Advertisement
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಮಂಗಳವಾರ ವಿಧೇಯಕ ಮಂಡಿಸಿದ್ದಾರೆ. ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಮಡೆಸ್ನಾನಕ್ಕೆ ವಿಧೇಯಕದಲ್ಲಿ ನಿಷೇಧ ಹೇರಲಾಗಿದ್ದು, ಜ್ಯೋತಿಷ್ಯ, ಭಜನೆ, ಜಾತ್ರೆಗಳಿಗೆ ಯಾವುದೇ ನಿರ್ಬಂಧ ಹೇರಿಲ್ಲ. ಅಲ್ಲದೆ, ದುಷ್ಟ ಮತ್ತು ಅಮಾನವೀಯ ಎನ್ನುವ ವಿಚಾರಗಳನ್ನು ಯಾರೇ ಆಗಲಿ ಆಚರಿಸುವುದು ಅಥವಾ ಮತ್ತೂಬ್ಬ ವ್ಯಕ್ತಿ ಆಚರಿಸಲು ಪ್ರೋತ್ಸಾಹಿಸುವುದು, ಪ್ರಚಾರ ಮಾಡುವುದು ಅಥವಾ ಮೌಢಾಚರಣೆ ಮಾಡುವಂತೆ ಒತ್ತಾಯ ಹೇರುವುದನ್ನೂ ನಿಷೇಧಿಸಲಾಗಿದೆ. ಜತೆಗೆ ವಾಮಾಚಾರಕ್ಕೆ ಬೆಂಬಲ, ಪ್ರೋತ್ಸಾಹ ಆಥವಾ ಪ್ರಚಾರ ನೀಡಿದರೆ ಅಂಥವರಿಗೆ ಒಂದರಿಂದ ಏಳು ವರ್ಷದವರೆಗೆ ಜೈಲು ಶಿಕ್ಷೆ ಮತ್ತು 5 ಸಾವಿರದಿಂದ 50 ಸಾವಿರ ರೂ.ವರೆಗೆ ದಂಡ ವಿಧಿಸಲು ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ.
ಸುವರ್ಣಸೌಧ: ವಿಧಾನಮಂಡಲದ ಅಧಿವೇಶನ ನಡೆಯುತ್ತಿರುವ ಸುವರ್ಣಸೌಧದ ಪ್ರವೇಶ ದ್ವಾರದಲ್ಲಿ ಮಲ್ಲೇಶ್ವರ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರಿಗೆ ತಡೆಯೊಡ್ಡಿದ ಭದ್ರತಾ ಸಿಬ್ಬಂದಿ, ಶಾಸಕರ ಪಾಸ್ ತೋರಿಸುವಂತೆ ಕೇಳಿದ ಪ್ರಸಂಗ ನಡೆಯಿತು. ಭದ್ರತಾ ಸಿಬ್ಬಂದಿ ವರ್ತನೆಯಿಂದ ಒಂದು ಕ್ಷಣ ತಬ್ಬಿಬ್ಟಾದ ಶಾಸಕರು, ತಾವು ಶಾಸಕರ ಕಾರಿನಲ್ಲಿ ಬಂದಿದ್ದೇನೆ ಎಂದು ಹೇಳಿದರಾದರೂ ಅದನ್ನು ಸಿಬ್ಬಂದಿ ಒಪ್ಪಲಿಲ್ಲ. ನಿಮ್ಮ ಗುರುತಿನ ಚೀಟಿ ತೋರಿಸಿದರೆ ಮಾತ್ರ ಒಳ ಬಿಡುವುದಾಗಿ ಹೇಳಿದರು. ಅದರಂತೆ ಅಶ್ವತ್ಥನಾರಾಯಣ ಅವರು ಗುರುತಿನ ಚೀಟಿ ತೋರಿಸಿದ ಬಳಿಕ ಅವರನ್ನು ಸುವರ್ಣಸೌಧದೊಳಗೆ ಬಿಡಲಾಯಿತು. ನಂತರ, ಈ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮೌಖೀಕ ದೂರು ನೀಡಿದ ಅವರು, ಶಾಸಕರ ಮಾಹಿತಿ ಗೊತ್ತಿರುವ ಸಿಬ್ಬಂದಿಯನ್ನು ಪ್ರವೇಶ ದ್ವಾರದಲ್ಲಿ ನಿಯೋಜಿಸಿ ಎಂದು ಸಲಹೆ ಮಾಡಿದರು. ಈ ಕುರಿತು ಪ್ರತಿಕ್ರಿಯಿಸಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ರಾಜ್ಯ ಸರ್ಕಾರ ಬೆಳಗಾವಿಯಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಘೋಷಿಸಿದೆ. ತಪಾಸಣೆ ಹೆಸರಿನಲ್ಲಿ ಎಲ್ಲರಿಗೂ ಕಿರಿಕಿರಿ ಉಂಟು ಮಾಡಲಾಗುತ್ತಿದೆ. ಸರ್ಕಾರದ ಈ ವರ್ತನೆ ಸರಿಯಲ್ಲ ಎಂದು ಹೇಳಿದರು.
