Advertisement

ನಿಷೇಧಾಜ್ಞೆಗೂ ತಗ್ಗದ ಪ್ರತಿಭಟನೆ ಬಿಸಿ

12:33 AM Feb 04, 2020 | Lakshmi GovindaRaj |

ಬೆಂಗಳೂರು: ಕನಿಷ್ಠ ವೇತನಕ್ಕೆ ಒತ್ತಾಯ, ಬಿಸಿಯೂಟ ಯೋಜನೆ ಖಾಸಗೀಕರಣ ವಿರೋಧಿಸಿ ಸಾವಿರಾರು ಅಕ್ಷರ ದಾಸೋಹ ನೌಕರರು ನಿಷೇಧಾಜ್ಞೆ (ಸೆಕ್ಷನ್‌ 144) ನಡುವೆಯೂ ಸೋಮವಾರ ನಗರದ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಆವರಣದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದರು. ಸಂಜೆ ವೇಳೆಗೆ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್‌ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಫೆ.13ರ ಸಭೆ ಬಳಿಕ ತೀರ್ಮಾನಿಸುವ ಭರವಸೆ ನೀಡಿದ ಬಳಿಕ ಹೋರಾಟ ಹಿಂಪಡೆದರು.

Advertisement

ಈ ಮಧ್ಯೆ ಪ್ರತಿಭಟನೆ ನೇತೃತ್ವ ವಹಿಸಿದ್ದ ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮೀ ಅವರನ್ನು ಮುಂಜಾನೆಯೇ ನಗರ ಪೊಲೀಸರು ವಶಕ್ಕೆ ಪಡೆದು ರಹಸ್ಯ ಸ್ಥಳದಲ್ಲಿ ಬಂಧನದಲ್ಲಿರಿಸಿ ಸಂಜೆ ವೇಳೆಗೆ ಬಿಡು ಗಡೆ ಗೊಳಿಸಿ ದರು. ರಾಜ್ಯ ಅಕ್ಷರ ದಾಸೋಹ ನೌಕರರ ಸಂಘವು ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆಗೆ ಕರೆ ನೀಡಿತ್ತು. ಆದರೆ, ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಸಾವಿರಾರು ಕಾರ್ಯಕರ್ತೆಯರು ಒಮ್ಮೆಲೆ ರಸ್ತೆಗಳಿಯುವುದರಿಂದ ಸಂಚಾರ ದಟ್ಟಣೆ ಹಾಗೂ ಸಾರ್ವಜನಿಕರ ದೈನಂದಿನ ಕಾರ್ಯಗಳಿಗೆ ಅಡ್ಡಿ ಯಾ ಗುತ್ತದೆ ಎಂಬ ಕಾರಣದಿಂದ ಹೋರಾಟಕ್ಕೆ ಅನುಮತಿ ನಿರಾಕರಿಸಿ ನಿಷೇಧಾಜ್ಞೆ ಜಾರಿಗೊಳಿಸಿದ್ದರು.

