ಲಕ್ನೋ: ಪ್ರವಾದಿಗಳ ಬಗ್ಗೆ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಹೇಳಿಕೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಹಿಂಸಾಚಾರ ಸಂಬಂಧ ಈವರೆಗೆ ಉತ್ತರ ಪ್ರದೇಶದಲ್ಲಿ 415 ಮಂದಿಯನ್ನು ಬಂಧಿಸಲಾಗಿದೆ.
20 ಎಫ್ಐಆರ್‌ಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ರಾಜ್ಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿರುವ ಪ್ರಶಾಂತ್ ಕುಮಾರ್ ಭಾನುವಾರ ತಿಳಿಸಿದ್ದಾರೆ.
ಜೂ. 3ರಂದು ಕಾನ್ಪುರ ಜಿಲ್ಲೆಯಲ್ಲಿ ಹಾಗೂ ಜೂ.10ರಂದು 9 ಜಿಲ್ಲೆಗಳಲ್ಲಿ ಪ್ರತಿಭಟನೆ ವೇಳೆ ಹಿಂಸಾಚಾರ ನಡೆದಿದೆ. ಪ್ರಯಾಗ್‌ರಾಜ್ ಜಿಲ್ಲೆಯಲ್ಲಿ 97 ಮಂದಿ, ಶಹರನ್ಪುರದಲ್ಲಿ 85, ಕಾನ್ಪುರದಲ್ಲಿ 58, ಅಂಬೇಡ್ಕರ್ ನಗರದಲ್ಲಿ 41, ಮೊರಾದಾಬಾದ್‌ನಲ್ಲಿ 40, ಹತ್ರಾಸ್ ನಲ್ಲಿ 35, ಫಿರೋಜಾಬಾದ್‌ನಲ್ಲಿ 20, ಖೇರಿಯಲ್ಲಿ 8, ಆಲಿಗಢದಲ್ಲಿ 6 ಮತ್ತು ಜಲೌನ್ ಜಿಲ್ಲೆಯಲ್ಲಿ 5 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.