Advertisement
ರವಿವಾರ ಉದಯವಾಣಿಯ ಜತೆ ಮಾತನಾಡಿದ ಅವರು, ಕಡಲ್ಕೊರೆತಕ್ಕೆ ತಡೆಗೋಡೆ ನಿರ್ಮಾಣ ಕಾರ್ಯಕ್ಕಾಗಿ ಎಡಿಬಿ ಯೋಜನೆ ಯವರು ಬಾರ್ಜ್ ಮಾಲಕತ್ವದ ಕಂಪೆನಿಗೆ ಕೆಲಸ ವಹಿಸಿಕೊಟ್ಟಿದ್ದು, ಇದು 25ಕ್ಕೆ ಮುಗಿ ದಿದೆ. ತಮ್ಮ ಕೆಲಸ ಮುಗಿದ ಮೇಲೆ ಗುತ್ತಿಗೆ ಪಡೆದು ಕೊಂಡವರು ಮುಂಬಯಿಗೆ ಹಿಂತಿರುಗ ಬೇಕು. ಅದು ಸಮುದ್ರ ಮಾರ್ಗ ದಲ್ಲೇ ತೆರಳು ವವರಾದ್ದರಿಂದ ಇಷ್ಟು ದಿನದೊಳಗೆ ತೆರಳಬೇಕು ಎನ್ನುವ ನಿಯಮ ಗಳಿಲ್ಲ. ಆದರೂ ಎಡಿಬಿಯವರಿಂದ ವರದಿ ಪಡೆಯು ತ್ತೇವೆ. ಅದರಲ್ಲೇನಾದರೂ ಕಾಮಗಾರಿ ಮುಗಿದ ಬಳಿಕ ಹೋಗುವಲ್ಲಿ ವಿಳಂಬ ವಾಗಿದೆ, ಇಷ್ಟು ದಿನಗಳಲ್ಲಿ ಹೋಗ ಬೇಕಿತ್ತು ಎಂಬ ನಿಯಮಗಳಿದ್ದರೆ ನಾವು ಕ್ರಮ ಕೈಗೊಳ್ಳು ತ್ತೇವೆ. ಇಲ್ಲಿಯವರೆಗೆ ಯಾಕಿ ದ್ದರು ಎಂಬುದೆಲ್ಲವೂ ತನಿಖೆಯ ಬಳಿಕವೇ ತಿಳಿದುಬರುತ್ತದೆ ಎಂದರು.
ಮುಳುಗುತ್ತಿರುವ ಬಾರ್ಜ್‌ನ ಇಂಧನ ವನ್ನು ತೆರವು ಮಾಡುವ ದೃಷ್ಟಿಯಿಂದ ತಂಡ ಮಾಡಲಾಗಿದೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ, ಸಹಾಯಕ ಆಯುಕ್ತ, ಎಡಿಬಿ ಯೋಜನೆ ಎಂಜಿನಿಯರ್, ಡಿಐಜಿ ಹೋಂ ಗಾರ್ಡ್ ಅವರು ಸೋಮವಾರ ಗುತ್ತಿಗೆದಾರರನ್ನು ಕರೆದು ಸಭೆ ನಡೆಸಿ ಇಂಧನ ತೆರವು ಮಾಡಲು ಹಾಗೂ ರಕ್ಷಣೆ ಮಾಡಲು ಜಿಲ್ಲಾಡಳಿತದಿಂದ ಯಾವುದೇ ಸಹಾಯ ಬೇಕಾ ದಲ್ಲಿ ಕೇಳಲಾಗುತ್ತದೆ. ಗುತ್ತಿಗೆದಾರರು ಇಂಧನ ತೆರವು ಮಾಡದಿದ್ದರೆ, ಜಿಲ್ಲಾಡಳಿತ ಮಾಡಿಸಿ ಅದರ ವೆಚ್ಚವನ್ನು ಕಂಪೆನಿಯಿಂದಲೇ ಪಡೆದುಕೊಳ್ಳಲಿದೆ ಎಂದರು. ಕಾರ್ಮಿಕರಿಗೆ ಸಂಬಂಧಪಟ್ಟಂತೆ ಕಂಪೆನಿಯಿಂದ ಏನಾದರೂ ಬರಬೇಕೆಂದಿದ್ದಲ್ಲಿ ನಾವು ಅವರ ಪರವಾಗಿ ಕೇಳಬಹುದು. ಈ ನಿಟ್ಟಿನಲ್ಲಿ ಕಂಪೆನಿಯವರನ್ನೇ ಕರೆಸಿ ಸಭೆ ನಡೆಸಲಾಗುವುದು ಎಂದು ತಿಳಿಸಿದರು.