ಹೀಗಾಗಿ ದಾವಣಗೆರೆ, ಹಾವೇರಿ, ಗದಗ, ಬಳ್ಳಾರಿ, ರಾಯ ಚೂರು, ಬಾಗಲಕೋಟೆ, ಬೀದರ್‌, ಯಾದ ಗಿರಿ, ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ, ರಾಮನಗರ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಿಂದ ರೈಲು ಹಾಗೂ ಬಸ್‌ಗಳಲ್ಲಿ ಆಗಮಿಸಿದ ಸಾವಿರಾರು ಕಾರ್ಯಕರ್ತರನ್ನು ರೈಲು ನಿಲ್ದಾಣದಲ್ಲೇ ಪೊಲೀಸರು ತಡೆದರು. ಹೀಗಾಗಿ ಸುಮಾರು ಮೂರುವರೆ ಸಾವಿರಕ್ಕೂ ಅಧಿಕ ಕಾರ್ಯಕರ್ತೆಯರು ರೈಲು ನಿಲ್ದಾಣ ಆವರಣದಲ್ಲೇ ಕುಳಿತು ಸಂಜೆ ಆರು ಗಂಟೆವರೆಗೂ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಸಂಘದ ಕಾರ್ಯದರ್ಶಿ ಮಾಲಿನಿ ಮೇಸ್ತ, ಬಿಸಿಯೂಟ ತಯಾರಿಕರಿಗೆ ಸೇವಾ ಭದ್ರತೆ ಇಲ್ಲ. ಕಳೆದೊಂದು ದಶಕದಿಂದ ಮಾಸಿಕ 2,600 ರೂ. ಗೌರವ ಧನ ಕೊಟ್ಟು ಜೀತಕ್ಕೆ ದುಡಿಸಿಕೊಳ್ಳುತ್ತಿದ್ದಾರೆ. ದಿನ ಬಳಕೆ ವಸ್ತುಗಳ ಬೆಲೆ ವಿಪರೀತ ಏರಿದ್ದು, ಇಷ್ಟು ಹಣದಲ್ಲಿ ಕುಟುಂಬದ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ನಮ್ಮ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಪೊಲೀಸರು-ಕಾರ್ಯಕರ್ತೆಯರ ಪರಸ್ಪರ ಆತಿಥ್ಯ: ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಿಂದ ಆಗಮಿಸಿದ್ದ ಕಾರ್ಯಕರ್ತೆಯರನ್ನು ಪೀಣ್ಯ, ಜಾಲಹಳ್ಳಿ ಬಳಿಯೇ ತಡೆದ ಉತ್ತರ ವಿಭಾಗದ ಪೊಲೀಸರು, ಅವರನ್ನು ಬಾಗಲಗುಂಟೆಯ ಕಲ್ಯಾಣ ಮಂಟಪವೊಂದಕ್ಕೆ ಕರೆದೊಯ್ದು, ತಿಂಡಿ, ಊಟದ ವ್ಯವಸ್ಥೆ ಕಲ್ಪಿಸಿದರು. ಜತೆಗೆ ಮಹಿಳಾ ಕಾನ್‌ಸ್ಟೆàಬಲ್‌ಗ‌ಳು ಬಿಸಿನಲ್ಲಿ ಬಳಲಿದ್ದ ಕಾರ್ಯಕರ್ತೆಯರಿಗೆ ಚಾಕೋಲೇಟ್‌ ಕೊಟ್ಟು ಸತ್ಕರಿಸಿದರು. ಅದಕ್ಕೆ ಪ್ರತಿಯಾಗಿ ಕಾರ್ಯಕರ್ತೆಯರು ತಮ್ಮ ಊರುಗಳಿಂದ ತಂದಿದ್ದ ರೊಟ್ಟಿ ಹಾಗೂ ಚಟ್ನಿಪುಡಿ, ಹೊಳಿಗೆಯನ್ನು ಪೊಲೀಸ್‌ ಸಿಬ್ಬಂದಿಗೆ ಕೊಟ್ಟರು.ಉತ್ತರ ವಿಭಾಗದ ಡಿಸಿಪಿ ಎನ್‌.ಶಶಿಕುಮಾರ್‌ ಹಾಗೂ ಹಿರಿಯ ಅಧಿಕಾರಿಗಳು ಸ್ಥಳದಲ್ಲಿದ್ದರು.

Advertisement

ಅಸ್ವಸ್ಥಗೊಂಡ ಮಹಿಳೆಯರು: ಪ್ರತಿಭಟನೆ ವೇಳೆ ಬಿಸಿಲಿನ ತಾಪಕ್ಕೆ ಅರೆ ಪ್ರಜ್ಞಾಸ್ಥಿತಿ ತಲುಪಿದ ಹತ್ತಾರು ಮಹಿಳೆಯರನ್ನು ಆ್ಯಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ದಾಖಲಿಸಲಾಯಿತು. ಆ ವೇಳೆ ಮಹಿಳೆಯೊಬ್ಬರು ಆಯ ತಪ್ಪಿ ಬಿದ್ದು ತಲೆಗೆ ಗಂಭೀರ ಗಾಯ ಮಾಡಿಕೊಂಡರು. ಕೂಡಲೇ ಪೊಲೀಸ್‌ ಸಿಬ್ಬಂದಿ ಹೊಯ್ಸಳ ವಾಹನದಲ್ಲೇ ಅವರನ್ನು ಕರೆದೊಯ್ದು ಆಸ್ಪತ್ರೆಗೆ ದಾಖಲಿಸಿದರು.

ಬಿಗಿ ಬಂದೋಬಸ್ತ್: ನಿಷೇಧಾಜ್ಞೆ ನಡುವೆಯೂ ಸಾವಿರಾರು ಕಾರ್ಯಕರ್ತೆ ಯರು ಪ್ರತಿಭಟನಾ ರ್ಯಾಲಿ ಬಡೆ ಸಲು ಮುಂದಾದ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ಒಂದು ಸಾವಿರಕ್ಕೂ ಅಧಿಕ ಪೊಲೀ ಸರನ್ನು ಭದ್ರತೆಗೆ ನಿಯೋ ಜಿಸಲಾಗಿತ್ತು. ರಾಜ್ಯದ ವಿವಿಧೆಡೆಯಿಂದ ಆಗಮಿ ಸುತ್ತಿದ್ದ ಪ್ರತಿ ಭಟ ನಾ ಕಾರರನ್ನು ಪೀಣ್ಯ, ಜಾಲಹಳ್ಳಿ, ಬಾಗಲಗುಂಟೆ, ಮೆಜೆಸ್ಟಿಕ್‌, ಯಶವಂತಪುರ ರೈಲು ನಿಲ್ದಾಣ, ಕೆಎಸ್‌ಆರ್‌ಟಿಸಿ ಬಸ್‌ ಹಾಗೂ

