Advertisement

ಶೀಘ್ರ ಮೂಲ ಸೌಕರ್ಯ ಒದಗಿಸುವಂತೆ ತಾಕೀತು

10:10 PM Nov 09, 2020 | mahesh |

ಬೈಕಂಪಾಡಿ: ಇಲ್ಲಿನ ಮೀನ ಕಳಿಯ ವಲಸೆ ಕಾರ್ಮಿಕರು ಜೋಪಡಿಯಲ್ಲಿ ವಾಸಿಸುತ್ತಿರುವ ಪ್ರದೇಶಕ್ಕೆ ಮನಪಾ ಸುರತ್ಕಲ್‌ ವಲಯದ ಆರೋಗ್ಯ ಅಧಿ ಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

Advertisement

ಬಳಿಕ ವಲಸೆ ಕಾರ್ಮಿಕರಿಗೆ ಜೋಪಡಿ ಹಾಕಿ ವಾಸಿಸಲು ವ್ಯವಸ್ಥೆ ಮಾಡಿಕೊಟ್ಟ ಮಾಲಕರನ್ನು ಕರೆಸಿ ವಲಸೆ ಕಾರ್ಮಿಕರಿಗೆ ಶೌಚಾಲಯ ಸಹಿತ ಮೂಲ ಸೌಕರ್ಯ ವನ್ನು ಒದಗಿಸಿಕೊಡಬೇಕು ಎಂದರು.

ಯಾವುದೇ ಕಾರಣಕ್ಕೂ ಪಾಲಿಕೆ ವ್ಯಾಪ್ತಿಯಲ್ಲಿ ಪರಿಸರ ಮಾಲಿನ್ಯಕ್ಕೆ ಅವಕಾಶವಿಲ್ಲ. ವಲಸೆ ಕಾಮಿಕರು ದಿನನಿತ್ಯ ಶೌಚಾಲಯ ಹಾಗೂ ಸ್ನಾನಾದಿಗಳನ್ನು ರಸ್ತೆಬದಿ, ರೈಲ್ವೇ ಯಾರ್ಡ್‌ಗಳಲ್ಲಿ ಮಾಡು ತ್ತಿರುವುದರಿಂದ ಪರಿಸರ ಕೆಡುತ್ತದೆ ಮಾತ್ರವಲ್ಲಿ ವಲಸೆ ಕಾರ್ಮಿಕರಿಗೆ, ಅವರ ಮಕ್ಕಳಿಗೆ ಮತ್ತು ಸ್ಥಳೀಯ ನಿವಾಸಿಗಳಿಗೆ ರೋಗ ರುಜಿನಗಳು ಹರಡಲು ಕಾರಣ ವಾಗುತ್ತದೆ. 15 ದಿನಗಳ ಒಳಗಾಗಿ ವಲಸೆ ಕಾರ್ಮಿಕರಿಗೆ ಸೂಕ್ತ ವ್ಯವಸ್ಥೆಯನ್ನು ಮಾಡಿಕೊಡಬೇಕು ಎಂದು ಎಚ್ಚರಿಕೆ ನೀಡಿದರು.

ಸೂಕ್ತ ವ್ಯವಸ್ಥೆಗೆ ಕ್ರಮ
ಬೈಕಂಪಾಡಿ ಮೀನಕಳಿಯದಲ್ಲಿ ವಲಸೆ ಕಾರ್ಮಿಕರಿಗೆ ಅಗತ್ಯ ಸೌಲಭ್ಯಗಳಿಲ್ಲದಿರುವ ಬಗ್ಗೆ ಉದಯವಾಣಿ ಸುದಿನವು ನ. 8ರಂದು “ಮೂಲಸೌಕರ್ಯಗಳಿಲ್ಲದೆ ಪರದಾಡುತ್ತಿರುವ ವಲಸಿಗರು’ ಎಂಬ ವರದಿಯನ್ನು ಪ್ರಕಟಿಸಿತ್ತು. ಇದಕ್ಕೆ ಸ್ಪಂದಿಸಿದ ಅಧಿ ಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ವ್ಯವಸ್ಥೆಗೆ ಕ್ರಮವನ್ನು ಕೈಗೊಂಡಿದ್ದಾರೆ.

ಎಚ್ಚರಿಕೆ ನೀಡಿದ್ದೇವೆ
ಖಾಸಗಿ ಜಾಗದಲ್ಲಿ ಜೋಪಡಿಯನ್ನು ಹಾಕಿ ವಾಸಿಸಲು ಮಾಲಕರು ಅನುವು ಮಾಡಿಕೊಟ್ಟಿದ್ದಾರೆ. ಆದರೆ ಶೌಚಾಲಯ, ಸ್ನಾನಗೃಹ ಮುಂತಾದ ಯಾವುದೇ ವ್ಯವಸ್ಥೆಗಳಿಲ್ಲ. ಹೀಗಾಗಿ 15 ದಿವಸದ ಒಳಗಾಗಿ ಮೂಲ ಸೌಕರ್ಯವನ್ನು ಒದಗಿಸಬೇಕು ಎಂದು ಎಚ್ಚರಿಕೆಯನ್ನು ನೀಡಿದ್ದೇವೆ.
-ಸುಶಾಂತ್‌, ಮಹಾನಗರ ಪಾಲಿಕೆ ಆರೋಗ್ಯ ಅಧಿಕಾರಿ ಸುರತ್ಕಲ್‌ ವಲಯ

Advertisement
Advertisement

Udayavani is now on Telegram. Click here to join our channel and stay updated with the latest news.

Next