Advertisement

ಐಬಿಗಳ ಖಾಸಗೀಕರಣಕ್ಕೆ ನಿಷೇಧ

06:00 AM Jul 07, 2018 | |

ನವದೆಹಲಿ: ದಟ್ಟ ಕಾಡಿನ ಮಧ್ಯೆ ಇರುವ ವಿಶ್ರಾಂತಿ ಗೃಹಗಳು ಹಾಗೂ ಅರಣ್ಯ ಇಲಾಖೆ ಬಂಗಲೆಗಳನ್ನು (ಐಬಿ) ಖಾಸಗಿಯವರಿಗೆ ವಹಿಸಬಾರದು ಎಂದು ಸುಪ್ರೀಂಕೋರ್ಟ್‌ ಆದೇಶಿಸಿದೆ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಖಾಸಗಿ ಸಹ ಭಾಗಿತ್ವದ ಹೆಸರಿನಲ್ಲಾಗಲೀ ಅಥವಾ ಯಾವು ದೇ ಹೆಸರಿನಲ್ಲಿ ಖಾಸಗಿಯವರಿಗೆ ಅಥವಾ ವಾಣಿಜ್ಯ ಸಂಸ್ಥೆಗಳಿಗೆ ಇದರ ಉಸ್ತುವಾರಿ ನೀಡ ಬಾರದು ಎಂದು ತೀರ್ಪಿನಲ್ಲಿ ವಿವರಿಸಿದೆ.

Advertisement

ಈ ಸಂಬಂಧ ಕೇಂದ್ರೀಯ ಸಬಲೀಕರಣ ಸಮಿತಿ (ಸಿಇಸಿ) ರೂಪಿಸಿದ ಮಾನದಂಡವನ್ನು ನ್ಯಾಯಪೀಠ ಅನುಮೋದಿಸಿದೆ. ಬಹುತೇಕ ಐಬಿಗಳು ಪಾರಂಪರಿಕ ಕಟ್ಟಡಗಳಾಗಿದ್ದು, ಇವುಗಳಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಲು ಸುಧಾರಣೆಯನ್ನು ಅರಣ್ಯ ಇಲಾಖೆಯೇ ಮಾಡಬೇಕು. ಅರಣ್ಯ ಅಧಿಕಾರಿಗಳು ಈ ವಿಶ್ರಾಂತಿ ಗೃಹಗಳಲ್ಲೇ ಉಳಿದುಕೊಳ್ಳ ಬೇಕಾಗುತ್ತದೆ. ಅರಣ್ಯ ರಕ್ಷಣೆಗಾಗಿ ಅರಣ್ಯಾಧಿ ಕಾರಿಗಳ ವಸತಿಗೆ ನಿರ್ಮಿಸಿದ ಬಂಗಲೆಗಳಿವು. ಇವು ಸೀಮಿತ ಸಂಖ್ಯೆಯ ಕೋಣೆಗಳನ್ನು ಹೊಂದಿರುತ್ತವೆ. ಇವುಗಳ ನಿಯಂತ್ರಣ, ರಿಸರ್ವೇಶನ್‌ ಸೌಲಭ್ಯ ಇಲಾಖೆ ಬಳಿಯೇ ಇರಬೇಕು. ವಿಶೇಷ ಸನ್ನಿವೇಶಗಳಲ್ಲಿ ಇತರರಿಗೆ ಅಗತ್ಯಕ್ಕೆ ಅನುಗುಣವಾಗಿ ಸೀಮಿತ ಅವಧಿಗೆ ಕೋಣೆ ನೀಡಬಹುದು. ಆದರೆ ಅವುಗಳ ನಿಯಂತ್ರಣ ಅಧಿಕಾರ ನೀಡುವಂತಿಲ್ಲ ಎಂದು ಕೋರ್ಟ್‌ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next