ಅಖಾಡದಲ್ಲಿ ತೀವ್ರ ಸದ್ದು ಮಾಡುತ್ತಿದ್ದಾರೆ. ಕಾಂಗ್ರೆಸ್ ಪರವಾಗಿ ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ರೇಖಾ ಶ್ರೀನಿವಾಸ ನೇತೃತ್ವದಲ್ಲಿ ಜಿಲ್ಲಾ ಮತ್ತು ಸ್ಥಳೀಯ ಮಹಿಳಾ ಕಾಂಗ್ರೆಸ್ ಘಟಕದ ಪದಾಧಿಕಾರಿಗಳು ಕಾಂಗ್ರೆಸ್ ಅಭ್ಯರ್ಥಿ ಆರ್.ಬಸನಗೌಡ ತುರುವಿಹಾಳ ಪರವಾಗಿ ಕ್ಯಾಂಪೇನ್ ಆರಂಭಿಸಿದ್ದರೆ, ಇತ್ತ ಬಿಜೆಪಿಯಲ್ಲಿ ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಅವರ ನೇತೃತ್ವದಲ್ಲಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಪರವಾಗಿ ಮತಯಾಚನೆ ಮಾಡುತ್ತಿದ್ದಾರೆ.
Advertisement
ಕಳೆದ ಒಂದು ವಾರದಿಂದಲೂ ಅಖಾಡಕ್ಕೆ ಇಳಿದ ಮಹಿಳಾ ಮಣಿಗಳು ಪ್ರತ್ಯೇಕ ತಮ್ಮದೇ ತಂಡದ ಮೂಲಕ ಮತಬೇಟೆ ಆರಂಭಿಸಿದ್ದಾರೆ. ಬಿರುಬಿಸಿಲಿಗೂಅಂಜದೇ ಮಸ್ಕಿ ಪಟ್ಟಣ ಸೇರಿ ತಾಲೂಕಿನ 5 ಜಿಪಂ ವ್ಯಾಪ್ತಿಯಲ್ಲಿ ಸಂಚರಿಸಿ ಮಹಿಳೆಯರನ್ನು ತಮ್ಮ ಪಕ್ಷದತ್ತ ಸೆಳೆಯುವ ಕಸರತ್ತು ನಡೆಸಿದ್ದಾರೆ.
ರೇಖಾ ಶ್ರೀನಿವಾಸ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷೆ ನಿರ್ಮಲಾ ಬೆಣ್ಣೆ, ಮಸ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಗಂಗಮ್ಮ, ಕಾರ್ಯದರ್ಶಿ ಜಯಮ್ಮ, ಸಿಂಧನೂರು
ಬ್ಲಾಕ್ ಅಧ್ಯಕ್ಷೆ ದಾಕ್ಷಯಿಣಿ, ಮಂಜುಳಾ ಸೇರಿ ಇತರೆ ಮಹಿಳಾ ಮಣಿಗಳು ಇರುವ ಗುಂಪು ಪ್ರತ್ಯೇಕವಾಗಿ ತಾವೇ ಮನೆ-ಮನೆಗೂ ತೆರಳಿ ಮತಯಾಚನೆ
ಮಾಡುತ್ತಿದ್ದಾರೆ. ಕಾಂಗ್ರೆಸ್ ಮಹಿಳೆಯರಿಗೆ ನೀಡಿದ ಸ್ಥಾನ-ಮಾನ ಮಹಿಳಾ ಪರವಾಗಿ ರೂಪಿಸಿದ ಯೋಜನೆಗಳು ಸೇರಿ ಹಲವು ಮಾಹಿತಿಗಳನ್ನು ನೀಡುವ
ಮೂಲಕ ಮಹಿಳಾ ಮತದಾರರನ್ನು ಹಿಡಿದಿಡುವ ಪ್ರಯತ್ನ ನಡೆಸಿದ್ದಾರೆ.
Related Articles
ಮಸ್ಕಿ ಉಪಚುನಾವಣೆ ಕಣದಲ್ಲಿ ಘಟಾನುಘಟಿ ನಾಯಕರ ಪ್ರಚಾರ ಮಾತ್ರವಲ್ಲ, ಮಹಿಳೆಯರು ಕೂಡ ನಡೆಸಿರುವ ಬಿರುಸಿನ ಮತಪ್ರಚಾರ ಗಮನ ಸೆಳೆಯುತ್ತಿದೆ. ಕೆಂಡದಂತ ಬಿಸಿಲನ್ನೂ ಲೆಕ್ಕಿಸದೇ ಪಟ್ಟಣ, ಹಳ್ಳಿಯ ಗಲ್ಲಿ-ಗಲ್ಲಿಯಲ್ಲಿ ಮಹಿಳೆಯರು ಓಡಾಡಿ ಮತಯಾಚನೆ ಮಾಡುತ್ತಿರುವುದು ಕುತೂಹಲ ಮೂಡಿಸಿದೆ. ವಿಶೇಷವಾಗಿ ಮಹಿಳಾ ನಾಯಕಿಯರು ಹೋದ ಕಡೆಗೆಲ್ಲ ಮಹಿಳಾ ಮತದಾರರೇ ಹಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ. ಮಹಿಳೆಯರ ಕಷ್ಟ-ನಷ್ಟ ಕೇಳುವುದು, ಅವರಿಗೆ ಸ್ಪಂದಿಸುವ ಕೆಲಸವನ್ನು ಮಹಿಳಾ ಮಣಿಗಳು ಮಾಡುತ್ತಿದ್ದು, ಇದು ಮಸ್ಕಿ ಮತಕ್ಷೇತ್ರದಲ್ಲಿ ಗಮನ ಸೆಳೆಯುತ್ತಿದೆ.
Advertisement
*ಮಲ್ಲಿಕಾರ್ಜುನ ಚಿಲ್ಕರಾಗಿ