Advertisement

ಆಸ್ತಿ ಬೆಲೆ ಏರಿಕೆ: ಪ್ರಮೋದ್‌ ಮಧ್ವರಾಜ್‌ ವಿವರಣೆ

01:43 AM Mar 28, 2019 | Sriram |

ಉಡುಪಿ: ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಪ್ರಮೋದ್‌ ಮಧ್ವರಾಜ್‌ ಹಿಂದಿನ ವಿಧಾನಸಭಾ ಚುನಾವಣ ಸಂದರ್ಭ ಸಲ್ಲಿಸಿದ ನಾಮಪತ್ರದ ಅಫಿದವಿತ್‌ ಘೋಷಣೆ ಮತ್ತು ಇಂದಿನ ಘೋಷಣೆಯಲ್ಲಿನ ಆಸ್ತಿ ಮೌಲ್ಯದ ವೃದ್ಧಿಗೆ ಕಾರಣಗಳನ್ನು ನೀಡಿದ್ದಾರೆ.

Advertisement

ಸ್ಥಿರಾಸ್ತಿಯ ಅಂದಾಜು ಪ್ರಸ್ತುತ ಮಾರುಕಟ್ಟೆ ದರದಲ್ಲಿ ಏರಿಕೆಯಾಗಿರುವುದರಿಂದ ಸುಮಾರು 1.26 ಕೋಟಿ ರೂ. ಮೌಲ್ಯ ಏರಿಕೆಯಾಗಿದೆ. ಷೇರು ಹೂಡಿಕೆಗಳ ಮೌಲ್ಯವನ್ನು ಲೆಕ್ಕಪರಿಶೋಧನೆಗೊಳಪಟ್ಟ ತಖೆ¤ಗಳ ಪ್ರಕಾರ ಮಾರಾಟಗಾರನಿಗೆ ಲಾಭರಹಿತವಾಗಿ ನಮೂದಿಸಲಾಗಿದೆ. ಹಿಂದಿನ ಸಲ ಇದರ ಮೌಲ್ಯವನ್ನು ಮಾರುಕಟ್ಟೆ ದರದಲ್ಲಿ ನಮೂದಿಸಲಾಗಿತ್ತು. ಇದರಲ್ಲಿ ಸುಮಾರು 5.05 ಕೋಟಿ  ರೂ.ಗಳಷ್ಟು ವ್ಯತ್ಯಾಸವಿದೆ. ಎಲ್ಲ ಅಂಕಿ-ಅಂಶಗಳನ್ನು ಅಫಿದವಿತ್‌ನಲ್ಲಿ ವಿವರಿಸಲಾಗಿದೆ. ಇತರ ಆಸ್ತಿಗಳ ಮೌಲ್ಯ ಕಳೆದ ವರ್ಷ ಅಫಿದವಿತ್‌ನ ಅಂಕಿ-ಅಂಶಗಳಿಗೆ ಹೋಲಿಸಿ
ದರೆ 2.37 ಕೋಟಿ ರೂ.ಗಳಷ್ಟು ಮೌಲ್ಯದ ವ್ಯತ್ಯಾಸವಿದೆ. ಇದಕ್ಕೆ ಮೂಲಕಾರಣ ಕಳೆದ ವರ್ಷ ಆಸ್ತಿಯ ಮೌಲ್ಯಗಳನ್ನು ಪ್ರೊವಿಷನಲ್‌ ಆರ್ಥಿಕ ತಖೆ ಪ್ರಕಾರ ಸಲ್ಲಿಸಲಾಗಿತ್ತು. ಈ ಸಲದ ಅಂಕಿ-ಅಂಶಗಳನ್ನು ಅಕ್ಟೋಬರ್‌ನಲ್ಲಿ ಪಡೆದ ಲೆಕ್ಕ ಪರಿಶೋಧನ ತಖೆ¤ ಪ್ರಕಾರ ಸಲ್ಲಿಸಲಾಗಿದೆ.

ನನ್ನ ಎಲ್ಲ ಆಸ್ತಿಯ ಮೌಲ್ಯಗಳು ಅಫಿದವಿತ್‌ನ ಆಯಾ ಕಂಡಿಕೆಗಳಲ್ಲಿ ಲಭ್ಯವಿವೆ. 2016-2017ನೇ ಆರ್ಥಿಕ ವರ್ಷದಲ್ಲಿ ನನ್ನ ಮಾಲಕತ್ವದ, “ಮೆ| ರಾಜ್‌ ಫಿಶ್‌ ಮೀಲ್‌ ಮತ್ತು ಆಯಿಲ್‌ ಕಂಪೆನಿ’ಯನ್ನು ಪಾಲುದಾರಿಕೆ ಸಂಸ್ಥೆಯಾಗಿ ಪರಿವರ್ತಿಸಲಾಗಿದೆ. ಆದುದ ರಿಂದ ಸಂಸ್ಥೆಯ 2016-17ನೇ ಸಾಲಿನ ಹಾಗೂ ಅನಂತರದ ಆರ್ಥಿಕ ತಖೆ¤ಗಳಲ್ಲಿರುವ ಸ್ಥಿರ ಹಾಗೂ ಚರ ಸ್ವತ್ತುಗಳು ಪಾಲುದಾರಿಕೆ ಸಂಸ್ಥೆಯ ಸ್ಥಿರ ಹಾಗೂ ಚರ ಸ್ವತ್ತುಗಳಾಗಿ ಪರಿವರ್ತನೆಯಾಗಿದೆ. ಇದರ ಬಗ್ಗೆ ನನ್ನ ಅಫಿದವಿತ್‌ನಲ್ಲಿ ಉಲ್ಲೇಖೀಸಿದ್ದೇನೆ ಮತ್ತು ಕಳೆದ ಬಾರಿಯೂ ಈ ಬಗ್ಗೆ ವಿವರ ನೀಡಿದ್ದೇನೆ ಎಂದು ಪ್ರಮೋದ್‌ ಮಧ್ವರಾಜ್‌ ತಿಳಿಸಿದ್ದಾರೆ.

ಬ್ಯಾಂಕ್‌ ವ್ಯವಹಾರ – ನ್ಯಾಯಾಲಯ ಆದೇಶ
ಪ್ರಮೋದ್‌ ಅವರ ಬ್ಯಾಂಕ್‌ ವ್ಯವಹಾರದ ಬಗ್ಗೆ ಟಿ.ಜೆ. ಅಬ್ರಹಾಂ ಅಥವಾ ಇತರರು ಹೇಳಿಕೆ ನೀಡುವುದು, ಅದನ್ನು ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವುದು, ಸಾರ್ವಜನಿಕ ಸಭೆಗಳಲ್ಲಿ ಪ್ರಸ್ತಾವಿಸುವುದನ್ನು ನಿರ್ಬಂಧಿಸಿ ಉಡುಪಿಯ ಎರಡನೇ ಹೆಚ್ಚುವರಿ ಸಿವಿಲ್‌ ನ್ಯಾಯಾಲಯ ಆದೇಶ ಹೊರಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next