ಗುಡಿಬಂಡೆ: ತಾಲೂಕಿನ ಪ್ರತಿ ಗ್ರಾಪಂ 1ರಂತೆ ಸುಮಾರು 1 ರಿಂದ 1.5 ಕೋಟಿ ರೂ. ವೆಚ್ಚದ 7 ಹೊಸ ಕೆರೆಗಳ ನಿರ್ಮಾಣಕ್ಕೆ ಸಣ್ಣ ನೀರಾವರಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಎಸ್.ಎನ್.ಸುಬ್ಟಾರೆಡ್ಡಿ ತಿಳಿಸಿದರು.
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಎಸ್.ಸಿ.ಪಿ.ಟಿ.ಎಸ್.ಪಿ ಹಾಗೂ ಶಾಲಾ ಕಟ್ಟಡಗಳ, ಲೋಕೋಪಯೋಗಿ ಇಲಾಖೆಯ ಸುಮಾರು 4 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ತಲೆಕೆಡಿಸಿಕೊಳ್ಳುವುದಿಲ್ಲ: ಬಾಗೇಪಲ್ಲಿ ತಾಲೂಕಿಗೆ ಹೋಲಿಕೆ ಮಾಡಿದರೆ ಗುಡಿಬಂಡೆ ತಾಲೂಕಿನಲ್ಲಿ ಹೆಚ್ಚು ಅಭಿವೃದ್ಧಿ ಕೆಲಸಗಳು ಆಗಿವೆ. ಗುಡಿಬಂಡೆ ತಾಲೂಕಿನ ತಾಲೂಕು ಕಚೇರಿ, ನ್ಯಾಯಾಲಯ ಕಟ್ಟಡ, ಬಸ್ ನಿಲ್ದಾಣ, ಮುಖ್ಯರಸ್ತೆ, ವಸತಿ ಶಾಲೆಗಳು ಸೇರಿದಂತೆ ಅನೇಕ ಹೊಸ ಕಟ್ಟಡಗಳು ನಿರ್ಮಾಣವಾಗಿವೆ. ಯಾರೋ ಏನೋ ಮಾತನಾಡುತ್ತಾರೆಂದರೆ ಅದಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.
29 ಕಾಮಗಾರಿಗಳಿಗೆ ಚಾಲನೆ: ವರ‌್ಲಕೊಂಡ ಗ್ರಾಮ ಪಂಚಾಯಿತಿಯ ಬತ್ತಲಹಳ್ಳಿ ಎಸ್.ಟಿ ಕಾಲೋನಿಗೆ ಕಾಂಕ್ರಿಟ್ ರಸ್ತೆ 6 ಲಕ್ಷ, ವರ‌್ಲಕೊಂಡ ಗ್ರಾಮದ ಎಸ್.ಸಿ ಕಾಲೋನಿ ಸಿಮೆಂಟ್ ಕಾಂಕ್ರಿಟ್ ರಸ್ತೆ 6 ಲಕ್ಷ, ವರ‌್ಲಕೊಂಡ ಗ್ರಾಮದ ಎಸ್.ಟಿ ಕಾಲೋನಿ ಚರಂಡಿ ಮತ್ತು ರಸ್ತೆ ನಿರ್ಮಾಣಕ್ಕೆ 26.44 ಲಕ್ಷ, ಲಕ್ಷ್ಮೀಸಾಗರ ಗ್ರಾಮದ ಎಸ್.ಸಿ ಕಾಲೋನಿ ರಸ್ತೆಗೆ 15 ಲಕ್ಷ, ಮುದ್ದರೆಡ್ಡಿಹಳ್ಳಿ ಗ್ರಾಮದ ಎಸ್.ಸಿ ಕಾಲೋನಿ ರಸ್ತೆಗೆ 6 ಲಕ್ಷ, ನಲ್ಲಮದ್ದಿರೆಡ್ಡಿಹಳ್ಳಿ ಗ್ರಾಮದ ಎಸ್.ಟಿ ಕಾಲೋನಿ ರಸ್ತೆಗೆ 8 ಲಕ್ಷ.
