Advertisement
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ರಾಮಕೃಷ್ಣನಗರದ ಆಂದೋಲನ ವೃತ್ತದಲ್ಲಿ ಆಯೋಜಿಸಿದ್ದ ಸಂವಿಧಾನ ಉಳಿವಿಗಾಗಿ, ಕೋಮುವಾದದ ಅಳಿವಿಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂಬ ಘೋಷಣೆಯೊಂದಿಗೆ ಜನ-ರಾಜಕಾರಣ ಪ್ರಚಾರಾಂದೋಲನಕ್ಕೆ ಸಾಹಿತಿ ಡಾ.ಕೆ.ಮರುಳಸಿದ್ದಪ್ಪ, ಡಾ.ಎಸ್.ಜಿ.ಸಿದ್ದರಾಮಯ್ಯ, ಮುಖ್ಯಮಂತ್ರಿ ಚಂದ್ರು ಸೇರಿದಂತೆ ಇನ್ನಿತರರ ಸಾಹಿತಿಗಳು ಹಾಗೂ ಪ್ರಗತಿಪರ ಚಿಂತಕರು ಚಾಲನೆ ನೀಡಿದರು.
Related Articles
Advertisement
ರಾಜ್ಯದ ಈ ಚುನಾವಣೆ ನಿರ್ಣಾಯಕವಾಗಿದ್ದು, ಈ ಚುನಾವಣೆಯ ಫಲಿತಾಂಶ ಮುಂದಿನ ಲೋಕಸಭೆ ಚುನಾವಣೆಯ ಮೇಲೆ ಪರಿಣಾಮಬೀರಲಿದೆ. ಲೋಕಸಭೆ ಚುನಾವಣೆಯಲ್ಲಿ ಮತ್ತೂಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದರೆ, ದೇಶದ ಜನರೆಲ್ಲರೂ ಒಟ್ಟಾಗಿ ನಿಂತರೂ ಸಂವಿಧಾನ ಉಳಿಯುವುದಿಲ್ಲ. ಈಗಾಗಲೇ ಅದರ ಬಗ್ಗೆ ಅನೇಕರು ಬಹಿರಂಗವಾಗಿ ಹೇಳಿಕೆಗಳನ್ನು ನೀಡುತ್ತಿದ್ದು, ಇನ್ನೂ ಕೆಲವರು ಪರೋಕ್ಷವಾಗಿ ಇಂತಹ ಹೇಳಿಕೆಗಳಿಗೆ ಬೆಂಬಲ ನೀಡುತ್ತಿದ್ದಾರೆ ಎಂದರು.
ಮೋದಿ ಮಾತಿನಲ್ಲಿ ನಿಸ್ಸೀಮ: ಪ್ರಧಾನಿ ನರೇಂದ್ರ ಮೋದಿ ಕೇವಲ ಘೋಷಣೆ ಮತ್ತು ಮಾತಿನಲ್ಲಿ ನಿಸ್ಸೀಮರಾಗಿದ್ದು, ಮೋದಿ ಎಂದರೆ ಅವತಾರಪುರುಷ ಎಂಬ ಕಥೆಯನ್ನು ಜನರ ಮುಂದೆ ಹರಡುತ್ತಿದ್ದು, ಈ ಅವತಾರಪುರುಷ ಕಳೆದ ನಾಲ್ಕು ವರ್ಷದಲ್ಲಿ ಮಾತುಗಳನ್ನು ಬಿಟ್ಟು ಬೇರೇನನ್ನೂ ಕೊಟ್ಟಿಲ್ಲ.
ತಮ್ಮ ಸುತ್ತಲೂ ಸುಳ್ಳಿನ ಕೋಟೆಯನ್ನೇ ಕಟ್ಟಿಕೊಂಡಿದ್ದು, ಇದನ್ನು ಪ್ರಶ್ನಿಸಿದರೆ ಅವರ ವಿರುದ್ಧ ಸುಳ್ಳು ಆರೋಪ, ಹಲ್ಲೆಗಳನ್ನು ಮಾಡುವ ಅಥವಾ ಜೀವಕ್ಕೆ ಅಪಾಯವಿದೆ ಎಂಬುದು ಕಲಬುರ್ಗಿ, ಗೌರಿ ಲಂಕೇಶ್ ಹತ್ಯೆಗಳೇ ಬಿಂಬಿಸಿವೆ. ಈ ನಿಟ್ಟಿನಲ್ಲಿ ಕಳೆದ 5 ವರ್ಷದಲ್ಲಿ ಸ್ಥಿರ ಹಾಗೂ ಜನಪರ ಕಾರ್ಯಕ್ರಮಗಳನ್ನು ರೂಪಿಸಿರುವ ಸಿದ್ದರಾಮಯ್ಯ ಅವರ ಸರ್ಕಾರದ ಸಾಧನೆಗಳನ್ನು ಗಮನಿಸಿ ಮತದಾರರು ಮತಹಾಕಬೇಕಿದೆ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಡಾ.ಯತೀಂದ್ರ ಸಿದ್ದರಾಮಯ್ಯ, ಸಾಹಿತಿ ಪೊ›.ಎಚ್.ಜಿ.ಸಿದ್ದರಾಮಯ್ಯ, ಚಿಂತಕ ಪೊ›.ಮಹೇಶ್‌ಚಂದ್ರ ಗುರು, ಸಾಹಿತಿಗಳಾದ ಪೊ›.ಅರವಿಂದ ಮಾಲಗತ್ತಿ, ಪೊ›.ಕೆ.ಎಸ್.¸ಗವಾನ್, ಪ್ರಗತಿಪರ ಚಿಂತಕ ಪ.ಮಲ್ಲೇಶ್, ರಂಗಾಯಣ ಮಾಜಿ ನಿರ್ದೇಶಕ ಜನಾದìನ್(ಜನ್ನಿ), ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ವಸುಂಧರ ¸ೂಪತಿ, ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾವ…, ಕಾಂಗ್ರೆಸ್ ಮುಖಂಡ ಕೆ.ಮರೀಗೌಡ ಇನ್ನಿತರರು ಹಾಜರಿದ್ದರು.
