Advertisement

ಫೇಸ್‌ಬುಕ್‌ ನಲ್ಲಿ ಅಪಪ್ರಚಾರ: ಪ್ರಕರಣ ದಾಖಲು

06:05 AM Jul 22, 2017 | Team Udayavani |

ಮಂಗಳೂರು: ಬಿಜೆಪಿ ಮುಖಂಡ ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ರಹೀಂ ಉಚ್ಚಿಲ್‌ ಅವರ ವಿರುದ್ಧ ಫೇಸ್‌ಬುಕ್‌ ಖಾತೆದಾರನೋರ್ವ ತಪ್ಪು ಮಾಹಿತಿ ಪೋಸ್ಟ್‌ ಮಾಡುವ ಮೂಲಕ ಅಪಪ್ರಚಾರ ಮಾಡಿರುವ ಘಟನೆಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Advertisement

ವಿಲಿಯಂ ಪಿಂಟೋ ಅವರ ಹೆಸರಿನಲ್ಲಿರುವ ಈ ಖಾತೆಯಲ್ಲಿ ,ಅಪಪ್ರಚಾರ ಮಾಡಲಾಗಿದೆ. ಈ ಪೋಸ್ಟ್‌ ವಿರುದ್ಧ ಅಸಮಾ ಧಾನಗೊಂಡಿರುವ ರಹೀಂ ಉಚ್ಚಿಲ ಅವರು,   ಸಾಮಾಜಿಕ ಜಾಲತಾಣ ದಲ್ಲಿ ತಪ್ಪು ಮಾಹಿತಿ ಹಾಕುವ ಮೂಲಕ ದುರ್ಬಳೆ ಮಾಡುತ್ತಿರುವ ಫೇಸ್‌ಬುಕ್‌ ಖಾತೆದಾರನ ವಿರುದ್ಧ ಹುಬ್ಬಳ್ಳಿಯ ಸಬರ್‌ಬಂದ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ತಿಳಿಸಿದ್ದಾರೆ.

14ದಿನಗಳ ಕಾಲ ಬಿಜೆಪಿ ಪಕ್ಷದ ವಿಸ್ತಾರಕನ ಜವಾಬ್ದಾರಿ ಮೇಲೆ ಹುಬ್ಬಳ್ಳಿಗೆ ಬಂದಿದ್ದು, ಈ ಹಿನ್ನೆಲೆಯಲ್ಲಿ‌ ಸಿದ್ಧಾರೂಢ ಮಠ ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದೇನೆ. ಅರ್ಚಕರು ಶಾಲು ಹೊದಿಸಿ ಅಭಿನಂದಿಸಿದ್ದಾರೆ. ಇದು ನನಗೆ ಖುಷಿ ನೀಡಿದೆ. ಹುಬ್ಬಳ್ಳಿಯಲ್ಲಿ ಹಿಂದೂ ಮುಸ್ಲಿಂಮರು ಐಕ್ಯತೆಯಿಂದಿದ್ದಾರೆ. ನನಗೆ ಸಮಸ್ಯೆಯಾಗಿರುವುದನ್ನು ಕಂಡು ಎಲ್ಲರೂ ಸ್ಪಂದನೆ ನೀಡಿದ್ದಾರೆ.  ನನ್ನ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡಿರುವ ಫೋಟೋವನ್ನು  ಕೆಲವು ಮತೀಯವಾದಿಗಳು ಇದನ್ನೇ ತಿರುಚಿ ತಮ್ಮ ಫೇಸ್‌ಬುಕ್‌ನಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಅಲ್ಲದೇ, ಇದರ ವಿರುದ್ಧ ಕೆಟ್ಟ ಕಮೆಂಟ್‌ಗಳನ್ನು ಹಾಕಿ, ಮೊಬೈಲ್‌ ಮೂಲಕ ಹರಿದಾಡಿಸುತ್ತಿರುವವರ ವಿರುದ್ಧ ಶನಿವಾರ ಪಾಂಡೇಶ್ವರ ಠಾಣೆಯಲ್ಲಿ ದೂರು ನೀಡಲಿದ್ದೇನೆ ಎಂದು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next