Advertisement

The Kerala Story; ಬಿಜೆಪಿ ಅಗ್ಗದ, ಕೀಳು ಮಟ್ಟದ ಪ್ರಚಾರಕ್ಕಿಳಿದಿದೆ: ತರೂರ್

05:17 PM Apr 05, 2024 | Team Udayavani |

ತಿರುವನಂತಪುರಂ: ದೂರದರ್ಶನದಲ್ಲಿ ‘ದಿ ಕೇರಳ ಸ್ಟೋರಿ’ ಚಿತ್ರದ ಪ್ರಸಾರದ ಕುರಿತು ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಶುಕ್ರವಾರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಸಂಸದ ಶಶಿ ತರೂರ್ “ಇದು ಅತ್ಯಂತ ಕೀಳು ಮಟ್ಟದ ಪ್ರಚಾರವಾಗಿದ್ದು, ಆಡಳಿತ ಪಕ್ಷದ ರಾಜಕೀಯ ಹಿತಾಸಕ್ತಿಗಳನ್ನು ಮಾತ್ರ ಪೂರೈಸುತ್ತದೆ” ಎಂದು ಹೇಳಿದ್ದಾರೆ.

Advertisement

ಲೋಕಸಭೆ ಚುನಾವಣೆಯ ಪ್ರಚಾರದ ವೇಳೆ ANI ಜತೆ ಮಾತನಾಡಿದ ತರೂರ್, ‘ಸಾಮಾಜಿಕ ಸೌಹಾರ್ದತೆ ಮತ್ತು ಸಹಬಾಳ್ವೆಗೆ ಹೆಸರಾದ ಕೇರಳದ ಬಗ್ಗೆ ಸಿನಿಮಾ ಸುಳ್ಳು ಕಥನ ಸೃಷ್ಟಿಸುತ್ತಿದೆ.ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಇದು ಸಂಪೂರ್ಣವಾಗಿ ನಾಚಿಕೆಗೇಡಿನ ಸಂಗತಿಯಾಗಿದೆ. ಯಾಕೆಂದರೆ ‘ದಿ ಕೇರಳ ಸ್ಟೋರಿ’ ಬಂದಾಗ ಎಲ್ಲರೂ ಇದು ನಿಜವಾದ ಕೇರಳದ ಕಥೆಯಲ್ಲ ಎಂದಿದ್ದರು.ಚಲನಚಿತ್ರವು ತೋರಿಸಲು ಪ್ರಯತ್ನಿಸುವಂತೆ ಇದು ಒಂದು ರೀತಿಯ ಮಿನಿ-ಪಾಕಿಸ್ಥಾನದ ರಾಜ್ಯವಲ್ಲ. ಅಧಿಕೃತವಾಗಿ ಪ್ರಸಾರವಾಗುವ ಈ ಚಿತ್ರದ ಸುಳ್ಳುಗಳು ನಿಜವಾಗಿಯೂ ಅಸಹ್ಯಕರವಾಗಿದೆ, ಇದು ಅದರ ಅಗ್ಗದ ಮತ್ತು ಕೆಟ್ಟ ಪ್ರಚಾರವಾಗಿದೆ. ಚಿತ್ರದ ಸ್ಕ್ರೀನಿಂಗ್ ಕೇರಳದಲ್ಲಿ ಬಿಜೆಪಿಗೆ ಹಿನ್ನಡೆಯನ್ನು ಸೃಷ್ಟಿಸುತ್ತದೆ ” ಎಂದರು.

“ದೇಶಕ್ಕೆ ಸಂಬಂಧಿಸಿದಂತೆ, ಇದು ಕೇರಳದಲ್ಲಿ ಯಾರೂ ಮೆಚ್ಚುವ ಅಥವಾ ಗೌರವಿಸುವ ವಿಷಯವಲ್ಲ, ನಮ್ಮ ರಾಜ್ಯದ ವಿರುದ್ಧ ಇಂತಹ ಸುಳ್ಳುಗಳನ್ನು ಹರಡುವ ಜನರಿಗೆ ಹಿನ್ನಡೆಯನ್ನು ಉಂಟುಮಾಡುತ್ತದೆ” ಎಂದು ತಿರುವನಂತಪುರಂ ಕಾಂಗ್ರೆಸ್ ಅಭ್ಯರ್ಥಿ ತರೂರ್ ಹೇಳಿದರು.

