Advertisement

1,500 ಪಿಡಿಒಗಳಿಗೆ ಭಡ್ತಿ

11:51 PM Nov 10, 2022 | Team Udayavani |

ಬೆಂಗಳೂರು: ರಾಜ್ಯ ಸರಕಾರ 1,500 ಪಿಡಿಒ ಹುದ್ದೆಗಳನ್ನು ಹಿರಿಯ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಎಂದು ಉನ್ನತೀಕರಿಸಿ ಸುತ್ತೋಲೆ ಹೊರಡಿಸಿದೆ.

Advertisement

2010ನೇ ಸಾಲಿನಲ್ಲಿ ನೇಮಕವಾದ ಪಿಡಿಒಗಳಿಗೆ ಸೇವಾವಧಿಯಲ್ಲಿ ಒಂದೇ ಒಂದು ಮುಂಭಡ್ತಿ ದೊರೆ ಯದ ಹಿನ್ನೆಲೆಯಲ್ಲಿ ಒಟ್ಟು 6,071 ಹುದ್ದೆಗಳ ಪೈಕಿ 1,500  ಹುದ್ದೆಗಳನ್ನು ವೇತನ ಶ್ರೇಣಿ 40,900-78,200 (ಗ್ರೂಪ್‌ ಬಿ ಕಿರಿಯ ವೃಂದ)ರೂ. ಹೊಂದಿರುವ ಹಿರಿಯ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಎಂದು ಉನ್ನತೀ ಕರಿಸಲು ಹಾಗೂ  ಉಳಿದ 4,571 ಪಿಡಿಒ ಹುದ್ದೆಗಳನ್ನು ವೇತನ ಶ್ರೇಣಿ 37,900 ರೂ.ಗಳಿಂದ 70,850 ರೂ.ರಲ್ಲಿಯೇ ಮುಂದುವರೆಸಲು ತೀರ್ಮಾನಿಸಲಾಗಿದೆ ಎಂದು ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಗ್ರಾಮೀಣ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಅಧಿಕಾರಿಗಳು ಪ್ರಕಟನೆಯಲ್ಲಿ  ತಿಳಿಸಿದ್ದಾರೆ.

2010ನೇ ಸಾಲಿನಲ್ಲಿ ಒಟ್ಟು 2,500 ಪಿಡಿಒಗಳನ್ನು ನೇರ ನೇಮಕ ಮಾಡಲಾಗಿತ್ತು. ಕಳೆದ 12 ವರ್ಷಗಳ ಅವಧಿ ಯಲ್ಲಿ 613 ಪಿಡಿಒಗಳಿಗೆ ಸಹಾಯಕ ನಿರ್ದೇಶಕರ ಹುದ್ದೆಗೆ ಮುಂಭಡ್ತಿ ನೀಡಲಾಗಿದೆ. ಶೇಕಡವಾರು ಪರಿಗಣಿಸಿ ದ್ದಲ್ಲಿ 2010ನೇ ಸಾಲಿನಲ್ಲಿ ನೇಮಕಾತಿ ಹೊಂದಿ ದವರಿಗೆ ಸೇವಾವಧಿಯಲ್ಲಿ ಒಂದೇ ಒಂದು ಮುಂಭಡ್ತಿ ದೊರೆತಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next