Advertisement

ಕೊಚ್ಚಿ,ಕೂಟನ್ನಾಡ್‌-ಮಂಗಳೂರು,ಬೆಂಗಳೂರು ಗ್ಯಾಸ್‌ ಪೈಪ್‌ಲೈನ್‌ ಕಾಮಗಾರಿಯ ಸೊತ್ತು ಕಳವು

09:58 PM Mar 13, 2023 | Team Udayavani |

ಉಳ್ಳಾಲ: ಕೊಚ್ಚಿ,ಕೂಟನ್ನಾಡ್‌- ಮಂಗಳೂರು,ಬೆಂಗಳೂರು ಅಂತರಾಜ್ಯ ಗ್ಯಾಸ್‌ ಪೈಪ್‌ಲೈನ್‌ ಕಾಮಗಾರಿಯ ರೂ.30 ಲಕ್ಷ ಬೆಲೆಯ ಸೊತ್ತುಗಳನ್ನು ಕಳವು ನಡೆಸಿರುವ ಘಟನೆ ಹರೇಕಳ ಗ್ರಾಮದ ಇನೋಳಿ ಎಂಬಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

Advertisement

ಐಎಲ್‌ಆಂಡ್‌ಎಫ್‌ಎಸ್‌ ಕಂಪೆನಿ ಕಾಮಗಾರಿಯನ್ನು ನಡೆಸುತ್ತಿದ್ದು, ಕಂಪನಿಯ ಎಡ್ಮಿನ್‌ ಆಫೀಸರ್‌ ಸತೀಶ್‌ ಪಾಲ್‌ ಎಂಬವರು ನೀಡಿರುವ ದೂರಿನಂತೆ ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 2019ರ ಮೇ.19 ರಿಂದ ಫೆ.20ರ ವರೆಗೆ ಕಾಮಗಾರಿಗಳು ನಡೆದಿತ್ತು. ಈ ಸಮಯ ಸೈಟ್‌ ನಲ್ಲಿ ಕಾಮಗಾರಿ ನಡೆಸುವ ಸಾಮಗ್ರಿಗಳನ್ನು ದಾಸ್ತಾನಿರಿಸಲಾಗಿತ್ತು. 2020 ರ ಮಾ.21 ರಿಂದ 21ರವರೆಗೆ ನಿರ್ವಹಣೆಯ ಅವಧಿಯಿದ್ದು, ಬಳಿಕ ಕೋವಿಡ್‌ -19 ಇರುವುದರಿಂದ ವಸ್ತುಗಳನ್ನು ಹಾಗೆಯೇ ಇರಿಸಲಾಗಿತ್ತು. ಇದರಲ್ಲಿ ಬ್ರೇಕ್‌ ಟ್ಯಾಂಕ್‌ -1, 24 ಇಂಚುಗಳ 45 ಮೀ. ಉದ್ದದ ಕಾರ್ಬನ್‌ ಸ್ಟೀಲ್‌ ಪೈಪ್‌ , 3- ಮಡ್‌ ಮೇಟ್‌ ಸಾಗಿಸಲು ಅಸಾಧ್ಯವಾದ ಹಿನ್ನೆಲೆಯಲ್ಲಿ ಅಲ್ಲಿಯೇ ಇರಿಸಲಾಗಿತ್ತು. ಇದನ್ನು 2021ರ ನ.3 ರಿಂದ ಡಿ.31ರ ಮಧ್ಯದಲ್ಲಿ ಕಳ್ಳರು ಕಳವು ನಡೆಸಿದ್ದಾರೆ. ಈ ಬಗ್ಗೆ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕರಲ್ಲಿ, ಸಬ್‌ ಗುತ್ತಿಗೆದಾರರಲ್ಲಿ ವಿಚಾರಿಸಿದರೂ ಈವರೆಗೆ ಪತ್ತೆಯಾಗಿಲ್ಲ. ಅದರಂತೆ ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next