Advertisement

ಇಂಗ್ಲೆಂಡ್‌ ಕ್ರಿಕೆಟಿಗರಿಗೆ ಫ‌ುಟ್‌ಬಾಲ್‌ ಅಭ್ಯಾಸ ನಿಷೇಧ

10:02 AM Jan 04, 2020 | Team Udayavani |

ಕೇಪ್‌ಟೌನ್‌: ಇಂಗ್ಲೆಂಡ್‌ ಕ್ರಿಕೆಟಿಗರು ಇನ್ನುಮುಂದೆ ಅಭ್ಯಾಸದ ವೇಳೆ ಫ‌ುಟ್‌ಬಾಲ್‌ ಆಡುವಂತಿಲ್ಲ. ಆಟಗಾರರ ಸುರಕ್ಷತೆಯ ನಿಟ್ಟಿನಲ್ಲಿ ಇಂಗ್ಲೆಂಡ್‌ ಕ್ರಿಕೆಟ್‌ ನಿರ್ದೇಶಕ ಆ್ಯಶೆ ಜೈಲ್ಸ್‌ ಮತ್ತು ತಂಡದ ಮುಖ್ಯ ಕೋಚ್‌ ಕ್ರಿಸ್‌ ಸಿಲ್ವರ್‌ವುಡ್‌ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

Advertisement

ಪ್ರಸಕ್ತ ಸಾಗುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ 2ನೇ ಟೆಸ್ಟ್‌ ಪಂದ್ಯಕ್ಕೂ ಮುನ್ನ ಅಭ್ಯಾಸದಲ್ಲಿ ತೊಡಗಿದ್ದ ಇಂಗ್ಲೆಂಡ್‌ ಆರಂಭಕಾರ ರೋರಿ ಬರ್ನ್ಸ್ ಫ‌ುಟ್‌ಬಾಲ್‌ ಆಡುತ್ತಿದ್ದಾಗ ಮಣಿಗಂಟಿನ ಗಾಯಕ್ಕೆ ತುತ್ತಾಗಿದ್ದರು. ಇದರಿಂದ ಕೇಪ್‌ಟೌನ್‌ ಟೆಸ್ಟ್‌ ಪಂದ್ಯದಿಂದ ಹೊರಗುಳಿದಿದ್ದಾರೆ. ಬರ್ನ್ಸ್ ಮೊದಲ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ ಪರ ಟಾಪ್‌ ಸ್ಕೋರರ್‌ ಆಗಿ ಗುರುತಿಸಿಕೊಂಡಿದ್ದರು. ಇದೀಗ ಅವರ ಗೈರು ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿದೆ.

ಮುಂದೆ ಇಂಥ ಘಟನೆ ಮರುಕಳಿಸಬಾರದೆಂಬ ಉದ್ದೇಶದಿಂದ ಇಂಗ್ಲೆಂಡ್‌ ಕ್ರಿಕೆಟಿಗರಿಗೆ ಫ‌ುಟ್‌ಬಾಲ್‌ ಆಡದಂತೆ ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next