ರೈಲು ನಿಲ್ದಾಣ ಸೇರಿ ಹಲವೆಡೆ ತಡೆಯಲಾಯಿತು. ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಬಳಿ ಪಶ್ಚಿಮ ವಿಭಾಗದ ಡಿಸಿಪಿ ಬಿ.ರಮೇಶ್‌ ಬಾನೋಥ್‌ ಹಾಗೂ ಕೇಂದ್ರ ವಿಭಾಗದ ಡಿಸಿಪಿ ಡಾ.ಚೇತನ್‌ಸಿಂಗ್‌ ರಾಥೋಡ್‌ ಭದ್ರತೆ ನೇತೃತ್ವ ವಹಿಸಿದ್ದರು. ವಿವಿಧ ಉಪವಿಭಾಗಗಳ 5 ಮಂದಿ ಎಸಿಪಿ ಹಾಗೂ 10 ಮಂದಿ ಇನ್‌ಸ್ಪೆಕ್ಟರ್‌, 15 ಪಿಎಸ್‌ಐ ಹಾಗೂ 100ಕ್ಕೂ ಹೆಚ್ಚು ಮಹಿಳಾ ಪೊಲೀಸರನ್ನು ನಿಯೋಜಿ ಸಲಾಗಿತ್ತು. ಜತೆಗೆ ಕೆಎಸ್‌ಆರ್‌ಪಿ, ಸಿಎಆರ್‌ ತುಕಡಿ, ಮುಂಜಾಗ್ರೆತೆ ಕ್ರಮವಾಗಿ ಅಗ್ನಿ ಶಾಮಕ ದಳ, ಆ್ಯಂಬುಲೆನ್ಸ್‌ ವ್ಯವಸ್ಥೆ ಮಾಡಲಾಗಿತ್ತು.

ಫೆ.13ರಂದು ಸಭೆ:ಸಂಜೆ ವೇಳೆಗೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್‌, ಪ್ರತಿಭಟನಾಕಾರರ ಬೇಡಿಕೆ ಈಡೇರಿಸುವ ಕುರಿತು ಫೆ.13ರಂದು ಸಭೆ ನಿಗದಿ ಪಡಿಸಿದ್ದು, ಈ ಸಭೆಯಲ್ಲಿ ಸಂಘದ ಮುಖಂಡರು, ಸಂಬಂಧಿಸಿದ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಚರ್ಚೆ ಬಳಿಕ ಬೇಡಿಕೆಗಳ ಈಡೇರಿಕೆ ಕುರಿತು ಸೂಕ್ರ ತೀರ್ಮಾಣ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಹೀಗಾಗಿ ಕಾರ್ಯಕರ್ತೆಯರು ಹೋರಾಟ ಹಿಂಪಡೆದರು.

ಪ್ರಮುಖ ಬೇಡಿಕೆಗಳೇನು?
-ಬಿಸಿಯೂಟ ಯೋಜನೆ ಖಾಸಗೀಕರಣ ಹಿಂಪಡೆಯುವುದು
-ಬಿಸಿಯೂಟ ನೌಕರರಿಗೂ ಅನ್ವಯವಾಗುವಂತೆ 7ನೇ ವೇತನ ಆಯೋಗದ ಶಿಫಾರಸುಗಳ ಜಾರಿ
-18ರಿಂದ 21 ಸಾವಿರ ರೂ. ಕನಿಷ್ಠ ವೇತನ ನಿಗದಿ
-ನಿವೃತ್ತಿ ನಂತರ ಪಿಂಚಣಿ ಸೌಲಭ್ಯ
-ಡಿ ಗ್ರೂಪ್‌ ನೌಕರರೆಂದು ಪರಿಗಣಿಸುವುದು
-ಮಕ್ಕಳ ಹಾಜರಾತಿ ಆಧಾರದಲ್ಲಿ ಬಿಸಿಯೂಟ ಕಾರ್ಯಕರ್ತೆಯರನ್ನು ವಜಾಗೊಳಿಸಬಾರದು
-ಶಿಕ್ಷಣ ಇಲಾಖೆ ಅಡಿಯಲ್ಲೇ ಕಾರ್ಯಕರ್ತೆಯರ ಮೇಲ್ವಿಚಾರಣೆ
-12ನೇ ತರಗತಿವರೆಗೆ ಬಿಸಿಯೂಟ ಯೋಜನೆ ವಿಸ್ತರಣೆ
-ಪ್ರತಿ ಶಾಲೆಯಲ್ಲಿ ಕನಿಷ್ಠ ಇಬ್ಬರು ಅಡುಗೆಯವರ ನೇಮಕ
-ಹೆರಿಗೆ ರಜೆ, ಹೆರಿಗೆ ಭತ್ಯೆ ನೀಡುವುದು
-ರಾಷ್ಟ್ರೀಯ ಸ್ವಾಸ್ಥ ಭೀಮಾಯೋಜನೆ ಜಾರಿ

Advertisement

Udayavani is now on Telegram. Click here to join our channel and stay updated with the latest news.

Next