Related Articles
ಭಾನಾಮತಿ, ಮಾಟ-ಮಂತ್ರ, ನಿಧಿ ಹುಡುಕುವುದು. ಆದಕ್ಕಾಗಿ ವಾಮಾಚಾರ, ವ್ಯಕ್ತಿಯ ಮೇಲೆ ಹಲ್ಲೆ, ಬೆತ್ತಲೆ ಮೆರವಣಿಗೆ
Advertisement
ಇಂದ್ರಿಯಗಳಲ್ಲಿ ಅನಿರೀಕ್ಷಿತ ಶಕ್ತಿ ಆಹ್ವಾನವಾಗಿದೆ ಆಥವಾ ಒಬ್ಬ ವ್ಯಕ್ತಿಯಲ್ಲಿ ಅತೀಂದ್ರಿಯ ಶಕ್ತಿ ಇದೆ ಎಂದು ಪ್ರಭಾವ ಬೀರುವುದು. ಆಂತಹ ವ್ಯಕ್ತಿಯ ಮಾತು ಕೇಳದಿದ್ದರೆ ತೊಂದರೆಯಾಗುತ್ತದೆ ಎಂದು ಹೆದರಿಸುವುದು. ಭಯ ಹುಟ್ಟಿಸಿ ವಂಚನೆ ಮಾಡುವುದು.
ದೆವ್ವ ಬಿಡಿಸುವ ನೆಪದಲ್ಲಿ ವ್ಯಕ್ತಿಗೆ ಪಾದರಕ್ಷೆ ಆದ್ದಿದ ನೀರು ಕುಡಿಯುವಂತೆ ಒತ್ತಾಯಿಸುವುದು. ಹಗ್ಗ, ಸರಪಳಿಯಿಂದ ಕಟ್ಟುವುದು, ಕೋಲು, ಚಾಟಿಯಿಂದ ಹೊಡೆಯುವುದು, ಮೆಣಸಿನಕಾಯಿ ಹೊಗೆ ಹಾಕುವುದು, ವ್ಯಕ್ತಿಯನ್ನು ಚಾವಣಿಗೆ ನೇತು ಹಾಕುವುದು, ಕೂದಲು ಕೀಳುವುದು, ವ್ಯಕ್ತಿಯ ಆಂಗಗಳಿಗೆ ಬಿಸಿ ವಸ್ತುವಿನಿಂದ ಸುಡುವುದು, ಸಾರ್ವಜನಿಕವಾಗಿ ಲೈಂಗಿಕ ಕೃತ್ಯಕ್ಕೆ ಒತ್ತಾಯ ಮಾಡುವುದು, ಅಮಾನವೀಯ ಕೃತ್ಯದ ಮೂಲಕ ಬಾಯಲ್ಲಿ ಮೂತ್ರ ಅಥವಾ ಮಾನವ ಮಲ ಹಾಕುವುದು.
ಭಾನಾಮತಿ, ಮಾಟ-ಮಂತ್ರದ ಮೂಲಕ ಜಾನುವಾರುಗಳ ಹಾಲು ಕೊಡುವ ಸಾಮರ್ಥ್ಯ ತಗ್ಗಿಸುವುದು, ಒಬ್ಬ ವ್ಯಕ್ತಿಯನ್ನು ಸೈತಾನನ ಅವತಾರ ಎಂದು ಘೋಷಿಸುವುದು.
ದೆವ್ವ ಮತ್ತು ಮಂತ್ರಗಳನ್ನು ಆಹ್ವಾನಿಸಿ ಭಯ ಹುಟ್ಟಿಸುವುದು, ಆಘೋರಿ ಕೃತ್ಯ ಆಚರಣೆ ಮಾಡುವುದು.
ಬೆರಳುಗಳ ಮೂಲಕ ಶಸ್ತ್ರಚಿಕಿತ್ಸೆ ಮಾಡುವುದು, ಭ್ರೂಣದ ಲಿಂಗ ಬದಲಾಯಿಸುವುದಾಗಿ ಹೇಳಿಕೊಳ್ಳುವುದು.
