Advertisement

ಆಸ್ತಿ ಮುಟ್ಟುಗೋಲು ಶಿಕ್ಷೆ: ಉ.ಪ್ರ. ಮಾದರಿ ಜಾರಿಗೆ ರಾಜ್ಯ ಸರಕಾರ ಚಿಂತನೆ

10:17 AM Dec 28, 2019 | mahesh |

ಬೆಂಗಳೂರು: ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿ ಮಾಡಿದರೆ ಉತ್ತರ ಪ್ರದೇಶ ಮಾದರಿಯಲ್ಲಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ರಾಜ್ಯದ ಬಿಜೆಪಿ ಸರಕಾರ ಚಿಂತನೆ ನಡೆಸಿದೆ. ಸುದ್ದಿಗಾರರ ಜತೆ ಮಾತನಾಡಿದ ಕಂದಾಯ ಸಚಿವ ಆರ್‌. ಅಶೋಕ್‌, ಸಾರ್ವಜನಿಕ ಆಸ್ತಿಗೆ ನಷ್ಟ ಮಾಡಿದರೆ ಸುಮ್ಮನೆ ನೋಡಿಕೊಂಡು ಇರಲು ಸಾಧ್ಯವಿಲ್ಲ. ರಾಜ್ಯದಲ್ಲೂ ಕಠಿನ ಕಾನೂನು ತರಬೇಕಾಗುತ್ತದೆ. ಈ ಬಗ್ಗೆ ಚಿಂತನೆ ನಡೆದಿದೆ ಎಂದು ಹೇಳಿದರು.

Advertisement

ಮಂಗಳೂರು ಗಲಭೆಯಲ್ಲಿ ಮೃತ ಪಟ್ಟವರು ಅಪರಾಧಿಗಳು ಎಂದು ಪ್ರಾಥಮಿಕ ತನಿಖೆ ಯಲ್ಲಿ ಗೊತ್ತಾ ಗಿದೆ. ಹೀಗಾಗಿ ಪರಿಹಾರ ಹಣ ವಾಪಸ್‌ ಪಡೆಯಲಾಗಿದೆ. ಘಟನೆಗೆ ಕಾರಣ ರಾದವರಿಗೆ ಪರಿಹಾರ ಕೊಡದಿರುವ ಮುಖ್ಯ ಮಂತ್ರಿಯವರ ನಿರ್ಧಾರಕ್ಕೆ ನಮ್ಮ ಸಹಮತ ಇದೆ ಎಂದು ಹೇಳಿದರು.

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್‌ ಸರಕಾರ ಇದೇ ಮೊದಲ ಬಾರಿಗೆ ದಾಂಧಲೆಕೋರರ ಆಸ್ತಿ ಮುಟ್ಟುಗೋಲು ಹಾಕಲು ಮುಂದಾಗಿದೆ. ದಾಂಧಲೆಯಲ್ಲಿ ಪಾಲ್ಗೊಂಡ ಸುಮಾರು 28 ಮಂದಿಯನ್ನು ಈಗಾಗಲೇ ಗುರುತಿಸಿ ಅವರಿಗೆ ನೋಟಿಸ್‌ ಕೂಡ ನೀಡಲಾಗಿದೆ.

ಇದೇ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ “ಆಸ್ತಿ ಮುಟ್ಟುಗೋಲು’ ಸಂಬಂಧ ದನಿಗೂಡಿಸಿದ ಸಂಸದೆ ಶೋಭಾ ಕರಂದ್ಲಾಜೆ ಅವರು, ಇಂತಹ ಘಟನೆಗಳಿಗೆ ಕುಮ್ಮಕ್ಕು ನೀಡಿದವರು, ಆರ್ಥಿಕ ನೆರವು, ಇತರ ಸೌಲಭ್ಯ ಕಲ್ಪಿಸಿದವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕ ಆಸ್ತಿಗೆ ಉಂಟು ಮಾಡಿದ ನಷ್ಟವನ್ನು ಆರೋಪಿಗಳಿಂದಲೇ ವಸೂಲು ಮಾಡಲು ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಮಂಗಳೂರಿನಿಂದ ಭಟ್ಕಳ, ಉತ್ತರ ಕನ್ನಡದವರೆಗೆ ಕರಾವಳಿಯಲ್ಲಿ ಕೇರಳದ ವಾತಾವರಣ ಸೃಷ್ಟಿಸುವ ಷಡ್ಯಂತ್ರ ನಡೆದಿದ್ದು, ಈ ಕೃತ್ಯದಲ್ಲಿ ತೊಡಗಿಸಿಕೊಂಡಿರುವವರನ್ನು ಪತ್ತೆ ಹಚ್ಚಿ ಕ್ರಮ ಜರಗಿಸಬೇಕು. ಮಂಗಳೂರಿನ ಗಲಭೆಯಲ್ಲಿ ಅಲ್ಲಿನ ಶಾಂತಿಪ್ರಿಯ, ಉದಾರವಾದಿ ಮುಸ್ಲಿಮರ ಪಾತ್ರವಿಲ್ಲ. ಬದಲಿಗೆ ಹೊರಗಿನಿಂದ ಬಂದ ಪಿಎಫ್ಐ, ಕೆಎಫ್ಡಿ ಸಂಘಟನೆಯವರು, ಗೂಂಡಾಗಳು ರಾಜ್ಯದ ಇತಿಹಾಸದಲ್ಲಿ ಕಂಡರಿಯದ, ಕಾಶ್ಮೀರದ ರೀತಿಯಲ್ಲಿ ದಾಳಿ ನಡೆಸಿದ್ದಾರೆ. ಪೆಟ್ರೋಲ್‌ ಬಾಂಬ್‌ ಹಾಕಿದ್ದಾರೆ. ಇದಕ್ಕೆ ಕಾರಣರಾದವರನ್ನು ಪತ್ತೆಹಚ್ಚಬೇಕು ಎಂದು ಹೇಳಿದರು.

Advertisement

ಪುಂಡು ಕಂದಾಯ ವಸೂಲು
ಮಂಗಳೂರಿನಲ್ಲಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಅವರು ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡುವವರಿಂದ ಪುಂಡು ಕಂದಾಯ ವಸೂಲು ಮಾಡುವ ಕ್ರಮವನ್ನು ಬೆಂಬಲಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಈಗಾಗಲೇ ಪುಂಡು ಕಂದಾಯ ವಸೂಲು ಮಾಡಲಾಗುತ್ತಿದೆ. ಅದೇ ರೀತಿಯಲ್ಲಿ ಇಲ್ಲೂ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗೆ ಹಾನಿ ಮಾಡಿದವರ ವಿರುದ್ಧ ಪುಂಡು ಕಂದಾಯ ಹೇರುವ ಕಾನೂನು ಜಾರಿ ಮಾಡುವಂತೆ ಮುಖ್ಯಮಂತ್ರಿಯವರಲ್ಲಿ ಆಗ್ರಹಿಸಲಾಗುವುದು ಎಂದು ಸಿ.ಟಿ. ರವಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next