ಬೆಂಗಳೂರು: ನಗರದ ಪ್ರತಿಷ್ಠಿತ ಮಂತ್ರಿ ಮಾಲ್ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿ ದ್ದರಿಂದ ಸೋ ಮವಾರ ಬಿಬಿಎಂಪಿ ಸಿಬ್ಬಂದಿ ಮತ್ತೆ ಆ ಮಾಲ್ ಅನ್ನು ಜಪ್ತಿ ಮಾಡಿದರು. ಕೇವಲ ತಿಂಗಳ ಅಂತರದಲ್ಲಿ ಮಂತ್ರಿಮಾಲ್ ಜಪ್ತಿ ಮಾಡುತ್ತಿರುವುದು ಇದು ಎರಡನೇ ಬಾರಿ ಆಗಿದೆ.
ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಹಿನ್ನೆಲೆ ನವೆಂಬರ್ ಮಧ್ಯೆದಲ್ಲಿ ಮಲ್ಲೇ ಶ್ವರದ ಮಂತ್ರಿ ಮಾಲ್‌ಗೆ ಬೀಗ ಹಾಕಲಾಗಿತ್ತು. ಮತ್ತೆ ಮಧ್ಯಾ ಹ್ನದ ನಂತರ ಮನವಿ ಮೇರೆಗೆ 15 ದಿನಗಳ ಗಡುವು ನೀಡಿ ತೆರವುಗೊಳಿಸಲಾಗಿತ್ತು. ಈಗ ಗಡುವು ಮೀರಿದ್ದ ರಿಂದ 27.22 ಕೋಟಿ ರೂ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದರಿಂದ ಮತ್ತೆ ಜಪ್ತಿ ಮಾಡಲಾಗಿದೆ.
ಬಿಬಿಎಂಪಿ ಕಾಯ್ದೆ ಅನ್ವಯ ಯಾವುದೇ ಆಸ್ತಿ ಮಾಲಿಕ ಸಮ ರ್ಪಕ ಆಸ್ತಿ ತೆರಿಗೆ ಪಾವತಿಸದೇ ಬಾಕಿ ಉಳಿದಿ ಕೊಂಡಲ್ಲಿ ಕಂದಾಯ ಅಧಿಕಾರಿಗಳು ನೋಟಿಸ್ ಜಾರಿಗೊಳಿಸಬೇಕು. ಅದರ ನಂತರವೂ ತೆರಿಗೆ ಪಾವತಿಸುವಲ್ಲಿ ವಿಫಲ ವಾದರೆ ಚರಾಸ್ತಿಗಳನ್ನು ವಶಕ್ಕೆ ಪಡೆಯಲು ಅವಕಾಶವಿದೆ. ಅದರಂತೆ, ಹಲವು ಬಾರಿ ನೋಟಿಸ್ ನೀಡಿ, ಗಡುವು ಕೊಟ್ಟರೂ ತೆರಿಗೆ ಪಾವತಿಸದ ಹಿನ್ನೆಲೆ ಈಗ ಮಾಲ್‌ನ್ನು ಬಂದ್ ಮಾಡಿ ವಶಕ್ಕೆ ಪಡೆದಿದೆ.
ಇದನ್ನೂ ಓದಿ: ಎರಡೂವರೆ ವರ್ಷದ ಮಗುವಿನ ಮೇಲೆ ಅತ್ಯಾಚಾರ; ಒಂದು ತಿಂಗಳೊಳಗೆ ತೀರ್ಪು ನೀಡಿದ ಕೋರ್ಟ್
ಒಂದು ವಾರ ದವರೆಗೆ ವಶಕ್ಕೆ ಪಡೆದಿರುವುದನ್ನು ಮುಂದುವರೆಸಲಾಗುತ್ತದೆ. ಆಗಲೂ, ತೆರಿಗೆ ಪಾವತಿಸಲು ಸಾಧ್ಯವಾಗದಿದ್ದರೆ, ಚರಾಸ್ತಿ ಗಳನ್ನು ವಶಕ್ಕೆ ಪಡೆಯಲಾಗುತ್ತದೆ ಎಂದು ಪಶ್ಚಿಮ ವಲ ಯದ ಜಂಟಿ ಆಯುಕ್ತ ಶಿವಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಮಂತ್ರಿಮಾಲ್ 2018-19ನೇ ಸಾಲಿನಿಂದ ಆಸ್ತಿ ತೆರಿಗೆ ಪಾವತಿಸದೇ ಸುಸ್ತಿದಾರ ಆಗಿದೆ. 2021ರ ಸೆ. 9ರಂದು ಮಾಲ್‌ಗೆ ಬೀಗ ಹಾಕಿ, ತೆರಿಗೆ ವಸೂಲಿಗೆ ಮುಂದಾದಾಗ ಐದು ಕೋಟಿ ರೂ. ಡಿಮ್ಯಾಂಡ್ ಡ್ರಾಫ್ಟ್ (ಡಿಡಿ) ಪಾವತಿಸಿ ಅ. 31ರ ಒಳಗೆ ಉಳಿದ ಹಣ ಪಾವತಿ ಸುವುದಾಗಿ ಮನವಿ ಮಾಡಿದ್ದರು. ಅದರಂತೆ ಬೀಗ ತೆರವುಗೊಳಿಸಿ, ಅವಕಾಶ ಕಲ್ಪಿಸಲಾಗಿತ್ತು. ಮತ್ತೆ ಗಡುವು ಮೀರಿದ್ದರಿಂದ ನವೆಂಬರ್‌ನಲ್ಲಿ ಬೀಗ ಹಾಕಲಾಗಿತ್ತು ಆಗಲೂ ಮನವಿ ಮೇರೆಗೆ ಅವಕಾಶ ನೀಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.