Advertisement
ಕರ್ನಾಟಕ ಮುನ್ಸಿಪಾಲಿಟಿ ಕಾರ್ಪೊರೇಷನ್ (ಕೆಎಂಸಿ) ಕಾಯ್ದೆಯ ಪ್ರಕಾರ ಸ್ಥಳೀಯ ಸಂಸ್ಥೆಗಳುಪ್ರತಿ ಮೂರು ವರ್ಷಕ್ಕೊಮ್ಮೆ ಆಸ್ತಿ ತೆರಿಗೆ ಹೆಚ್ಚಳಮಾಡಬಹುದಾಗಿದೆ. ಆದರೆ, ನಗರದಲ್ಲಿ 2008ರಿಂದಆಸ್ತಿ ತೆರಿಗೆ ಹೆಚ್ಚಳ ಮಾಡಿಲ್ಲ. ಹೀಗಾಗಿ, ಪಾಲಿಕೆಯ ನಿರ್ವಹಣೆ ಹಾಗೂ ಆಡಳಿತಾತ್ಮಕ ವೆಚ್ಚಗಳಿಗೆ ಸಮಸ್ಯೆಯಾಗುತ್ತಿದೆ.
Related Articles
Advertisement
ಮಾರ್ಗಸೂಚಿ ದರ ಅಥವಾ ಕ್ಯಾಪಿಟಲ್ ವ್ಯಾಲ್ಯೂಸಿಸ್ಟಮ್ (ಜಾಗಕ್ಕೆ ಅಥವಾ ಮನೆ ಕಟ್ಟಿದ್ದರೆ, ಮನೆ ನಿರ್ಮಾಣಕ್ಕೆ ಬಳಸಲಾದ ವಸ್ತುಗಳ ಆಧಾರದ ಮೇಲೆ) ಆಸ್ತಿ ತೆರಿಗೆ ಹೆಚ್ಚಳ ಮಾಡಬಹುದು ಎಂಬಬಗ್ಗೆ ಚರ್ಚೆ ನಡೆದಿತ್ತು. ಆದರೆ, ಈ ಎರಡೂ ಮಾದರಿಯೂ 400ರಿಂದ 500 ಪ್ರತಿಶತ ಆಸ್ತಿ ತೆರಿಗೆಹೆಚ್ಚಳವಾಗುವ ಸಾಧ್ಯತೆ ಇದೆ. ಹೀಗಾಗಿ, ಈ ಎರಡೂಮಾದರಿಯ ಮೇಲೆ ಆಸ್ತಿ ತೆರಿಗೆ ಹೆಚ್ಚಳ ಮಾಡುವ ಪ್ರಸ್ತಾವನೆಕೈಬಿಡಲಾಗಿದೆ.
ಕೋವಿಡ್ ದಿಂದ ಆರ್ಥಿಕ ಸಂಕಷ್ಟ ಹಾಗೂ ಬಿಬಿಎಂಪಿ ಚುನಾವಣೆಯ ಹೊಸ್ತಿಲಿನಲ್ಲಿ ಇರುವುದ ರಿಂದ ಈ ಸಂದರ್ಭದಲ್ಲಿ ಆಸ್ತಿ ತೆರಿಗೆ ಹೆಚ್ಚಳ ಮಾಡುವ ಸಾಧ್ಯತೆ ಇಲ್ಲ. ಆದರೆ, ಮುಂದಿನ ದಿನಗಳಲ್ಲಿ ಆಸ್ತಿ ತೆರಿಗೆ ಹೆಚ್ಚಳ ಮಾಡಬೇಕಾದರೆ ಏನು ಸಿದ್ಧತೆ ಮಾಡಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಚರ್ಚೆ ನಡೆದಿದ್ದು, ತಜ್ಞರ ಸಮಿತಿ ರಚನೆ ಆಗಿದೆ. ಸಮಿತಿಯು ಪ್ರತಿ ವಲಯದಿಂದ 10 ಆಸ್ತಿಗಳನ್ನುಆಯ್ಕೆ ಮಾಡಿಕೊಂಡು ಹಾಲಿ ಮತ್ತು ಮುಂದೆ ಆಸ್ತಿತೆರಿಗೆ ಹೆಚ್ಚಳ ಮಾಡಿದರೆ,ಅದರ ಪ್ರಮಾಣ ಎಷ್ಟಾಗಲಿದೆ, ಈ ರೀತಿ ಮಾಡುವುದರಿಂದ ಪಾಲಿಕೆಗೆ ಎಷ್ಟು ಆದಾಯ ಬರಲಿದೆ. ಮುಖ್ಯವಾಗಿ ಇದು ಸಾರ್ವಜನಿಕರಿಗೆ ಕಟ್ಟಲು ಸಾಧ್ಯವೇ ಎಂಬ ಬಗ್ಗೆ ಕಮಿಟಿ ವರದಿ ನೀಡಲಿದೆ ಎಂದು ಮೂಲಗಳು ತಿಳಿಸಿವೆ.