ಬಿಜೆಪಿ ಅವರೇ ಭಾರತಬಿಟ್ಟು ತೊಲಗಿ: ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಬ್ರಿಟಿಷರೇ ಭಾರತಬಿಟ್ಟು ತೊಲಗಿ ಎಂದು ಹೋರಾಡಿದರೆ, ಇಂದು ಬಿಜೆಪಿ ಅವರೇ ಅಧಿಕಾರ ಬಿಟ್ಟು ತೊಲಗಿ, ಸಾಧ್ಯವಾದರೆ ದೇಶಬಿಟ್ಟು ತೊಲಗಿ ಎಂಬ ಘೋಷಣೆಯೊಂದಿಗೆ ಹೋರಾಡಬೇಕಿದೆ ಎಂದು ಕಾಂಗ್ರೆಸ್ ಮುಖಂಡ ಮುಖ್ಯಮಂತ್ರಿ ಚಂದ್ರು ಟೀಕಿಸಿದರು.
ಜನ-ರಾಜಕಾರಣ ಪ್ರಚಾರಾಂದೋಲನದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಬ್ರಿಟಷರು ಏನು ಕೊಳ್ಳೆ ಹೊಡೆದರೋ ಅದನ್ನು ಬಿಜೆಪಿ ಅವರು ಮಾನವೀಯತೆ ದೃಷ್ಟಿಯಲ್ಲಿ ಕೊಳ್ಳೆ ಹೊಡೆಯುತ್ತಿದ್ದಾರೆ. ದೇಶಪ್ರೇಮದ ಹೆಸರಿನಲ್ಲಿ ದೇಶವನ್ನು ಕೊಳ್ಳೆ ಹೊಡೆಯುತ್ತಿರುವ ಬಿಜೆಪಿ ಅವರು ದೇಶಬಿಟ್ಟು ಹೋಗಬೇಕಿದೆ. ಜೆಡಿಎಸ್ ವಿರುದ್ಧ ಜಾತಿಬಿಟ್ಟು ತೊಲಗಿ ಎಂಬ ಘೋಷಣೆಯೊಂದಿಗೆ ಹೋರಾಡಬೇಕಿದ್ದು,
ಬಿಜೆಪಿ ಇದೆ ಎಚ್ಚರಿಕೆ, ಜೆಡಿಎಸ್ ಇದೆ ಎಚ್ಚರಿಕೆ ಎಂಬ ಬೋರ್ಡ್ ಹಾಕಬೇಕಿದೆ. ಈ ಬಾರಿಯ ಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಚುನಾವಣೆಯಾಗದೆ, ಮೋದಿ ಮತ್ತು ಸಿದ್ದರಾಮಯ್ಯ ನಡುವಿನ ಚುನಾವಣೆ ಆಗಿದೆ. ಹೀಗಾಗಿ ರಾಜ್ಯದ ವಿಧಾನಸಬಾ ಚುನಾವಣೆ 2019ರ ಲೋಕಸಬಾ ಚುನಾವಣೆಗೆ ದಿಕ್ಸೂಚಿಯಾಗಿದ್ದು, ರಾಜ್ಯದಲ್ಲಿ ಸಿದ್ದರಾಮಯ್ಯ ಅಥವಾ ಅವರ ಸರ್ಕಾರವನ್ನು ಅಧಿಕಾರಕ್ಕೆ ತರದಿದ್ದರೆ ದೇಶಕ್ಕೆ ಅಪಾಯ ಎಂದರು.
ದೇಶದ ಸಂವಿಧಾನ ಮತ್ತು ಪ್ರಜಾಪ್ರ¸ುತ್ವಕ್ಕೆ ಸಂಚಕಾರ ಬಂದಿದ್ದು, ಕೆಲವು ಪಕ್ಷಗಳು ಸಂವಿಧಾನ ಬದಲಿಸುವ ಘೋಷಣೆಯೊಂದಿಗೆ ಆಡಳಿತ ನಡೆಸುತ್ತಿವೆ. ಹೀಗಾಗಿ ಎಲ್ಲರೂ ಒಂದಾಗಿ ಕೋಮುವಾದಿ ಪಕ್ಷಗಳನ್ನು ಅಧಿಕಾರದಿಂದ ಕಿತ್ತೂಗೆಯಬೇಕು.-ಡಾ.ಯತೀಂದ್ರ ಸಿದ್ದರಾಮಯ್ಯ