ವೀರರಾಹುತನಹಳ್ಳಿ ಗ್ರಾಮದ ಎಸ್.ಸಿ ಕಾಲೋನಿ ರಸ್ತೆಗೆ 27 ಲಕ್ಷ, ಸೋಮೇನಹಳ್ಳಿ ಸ.ಹಿ.ಪ್ರಾ. ಶಾಲೆ ಕೊಠಡಿ ನಿರ್ಮಾಣಕ್ಕೆ 21.20 ಲಕ್ಷ, ಗುಮ್ಮರೆಡ್ಡಿಹಳ್ಳಿ ಗ್ರಾಮದ ಎಸ್.ಟಿ ಕಾಲೋನಿ ರಸ್ತೆಗೆ 12.61 ಲಕ್ಷ, ದಪ್ಪರ್ತಿ ಗ್ರಾಮದ ಎಸ್.ಟಿ ಕಾಲೋನಿ ರಸ್ತೆ ಮತ್ತು ಚರಂಡಿಗೆ 7 ಲಕ್ಷ, ಗವಿಕುಂಟಹಳ್ಳಿ ಗ್ರಾಮದ ಎಸ್.ಟಿ ಕಾಲೋನಿ ಸಿಮೆಂಟ್ ರಸ್ತೆ ಮತ್ತು ಚರಂಡಿಗೆ 30 ಲಕ್ಷ.
ಗುಡಿಬಂಡೆ ಅಮಾನಿಬೈರಸಾಗರ ಕೆರೆ ಕೋಡಿಗೆ ರಸ್ತೆ ಅಭಿವೃದ್ಧಿಗೆ 22 ಲಕ್ಷ ಮತ್ತು ಬುಳ್ಳಸಂದ್ರ ಎಸ್.ಸಿ ಕಾಲೋನಿಯಿಂದ ಕಂಬಾಲಹಳ್ಳಿ ಎಸ್.ಸಿ ಕಾಲೋನಿಗೆ ರಸ್ತೆ ಅಭಿವೃದ್ಧಿ ಗೆ 39 ಲಕ್ಷ ಒಟ್ಟು 2.26 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಭಾನುವಾರ ಚಾಲನೆ ನೀಡಿದರು. ಉಳಿದ 2.21 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ವಾರದೊಳಗೆ ಚಾಲನೆ ನೀಡಲಿದ್ದೇವೆ ಎಂದರು.
ತಾಪಂ ಅಧ್ಯಕ್ಷೆ ವರಲಕ್ಷ್ಮೀ, ಉಪಾಧ್ಯಕ್ಷ ಬೇರಾರೆಡ್ಡಿ, ಸದಸ್ಯ ಆದಿನಾರಾಯಣಪ್ಪ, ಕೋಚಿಮುಲ್ ನಿರ್ದೇಶಕ ಕೆ.ಅಶ್ವತ್ಥರೆಡ್ಡಿ, ಮುಖಂಡರಾದ ಅಮರ್, ಕೃಷ್ಣೇಗೌಡ, ಕೆ.ಟಿ.ಹರಿ, ಚಿಕ್ಕನಂಜುಂಡ, ಮುರಳಿ, ವೆಂಕಟರೋಣಪ್ಪ, ಲೋಕೋಪಯೋಗಿ ಇಲಾಖೆಯ ಎಇಇ ಕೆ.ಎಸ್.ರಾಮಲಿಂಗಾರೆಡ್ಡಿ, ಜೆ.ಇ.ಪೂಜಪ್ಪ, ವರ‌್ಲಕೊಂಡ ಪಿಡಿಒ ಫಣೀಂದ್ರ, ಚೆಂಡೂರು ಮೂರ್ತಿ, ಜಗನ್ ಕುಮಾರ್, ಸೇರಿದಂತೆ ವರ‌್ಲಕೊಂಡ, ಸೋಮೇನಹಳ್ಳಿ, ಎಲ್ಲೋಡು ಗ್ರಾಮಗಳ ಮುಖಂಡರು, ಕಾಂಗ್ರೆಸ್ ಕಾರ್ಯಕರ್ತರು ಇದ್ದರು.