Advertisement

ಪ್ರವಾದಿ ನಿಂದನೆ: ಪಾಕ್‌ನಲ್ಲಿ ವ್ಯಕ್ತಿಯ ಕೊಂದ ಬಾಲಕ!

01:41 AM Jun 25, 2024 | Team Udayavani |

ಲಾಹೋರ್‌: ಪಾಕಿಸ್ಥಾನದ ಪಂಜಾಬ್‌ ಪ್ರಾಂತದಲ್ಲಿ ದೈವನಿಂದನೆ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿ ಸಿದಂತೆ ಬಾಲಕ ವ್ಯಕ್ತಿಯೊಬ್ಬನನ್ನು ಇರಿದು ಕೊಂದಿದ್ದಾನೆ. ಅಸುನೀಗಿದ ವ್ಯಕ್ತಿ ಶಿಯಾ ಸಮುದಾಯಕ್ಕೆ ಸೇರಿದವನು ಎನ್ನಲಾಗಿದೆ.

Advertisement

ಪ್ರವಾದಿ ಮೊಹಮ್ಮದ್‌ ಅವರ ವ್ಯಕ್ತಿ ನಿಂದನೆಯ ಮಾತುಗಳನ್ನು ಆಡಿದ್ದಾನೆ. ಅದರ ವಿರುದ್ಧ ಬಾಲಕನ ತಂದೆ ಮತ್ತು ಇತರರು ಆಕ್ಷೇಪಿಸಿದ್ದಾರೆ. ಇದರಿಂದ ರೊಚಿಗೆದ್ದ ಬಾಲಕ 55 ವರ್ಷದ ವ್ಯಕ್ತಿಯನ್ನು ಇರಿದು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕನನ್ನು ಸೆರೆ ಹಿಡಿಯಲು ತಂಡವನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಪಾಕಿಸ್ಥಾನದಲ್ಲಿ ದೈವನಿಂದನೆ ಘಟನೆಗೆ ಸಂಬಂಧಿಸಿದಂತೆ 4 ದಿನಗಳಲ್ಲಿ 2ನೇ ಹತ್ಯೆ ಘಟನೆ ಇದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next