‘ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಸಂಸ್ಥೆಗಳ ಸ್ವಾಯತ್ತತೆಯನ್ನು ರಾಜಿ ಮಾಡಿಕೊಳ್ಳುತ್ತಿದೆ, ವಿವಾದಾತ್ಮಕ ಚಲನಚಿತ್ರವನ್ನು ಪ್ರಸಾರ ಮಾಡುವುದು ಅದರ ರಾಜಕೀಯ ಹಿತಾಸಕ್ತಿಗಳನ್ನು ಪೂರೈಸಲು ಮಾತ್ರ’ ಎಂದು ತರೂರ್ ಹೇಳಿದರು.

“ಪ್ರಸಾರ ಭಾರತಿ ಕಾಯಿದೆಯಡಿ ದೂರದರ್ಶನದ ಸ್ವಾಯತ್ತತೆಯನ್ನು ಖಾತರಿಪಡಿಸಲಾಗಿದೆ. ಆದರೆ, ಬಿಜೆಪಿ ಸರಕಾರಕ್ಕೆ ಸ್ವಾಯತ್ತತೆಯ ಅರ್ಥವೇ ಅರ್ಥವಾಗುತ್ತಿಲ್ಲ. ಅವರು ಪ್ರತಿಯೊಂದು ಸಂಸ್ಥೆಯ ಸ್ವಾಯತ್ತತೆಗೆ ಧಕ್ಕೆ ತಂದಿದ್ದಾರೆ. ಈ ಪ್ರಸಾರವು ಆಡಳಿತ ಪಕ್ಷದ ರಾಜಕೀಯ ಹಿತಾಸಕ್ತಿಗಳನ್ನು ಮಾತ್ರ ಪೂರೈಸುವ ಉದ್ದೇಶವಾಗಿದೆ’ ಎಂದರು.

Advertisement

ಈ ಹಿಂದೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಚಿತ್ರವನ್ನು ಪ್ರಸಾರ ಮಾಡುವ ನಿರ್ಧಾರದ ಬಗ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು, ಇದು ಬಿಜೆಪಿ-ಆರ್‌ಎಸ್‌ಎಸ್‌ನ ಪ್ರಚಾರ ಯಂತ್ರವಾಗಬಾರದು ಎಂದು ಹೇಳಿದ್ದರು.

ಸುದೀಪ್ತೋ ಸೇನ್ ನಿರ್ದೇಶನದ ‘ದಿ ಕೇರಳ ಸ್ಟೋರಿ’ 2023 ಮೇ 5 ರಂದು ಬಿಡುಗಡೆಯಾದ ಗಲ್ಲಾಪೆಟ್ಟಿಗೆಯಲ್ಲಿ ಅತ್ಯಂತ ಯಶಸ್ವಿ ಚಿತ್ರಗಳಲ್ಲಿ ಒಂದಾಗಿತ್ತು. ಆದಾಗ್ಯೂ, ಚಿತ್ರದ ಟ್ರೇಲರ್ ಕೆಲವು ವಲಯಗಳಿಂದ ತೀವ್ರ ಟೀಕೆಗೆ ಗುರಿಯಾಗಿತ್ತು. ಕೇರಳದಿಂದ ನಾಪತ್ತೆಯಾದ 32,000 ಮಹಿಳೆಯರನ್ನು ಮತಾಂತರಗೊಳಿಸಲಾಗಿದೆ, ಲೈಂಗಿಕ ಗುಲಾಮರನ್ನಾಗಿ ಐಸಿಸ್‌ಗೆ ಮಾರಾಟ ಮಾಡಲಾಗಿದೆ ಎಂಬ ಆರೋಪ ಸುಳ್ಳು ಎಂದು ಪ್ರತಿಪಕ್ಷ ನಾಯಕರು ಸೇರಿದಂತೆ ಹಲವರು ಚಿತ್ರದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದರು.

ಚಿತ್ರಕ್ಕೆ ಹಲವು ರಾಜ್ಯಗಳಲ್ಲಿ ವಿರೋಧ ಎದುರಿಸಿತು, ಮಮತಾ ಬ್ಯಾನರ್ಜಿ ನೇತೃತ್ವದ ಸರಕಾರವು ಪಶ್ಚಿಮ ಬಂಗಾಳ ದಲ್ಲಿ ಚಲನಚಿತ್ರವನ್ನು ಪ್ರದರ್ಶಿಸುವುದನ್ನು ನಿಷೇಧಿಸಿತು.

Advertisement

Udayavani is now on Telegram. Click here to join our channel and stay updated with the latest news.

Next