Advertisement

PM Modi ಮತ ಹಾಕಿದವರ ಆಸ್ತಿ ವೋಟ್‌ ಜೆಹಾದ್‌ ಮಾಡಿದವರಿಗೆ

12:34 AM May 18, 2024 | Team Udayavani |

ಹಮೀರ್‌ಪುರ: ಕಾಂಗ್ರೆಸ್‌ ಮತ್ತು ಸಮಾಜವಾದಿ ಪಕ್ಷಗಳು ನಿಮ್ಮ ಮತ ಪಡೆದು ಅಧಿಕಾರಕ್ಕೆ ಬಂದ ಮೇಲೆ ತಮಗಾಗಿ “ವೋಟ್‌ ಜೆಹಾದ್‌’ ನಡೆಸಿದವರಿಗೆ ನಿಮ್ಮ ಆಸ್ತಿಯನ್ನು ಕಾಣಿಕೆ ನೀಡಲಿವೆ ಎಂದು ಪ್ರಧಾನಿ ಮೋದಿ ಶುಕ್ರವಾರ ಆರೋಪ ಮಾಡಿದ್ದಾರೆ.

Advertisement

ಉತ್ತರಪ್ರದೇಶದ ಹಮೀರ್‌ಪುರದಲ್ಲಿ ರ್‍ಯಾಲಿಯಲ್ಲಿ ಮಾತನಾಡಿದ ಮೋದಿ, “ದೋಸ್ತಿ ಆಗಿರುವ ಕಾಂಗ್ರೆಸ್‌ ಮತ್ತು ಸಮಾಜವಾದಿ ಪಕ್ಷಗಳ ಕುರಿತು ಎಚ್ಚರಿಕೆ ವಹಿಸಿ ಎಂದು ಹೇಳಲು ನಾನು ಬಂದಿದ್ದೇನೆ.

ಅವರು ನಿಮ್ಮ ಮತ ಪಡೆದು ಅಧಿಕಾರಕ್ಕೆ ಬಂದ ಮೇಲೆ ವೋಟ್‌ ಜೆಹಾದ್‌ ಮಾಡಿದವರಿಗೆ ನಿಮ್ಮ ಆಸ್ತಿಯನ್ನು ಹಂಚಲಿದ್ದಾರೆ’ ಎಂದರು.

ಚುನಾವಣೆಗೆ ಮುನ್ನವೇ ಕಾಂಗ್ರೆಸ್‌ ಮತ್ತು ಎಸ್‌ಪಿ ತಮ್ಮ ಉದ್ದೇಶವನ್ನು ಸ್ಪಷ್ಟಪಡಿಸಿವೆ. ಪ್ರತಿಯೊಬ್ಬರ ಆಸ್ತಿಯನ್ನು ತನಿಖೆ ಮಾಡುವುದಾಗಿ ಕಾಂಗ್ರೆಸ್‌ ಹೇಳುತ್ತಿದೆ. ಬಳಿಕ ನಿಮ್ಮ ಆಸ್ತಿಯನ್ನು ತಮ್ಮ ವೋಟ್‌ ಬ್ಯಾಂಕ್‌ಗೆ ಹಂಚುವುದಾಗಿಯೂ ಹೇಳಿದೆ ಎಂದರು.

ಎಪ್ರಿಲ್‌ 29ರ ಚುನಾವಣ ಪ್ರಚಾರದ ವೇಳೆ ಸಮಾಜವಾದಿ ಪಕ್ಷದ ನಾಯಕಿ ಮತ್ತು ಕಾಂಗ್ರೆಸ್‌ನ ಸಲ್ಮಾನ್‌ ಖುರ್ಷಿದ್‌ ಅವರ ಸಂಬಂಧಿ ಮರಿಯ ಆಲಂ ಅವರು ಐಎನ್‌ಡಿಐಎ ಒಕ್ಕೂಟದ ಪರವಾಗಿ “ವೋಟ್‌ ಜೆಹಾದ್‌’ ನಡೆಸುವಂತೆ ಕರೆ ನೀಡಿದ್ದರು. ಪ್ರಧಾನಿ ಮೋದಿ ಈ ಹೇಳಿಕೆಯನ್ನಿರಿಸಿಕೊಂಡು ವಿಪಕ್ಷಗಳ ವಿರುದ್ಧ ಮುಗಿಬಿದ್ದಿದ್ದಾರೆ.

