Advertisement
ಉದ್ಯಮಿ ವಿಜಯ್ ಮಲ್ಯ ಹಾಗೂ ಇತ್ತೀಚೆಗೆ ನಡೆದ ನೀರವ್ ಮೋದಿ ಪ್ರಕರಣದ ಬೆನ್ನಲ್ಲೇ ಇದನ್ನು ಮಟ್ಟ ಹಾಕಲು ಕೇಂದ್ರ ಸರಕಾರ ಮುಂದಾಗಿದೆ. ಒಂದು ವೇಳೆ, 100 ಕೋಟಿ ರೂ.ಗಿಂತ ಹೆಚ್ಚು ಮೊತ್ತದ ಅವ್ಯವಹಾರ ಮಾಡಿ, ವಿದೇಶಕ್ಕೆ ತೆರಳಿದರೆ ಅವರು ಸಾಲಕ್ಕೆ ಅಡವಿಟ್ಟ ಆಸ್ತಿಯ ಜತೆಗೆ, ಅವರ ಹೆಸರಿನಲ್ಲಿರುವ ಹಾಗೂ ಬೇನಾಮಿ ಆಸ್ತಿಗಳನ್ನೆಲ್ಲ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಅಷ್ಟೇ ಅಲ್ಲ, ವಿದೇಶಕ್ಕೆ ಓಡಿ ಹೋದರೂ ಅಲ್ಲಿರುವ ಆಸ್ತಿಯನ್ನೂ ಆ ದೇಶದ ನೆರವು ಪಡೆದು ಜಪ್ತಿ ಮಾಡಲಾಗುತ್ತದೆ.
Related Articles
Advertisement
ಬಜೆಟ್ ಅಧಿವೇಶನದಲ್ಲಿ ಮಂಡನೆ: ಮಸೂದೆಯನ್ನು ಕಳೆದ ನವೆಂಬರ್‌ನಲ್ಲೇ ಕಾನೂನು ಸಚಿವಾಲಯ ಅನುಮೋದನೆ ನೀಡಿದ್ದು, ಬಜೆಟ್ ಅಧಿವೇಶನದ 2ನೇ ಚರಣದಲ್ಲಿ ಮಂಡಿಸಲಾಗುತ್ತದೆ. ಈ ಮಸೂದೆ ಉಭಯ ಸದನಗಳಲ್ಲೂ ಸರಾಗವಾಗಿ ಅನುಮೋದನೆ ಪಡೆಯುವ ನಿರೀಕ್ಷೆಯಿದೆ.
ಡಿಫಾಲ್ಟರ್‌ಗಳ ವಿದೇಶ ಪ್ರಯಾಣ ತಡೆಗೆ ಸೂಚನೆ ಯಾವುದೇ ಬ್ಯಾಂಕ್‌ನಲ್ಲಿ ಸುಸ್ತಿದಾರರಾಗಿರುವ ಉದ್ಯಮಿಗಳನ್ನು ವಿದೇಶಕ್ಕೆ ತೆರಳಲು ವಲಸೆ ಬ್ಯೂರೋ ಅವಕಾಶ ನೀಡಬಾರದು ಎಂದು ಗೃಹ ಸಚಿವಾಲಯ ಪತ್ರ ಬರೆದಿದೆ. ಇವರನ್ನು ವಿಮಾನ ನಿಲ್ದಾಣದಲ್ಲಿ ಬಂಧಿಸಬಾರದು. ಆದರೆ ವಿದೇಶಕ್ಕೆ ತೆರಳಲು ಬಿಡಬಾರದು. ಸುಸ್ತಿದಾರರು ಕೋರ್ಟ್‌ನಿಂದ ಪಡೆದ ಅನುಮತಿ ಪತ್ರ ಸಲ್ಲಿಸಿದರೆ ಮಾತ್ರವೇ ವಿದೇಶಕ್ಕೆ ತೆರಳಲು ಅವಕಾಶ ನೀಡಬೇಕು ಎಂದು ಸೂಚನೆ ನೀಡಿದೆ. 1,217 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ
ನೀರವ್ ಮಾವ ಹಾಗೂ ಗೀತಾಂಜಲಿ ಜೆಮ್ಸ್ ಮಾಲಕ ಮೆಹುಲ್ ಚೋಕ್ಸಿಗೆ ಸಂಬಂಧಿಸಿದ 1,217 ಕೋಟಿ ರೂ. ಮೌಲ್ಯದ ಸೊತ್ತನ್ನು ಜಾರಿ ನಿರ್ದೇ ಶನಾಲಯ ಗುರುವಾರ ಜಪ್ತಿ ಮಾಡಿ ಕೊಂಡಿದೆ. 15 ಫ್ಲಾಟ್ ಮತ್ತು ಮುಂಬಯಿ ಯಲ್ಲಿನ 17 ಕಚೇರಿಗಳು, ಕೋಲ್ಕತಾದಲ್ಲಿ ಒಂದು ಮಾಲ್, ಅಲಿಬಾಗ್‌ನಲ್ಲಿ ನಾಲ್ಕು ಎಕರೆ ಫಾರಂ ಹೌಸ್, ನಾಸಿಕ್, ನಾಗ್ಪುರ, ಪನ್ವೇಲ್ ಮತ್ತು ವಿಲ್ಲುಪುರಂನಲ್ಲಿ ಒಟ್ಟು 231 ಎಕರೆ ಭೂಮಿಯನ್ನು ವಶ ಪಡಿಸಿಕೊಳ್ಳಲಾಗಿದೆ. ಇದರ ಜತೆಗೆ ಹೈದರಾ ಬಾದ್‌ನ ರಂಗಾ ರೆಡ್ಡಿ ಜಿಲ್ಲೆಯಲ್ಲಿ 170 ಎಕರೆ ಪಾರ್ಕ್ ಕೂಡ ಜಪ್ತಿ ಮಾಡಲಾಗಿದೆ. ಯಾರ್ಯಾರಿಗೆ ಅನ್ವಯ?
ಉದ್ದೇಶಪೂರ್ವಕ ಸುಸ್ತಿದಾರರು
ಮೋಸ ಮತ್ತು ಫೋರ್ಜರಿ
ಠೇವಣಿ ಮರುಪಾವತಿ ಮಾಡದವರು, ಅಂದರೆ ಚಿಟ್ ಫಂಡ್ ವ್ಯವಹಾರಗಳಲ್ಲಿ ತೊಡಗಿಕೊಂಡು ಹೂಡಿಕೆ ಮಾಡಿದವರ ಹಣ ಮರುಪಾವತಿ ಮಾಡದವರು ಮಸೂದೆಯ ಅನುಕೂಲ
ಸಾಲ, ಬಡ್ಡಿಯ ಮೊತ್ತಕ್ಕೆ ಸರಿಹೊಂದುವ ಆಸ್ತಿಯ ತ್ವರಿತ ಮುಟ್ಟುಗೋಲು
ಆರೋಪ ಸಾಬೀತಾದರೆ ಜಪ್ತಿ ಮಾಡಿದ ಆಸ್ತಿ ಹರಾಜು ಸರಾಗ
ಉದ್ಯಮಿಗಳು ವಿಚಾರಣೆಯಿಂದ ತಪ್ಪಿಸಿ ಕೊಳ್ಳಲು ದೇಶ ಬಿಟ್ಟು ತೆರಳದಂತೆ ತಡೆ
ಸಿವಿಲ್ ದಾವೆಗಳನ್ನು ಸುಸ್ತಿದಾರರು ಹಾಕದಂತೆ ತಡೆ ಕಾನೂನನ್ನು ಅಣಕಿಸಲು ನಾವು ಅವಕಾಶ ನೀಡುವುದಿಲ್ಲ. ಜವಾಬ್ದಾರಿಯುತ ಸಂಸತ್ತು ನಮ್ಮದು. ಈ ಕಾನೂನಿನಿಂದ ಭಾರತದಲ್ಲಿರುವ ಉದ್ದೇಶಪೂರ್ವಕ ಸುಸ್ತಿದಾರರ ಎಲ್ಲ ಆಸ್ತಿಯನ್ನೂ ವಶಪಡಿಸಿ ಕೊಳ್ಳಬಹುದಾಗಿದೆ.
ಅರುಣ್ ಜೇಟ್ಲಿ , ವಿತ್ತ ಸಚಿವ