Advertisement

ನಿಷೇಧಾಜ್ಞೆ ಪರಿಷ್ಕೃತ ಆದೇಶ ಜಾರಿ

05:25 AM May 15, 2020 | Suhan S |

ಬೀದರ: ಕೋವಿಡ್ ವೈರಸ್‌ ಹರಡದಂತೆ ಮುಂಜಾಗ್ರತಾ ಕ್ರಮವಾಗಿ, ಜಿಲ್ಲೆಯಲ್ಲಿ ಪ್ರಸ್ತುತ ಜಾರಿಯಲ್ಲಿರುವ ಕಲಂ 144ರ ನಿಷೇಧಾಜ್ಞೆ ಕಂಟೇನ್ಮೆಂಟ್‌ ವಲಯ ಎಂದು ಘೋಷಿಸಿರುವ ಪ್ರದೇಶ ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿ ಮೇ 17ರ ವರೆಗೆ ಜಿಲ್ಲಾದ್ಯಂತ ಕೆಲವು ಷರತ್ತುಗಳಿಗೊಳಪಟ್ಟು ವಿಸ್ತರಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿ ಕಾರಿ ಡಾ. ಎಚ್‌.ಆರ್‌. ಮಹಾದೇವ ಆದೇಶ ಹೊರಡಿಸಿದ್ದಾರೆ.

Advertisement

ಅನಗತ್ಯವಾಗಿ ಜನರು ಗುಂಪು ಸೇರುವುದು ಹಾಗೂ ನಿಷೇಧಾಜ್ಞೆ ನಿಯಮ ಉಲ್ಲಂಘಿಸಿದಲ್ಲಿ ಅಂಥವರ ವಿರುದ್ಧ ಕ್ರಮ ಜರುಗಿಸಲಾಗುವುದು. ಈ ಆದೇಶವು ಮೇ 4ರಿಂದ ಅನ್ವಯವಾಗುವಂತೆ ಮೇ 17ರ ಮಧ್ಯರಾತ್ರಿ 12 ಗಂಟೆವರೆಗೆ ಚಾಲ್ತಿಯಲ್ಲಿ ಇರುತ್ತದೆ ಮತ್ತು ಕಂಟೇನ್ಮೆಂಟ್‌ ಝೋನ್‌ ವಲಯಕ್ಕೆ ಈ ಆದೇಶ ಅನ್ವಯಿಸುವುದಿಲ್ಲ. ಜಿಲ್ಲೆಯಲ್ಲಿ ಸಂಜೆ 7ರಿಂದ ಬೆಳಗ್ಗೆ 7ರ ವರೆಗೆ ಕರ್ಫ್ಯೂ ಜಾರಿಗೊಳಿಸಿದ್ದು, ವೈದ್ಯಕೀಯ ಕ್ಷೇತ್ರ ಮತ್ತು ಇತರೆ ಅತ್ಯಗತ್ಯ ಕ್ಷೇತ್ರಗಳ ಸೇವೆಗೆ ವಿನಾಯಿತಿ ನೀಡಲಾಗಿರುತ್ತದೆ. ಜಿಲ್ಲೆಯ ಎಲ್ಲ ಅಂಗಡಿ/ಮಳಿಗೆಗಳನ್ನು ಸಾಮಾಜಿಕ ಅಂತರ ಕಾಯ್ದುಕೊಂಡು ಬೆಳಗ್ಗೆ 7ರಿಂದ ಸಂಜೆ 7ರ ವರೆಗೆ ತೆರೆಯಬಹುದು. ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸತಕ್ಕದ್ದು. ಜಿಲ್ಲೆಯ ಮದ್ಯ ಮಾರಾಟದ ಸನ್ನದು ಅಂಗಡಿಗಳಿಗೆ ಬೆಳಗ್ಗೆ 7ರಿಂದ 7 ಗಂಟೆವರೆಗೆ ತೆರೆಯಬಹುದು. ಮಾಲ್‌, ಮಲ್ಟಿಪ್ಲೆಕ್ಸ್‌, ಸಿನಿಮಾ ಮಂದಿರಗಳು ತೆರೆಯಲು ಅನುಮತಿ ಇಲ್ಲ. ಮಂದಿರ, ಮಸೀದಿ, ಗುರುದ್ವಾರ ಹಾಗೂ ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಿಷೇಧಿಸಿದೆ. ಮಸಾಜ್‌ ಸೆಂಟರ್ಸ್‌, ಈಜು ಗೊಳ, ಜಿಮ್‌ಗಳನ್ನು ತೆರೆಯಲು ಅನುಮತಿ ಇಲ್ಲ. ಹೋಟೆಲ್‌ಗ‌ಳಲ್ಲಿ ಪಾರ್ಸಲ್‌ಗ‌ಳ ಮೂಲಕವೇ ಸೇವೆ ನೀಡಬೇಕು. ಪಾನ್‌ ಅಂಗಡಿಗಳಲ್ಲಿ ಬೀಡಿ, ಸಿಗರೇಟ್‌, ಗುಟಕಾ, ಪಾನ್‌ ಬೀಡಾ ಮಾರಾಟ ನಿಷೇಧಿಸಿದೆ. ಸಾರ್ವಜನಿಕ ಸಭೆ-ಸಮಾರಂಭಗಳಿಗೆ ಅನುಮತಿ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next