ಆಸ್ತಿ ತೆರಿಗೆ ಹೆಚ್ಚಳ ಪ್ರಸ್ತಾವನೆ ಏಕೆ?: ಪಾಲಿಕೆ ಖರ್ಚುಗಳು ಅವಲಂಬಿತವಾಗಿರುವುದು ಆಸ್ತಿ ತೆರಿಗೆಯ ಮೇಲೆ. 2008ರಲ್ಲಿ ಆಸ್ತಿ ತೆರಿಗೆ ಹೆಚ್ಚಳವಾದ ಸಂದರ್ಭದಲ್ಲಿ 10ರಿಂದ 12 ಸಾವಿರ ಆಸ್ತಿ ತೆರಿಗೆ ಕಟ್ಟುತ್ತಿದ್ದವರು ಇಂದಿಗೂ ಅಷ್ಟೇಪಾವತಿ ಮಾಡುತ್ತಿದ್ದಾರೆ. ಅದೇ ಆಸ್ತಿಗೆ ಈಗ ಮಾರುಕಟ್ಟೆಯ ಮೌಲ್ಯ 19-20 ಸಾವಿರ ರೂ. ಇದೆ. ಅಲ್ಲದೆ, ಪಾಲಿಕೆಯ ವೆಚ್ಚ ಹಾಗೂ ನಿರ್ವಹಣೆ ಸೇರಿದಂತೆ ಹೊಸ ಯೋಜನೆ, ಕಾಮಗಾರಿಗಳಿಗೂ ಹಣಕಾಸು ಕೊರತೆ ಇದೆ. ಹೀಗಾಗಿ,ಆಸ್ತಿ ತೆರಿಗೆಹೆಚ್ಚಳ ಪ್ರಸ್ತಾವನೆ ಮುನ್ನೆಲೆಗೆ ಬಂದಿದೆ.
ಗರದಲ್ಲಿ ಆಸ್ತಿ ತೆರಿಗೆ ಹೆಚ್ಚಳ ಮಾಡುವ ಪ್ರಸ್ತಾವನೆಇದೆ. ಈ ಪ್ರಸ್ತಾವನೆಯ ಆಧಾರದ ಮೇಲೆ ಮುಂದಿನ ಕ್ರಮಕೈಗೊಳ್ಳಲಾಗುವುದು. ಅಲ್ಲದೆ, ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರಿಂದಆಸ್ತಿ ತೆರಿಗೆ ವಸೂಲಿ ಮಾಡುವುದು ಹಾಗೂ ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದವರನ್ನು ವ್ಯಾಪ್ತಿಗೆ ತರಲು ಆದ್ಯತೆಯ ಮೇಲೆ ಕ್ರಮವಹಿಸಲಾಗುತ್ತಿದೆ. –ಗೌರವ್ ಗುಪ್ತಾ, ಬಿಬಿಎಂಪಿಯ ಆಡಳಿತಾಧಿಕಾರಿ
ಹಿತೇಶ್ ವೈ