Advertisement

ಉತ್ತರಪ್ರದೇಶ ರಾಮರಾಜ್ಯವಲ್ಲ, ಗೂಂಡಾ ರಾಜ್ಯ; ಪತ್ರಕರ್ತನ ಸಾವಿಗೆ ಸಂತಾಪ: ರಾಹುಲ್ ಗಾಂಧಿ

03:29 PM Jul 22, 2020 | Mithun PG |

ನವದೆಹಲಿ: ಪತ್ರಕರ್ತ ವಿಕ್ರಂ ಜೋಶಿ ನಿಧನದ ಬೆನ್ನಲ್ಲೇ ಉತ್ತರಪ್ರದೇಶ ಸರ್ಕಾರದ ವಿರುದ್ಧ ಕಿಡಿಕಾರಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ‘ಸರ್ಕಾರವೂ ಜನರಿಗೆ ರಾಮ ರಾಜ್ಯದ ಭರವಸೆ ನೀಡಿತ್ತು. ಆದರೀಗ ಗೂಂಡಾ ರಾಜ್ಯವನ್ನು ನೀಡಿದೆ’ ಎಂದು ಕಿಡಿಕಾರಿದ್ದಾರೆ.

Advertisement

ಜುಲೈ 20ರ ಸೋಮವಾರದಂದು ಗಾಜಿಯಾಬಾದ್ ನಲ್ಲಿ ಪುತ್ರಿಯರ ಕಣ್ಣೇದುರಲ್ಲೇ  ದುಷ್ಕರ್ಮಿಗಳಿಂದ ಗುಂಡಿನ ದಾಳಿಗೊಳಗಾಗಿದ್ದ ಪತ್ರಕರ್ತ ವಿಕ್ರಮ್ ಜೋಶಿ ಇಂದು ನಿಧನರಾಗಿದ್ದರು. ಘಟನೆಗೂ ನಾಲ್ಕು ದಿನ ಮೊದಲು ವಿಕ್ರಮ್ ಜೋಶಿ ಅವರು ತಮ್ಮ ಸೋದರ ಸೊಸೆಗೆ ಕೆಲವರು ಕಿರುಕುಳ ನೀಡುತ್ತಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಈ ಕಾರಣಕ್ಕಾಗಿಯೇ ದುಷ್ಕರ್ಮಿಗಳು ಗುಂಡು ಹಾರಿಸಿದ್ದರು ಎನ್ನಲಾಗಿದೆ.

ಘಟನೆಯನ್ನು ಖಂಡಿಸಿರುವ ರಾಹುಲ್ ಗಾಂಧಿ ‘ಕಿರುಕುಳದ ವಿರುದ್ಧ ದೂರು ನೀಡಿದ ಕಾರಣಕ್ಕೆ ವಿಕ್ರಂ ಜೋಶಿ ಪ್ರಾಣ ಬಿಟ್ಟಿದ್ದಾರೆ. ಇದು ಖಂಡನಾರ್ಹ. ಪತ್ರಕರ್ತನ ಕೊಲೆ ಮತ್ತು ಸಂಬಂಧಿಯ ಮೇಲಿನ ಹಲ್ಲೆ ಪ್ರಕರಣದ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ. ರಾಮರಾಜ್ಯದ ಮಾತುಕೊಟ್ಟಿದ್ದ ಉತ್ತರಪ್ರದೇಶ ಸರ್ಕಾರ ಗೂಂಡಾ ರಾಜ್ಯ ನಿರ್ಮಾಣ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ರಂದೀಪ್ ಸುರ್ಜೇವಾಲಾ ಅವರು ಕೂಡ ಟ್ವೀಟ್ ಮಾಡಿ, ಇದು ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಭರವಸೆ ನೀಡಿದ್ದ ಅದೇ ರಾಮ ರಾಜ್ಯವೇ? ಇದು ಸಂಪೂರ್ಣ ‘ಗೂಂಡಾರಾಜ್’. ಯುಪಿ ಪತ್ರಕರ್ತರಾಗಲೀ, ಕಾನೂನನ್ನು ರಕ್ಷಿಸುವವರಾಗಲೀ ಸುರಕ್ಷಿತವಲ್ಲ, ಇವರಿಂದ ಸಾಮಾನ್ಯ ಜನರು ನ್ಯಾಯವನ್ನು ಹೇಗೆ ನಿರೀಕ್ಷಿಸಬಹುದು ಎಂದು ಟ್ವೀಟ್ ಮಾಡಿದ್ದಾರೆ.

Advertisement

ಉತ್ತರ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಭಯವೇಇಲ್ಲದಂತಾಗಿದೆ ಎಂದು ಹಿರಿಯ ವಕೀಲ ಹಾಗೂ ಕಾಂಗ್ರೆಸ್ ಮುಖಂಡ ಅಭಿಷೇಕ್ ಮನು ಸಿಂಘ್ವಿ ಕಿಡಿಕಾರಿದ್ದಾರೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿರುವುದಕ್ಕೆ ಇದು ಇನ್ನೊಂದು ಉದಾಹರಣೆ . ಆರು ವರ್ಷಗಳಿಂದ ಮಾಧ್ಯಮವನ್ನು ಹೇಗೆ ವ್ಯವಸ್ಥಿತವಾಗಿ ಬೆದರಿಸಲಾಗುತ್ತಿದೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿ ಎಂದು ಕಾಂಗ್ರೆಸ್ ಮುಖಂಡ ಅಹಮದ್ ಪಟೇಲ್ ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next