Advertisement

ಕಾಂಗ್ರೆಸ್‌ ವಿರುದ್ಧ ಹರಿಹಾಯ್ದ ಮೋದಿ, ಕಾಶ್ಮೀರದಲ್ಲಿ 370ನೇ ವಿಧಿ ಯನ್ನು ಮತ್ತೆ ಜಾರಿ ಮಾಡುವುದಾಗಿ ಕಾಂಗ್ರೆಸ್‌ ಹೇಳುತ್ತಿದೆ. ಪಾಕಿಸ್ಥಾನದ ಬಳಿ ಅಣುಬಾಂಬ್‌ಗಳಿವೆ, ಎಚ್ಚರಿಕೆಯಿಂದ ಇರಿ ಎಂದು ಹೆದರಿಸುತ್ತಿರುವ ಕಾಂಗ್ರೆಸ್‌ ನಾಯಕರು ಬುಂದೇಲ್‌ಖಂಡ್‌ ಪ್ರದೇಶಕ್ಕೆ ಬಂದು ನೋಡಲಿ, ಇಲ್ಲಿನ ಜನರು ಎಷ್ಟು ಧೈರ್ಯಶಾಲಿಗಳು ಎಂಬುದು ತಿಳಿಯುತ್ತದೆ ಎಂದು ಸವಾಲು ಹಾಕಿದರು.

ಕಾಂಗ್ರೆಸ್‌, ಎಸ್‌ಪಿ ಅಧಿಕಾರಕ್ಕೆ ಬಂದರೆ ರಾಮ ಮಂದಿರದ ಮೇಲೆ ಬುಲ್ಡೋಜರ್‌ ಹರಿಸಲಿವೆ. ಆದರೆ ಬುಲ್ಡೋಜರ್‌ ಎಲ್ಲಿ ಹರಿಸಬೇಕು ಎಂಬುದನ್ನು ಉತ್ತರಪ್ರದೇಶ ಸಿಎಂ ಯೋಗಿ ಯಿಂದ ಕಲಿಯಬೇಕು.
– ನರೇಂದ್ರ ಮೋದಿ

ಪ್ರಧಾನಿ ಏನು ಮಾತನಾಡಬೇಕೆಂದು ನನಗೆ ಹೇಳಿ. ನಾನು ಹಿಂದೆ ಅಂಬಾನಿ- ಅದಾನಿ ಬಗ್ಗೆ ಮೋದಿ ಮಾತನಾಡಿಲ್ಲ ಎಂದಿದ್ದೆ. ಎರಡೇ ದಿನಗಳಲ್ಲಿ ಅವರು ಈ ಇಬ್ಬರ ಬಗ್ಗೆಯೂ ಮಾತನಾಡಿದರು.
-ರಾಹುಲ್‌ ಗಾಂಧಿ

ತಾವು ಪ್ರಧಾನಿ ಹುದ್ದೆಗೆ ಅರ್ಹರಲ್ಲ ಎಂಬುದು ಈಗ ಮೋದಿ ಅವರ ಅರಿವಿಗೆ ಬಂದಿದೆ. ಒಂದೆಡೆ ಹಿಂದೂ, ಮುಸ್ಲಿಂ ರಾಜ ಕಾರಣ ಮಾಡಿದರೆ ಮತ್ತೂಂದೆಡೆ ಮುಸ್ಲಿಮರು ನಮ್ಮ ಮನೆ ಅಕ್ಕಪಕ್ಕದಲ್ಲಿದ್ದರು ಎನ್ನುತ್ತಾರೆ.
-ಪ್ರಿಯಾಂಕಾ ವಾದ್ರಾ

Advertisement

Udayavani is now on Telegram. Click here to join our channel and stay updated with the latest news.

Next