೆ ಎಂದು ಪ್ರಸ್ತಾವನೆಯಲ್ಲಿ ತಿಳಿಸಿದೆ. ಇದರ ಜತೆಗೆ ಆನ್‌ಲೈನ್ ಪರೀಕ್ಷೆಗೆ ಪೂರಕವಾಗುವಂತೆ ನಿಗದಿತ ಪರೀಕ್ಷಾ ಕೇಂದ್ರದಲ್ಲಿ ಅಗತ್ಯ ಕಣ್ಗಾಲಿನೊಂದಿಗೆ ನಡೆಸಬಹುದು. ಆಯಾ ಕಾಲೇಜುಗಳಲ್ಲೇ ಪರೀಕ್ಷೆ ನಡೆಸ ಬಹುದಾಗಿದೆ ಎಂದು ಉಲ್ಲೇಖೀಸಿದೆ.
ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪರ್ಯಾಯವಾಗಿ ಶೇ.50ರಷ್ಟು ಆಂತರಿಕ ಮೌಲ್ಯಮಾಪನ (ತರಗತಿ ಪರೀಕ್ಷೆ ಅಥವಾ ಅಸೈನ್ಮೆಂಟ್ ಆಧಾರದಲ್ಲಿ), ಶೇ.20ರಷ್ಟು ಪ್ರಸೆಂಟೇಷನ್ ಅಥವಾ ಸೆಮಿನರ್ ಮೂಲಕ ಮತ್ತು ಉಳಿದ ಶೇ.30ರಷ್ಟು ಅಂಕಗಳನ್ನು ಆನ್‌ಲೈನ್ ಮೂಲಕ ಒಎಂಆರ್ ಉತ್ತರ ಪತ್ರಿಕೆ ಬಳಸಿ ಅಥವಾ ತರೆದ ಪುಸ್ತಕ ಪರೀಕ್ಷೆ ಅಥವಾ ಮುಕ್ತ ಆಯ್ಕೆ ಪರೀಕ್ಷೆ ಮೂಲಕ ಅಂಕ ನೀಡಬಹುದಾಗಿದೆ. ಇದ್ಯಾವುದು ಸಾಧ್ಯವಾಗದೇ ಇದ್ದಾಗ ಹಿಂದಿನ ಪರೀಕ್ಷೆ ಗಳ ಅಂಕದ ಆಧಾರದ ಮೇಲೆ ಅಂತಿಮ ವರ್‌ಷದ ಪದವಿ, ಸ್ನಾತಕೋತ್ತರ ಪದವಿ ಫಲಿತಾಂಶ ನೀಡಬಹುದಾಗಿದೆ ಎಂದು ಪ್ರಸ್ತಾವನೆಯಲ್ಲಿ ತಿಳಿಸಿದೆ. ಪದವಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ಪರೀಕ್ಷೆ ಮಾಡಬಹುದು. ಇದಕ್ಕೆ ಸಂಬಂಧಿಸಿದಂತೆ ವಿಸ್ತೃತ ಪ್ರಸ್ತಾವನೆಯನ್ನು ಉನ್ನತ ಶಿಕ್ಷಣ ಇಲಾಖೆಗೆ ಸಲ್ಲಿಸಿದ್ದೇವೆ. ಅಲ್ಲಿಂದ ಯಾವುದೇ ಉತ್ತರ ಬಂದಿಲ್ಲ. ಈಗಾಗಲೇ ಯಶಸ್ವಿಯಾಗಿ ಆನ್‌ಲೈನ್ ತರಗತಿಗಳು ನಡೆದಿರುವುದರಿಂದ ಪರೀಕ್ಷೆಯನ್ನು ಆನ್ಲ„ನ್‌ನಲ್ಲೇ ಮಾಡಬಹುದಾಗಿದೆ.
● ಪ್ರೊ.ಕೆ.ಆರ್.ವೇಣುಗೋಪಾಲ್, ಕುಲಪತಿ, ಬೆಂಗಳೂರು ವಿವಿ
Related Articles
Advertisement