ಆಲೌಕಿಕ ಶಕ್ತಿ ಇದೆ ಎಂದು ಹೇಳುವುದು, ಪವಿತ್ರಾತ್ಮದ ಆವತಾರ ಎಂದು ಲೈಂಗಿಕ ಚಟುವಟಿಕೆಯಲ್ಲಿ ತೊಡಗುವುದು.
ಕೊಕ್ಕೆಯಿಂದ ನೇತು ಹಾಕಿದ ಸಿಡಿ ಆಚರಣೆ ಮಾಡುವಂತೆ ಮನವೊಲಿಸುವುದು.
ಮಕ್ಕಳನ್ನು ಎತ್ತರದಿಂದ ಎಸೆಯುವುದು, ಮುಳ್ಳುಗಳ ಮೇಲೆ ಎಸೆಯುವುದು.
ಋತುಮತಿಯಾದ ಹೆಣ್ಣು ಆಥವಾ ಗರ್ಭಿಣಿಯನ್ನು ಒಂಟಿಯಾಗಿಡುವುದು, ಬೆತ್ತಲೆ ಸೇವೆ ಮಾಡುವುದು.
ಪ್ರಾಣಿಯ ಕುತ್ತಿಗೆ ಕಚ್ಚಿ ಕೊಲ್ಲುವುದು.
ಎಂಜಲು ಎಲೆಗಳ ಮೇಲೆ ಹೊರಳಾಡುವುದು (ಮಡೆಸ್ನಾನ)
ಬಾಯಿ ಬೀಗ ಪದ್ದತಿ ಆಚರಣೆ (ಬಾಯಲ್ಲಿ ಕಬ್ಬಿಣದ ಸಲಾಕೆ ತುರುಕುವುದು)
ಭಾನಾಮತಿ ಹೆಸರಿನಲ್ಲಿ ಮನೆಗಳ ಮೇಲೆ ಕಲ್ಲು ಎಸೆಯುವುದು.
ನಾಯಿ, ಹಾವು, ಚೇಳು ಕಚ್ಚಿದಾಗ ವೈದ್ಯಕೀಯ ಚಿಕಿತ್ಸೆ ಬದಲು ಮಂತ್ರ-ತಂತ್ರ ಮಾಡುವುದು.
ಯಾವುದಕ್ಕೆ ನಿರ್ಬಂಧ ಇಲ್ಲ?ಯಾವುದೇ ಧಾರ್ಮಿಕ, ಆಧ್ಯಾತ್ಮಿಕ ಸ್ಥಳಗಳಲ್ಲಿ ಪ್ರದಕ್ಷಿಣೆ, ಯಾತ್ರೆ, ಪೂಜೆ ಮಾಡುವುದು. ಹರಿಕಥೆ, ಕೀರ್ತನೆ, ಪ್ರವಚನ, ಭಜನೆ, ಪ್ರಾಚೀನ ಮತ್ತು ಪಾರಂಪರಿಕ ಕಲಿಕೆಗಳು ಹಾಗೂ ಕಲೆಗಳ ಪದ್ಧತಿ, ಅದರ ಪ್ರಸಾರ ದೈವಾಧೀನರಾದ ಸಂತರ ಪವಾಡದ ಬಗ್ಗೆ ಮಾತನಾಡುವುದು, ಪ್ರಸಾರ ಮತ್ತು ಪ್ರಚಾರ ಮಾಡುವುದು. ಮನೆ, ದೇವಾಲಯ, ದರ್ಗಾ, ಗುರುದ್ವಾರ, ಪಗೋಡ, ಚರ್ಚ್ ಮತ್ತು ಧಾರ್ಮಿಕ ಸ್ಥಳಗಳಲ್ಲಿ ದೈಹಿಕ ಹಾನಿಯುಂಟು ಮಾಡದಿರುವ ಪ್ರಾರ್ಥನೆ, ಉಪಾಸನೆ ಮತ್ತು ಧಾರ್ಮಿಕ ಆಚರಣೆ. ಎಲ್ಲ ಧರ್ಮಗಳ ಸಂಭ್ರಮಾಚರಣೆಗಳು, ಹಬ್ಬಗಳು, ಪ್ರಾರ್ಥನೆಗಳು, ಮೆರವಣಿಗೆ. ಧರ್ಮಾಚರಣೆ ಅನುಸಾರವಾಗಿ ಮಕ್ಕಳ ಕಿವಿ, ಮೂಗು ಚುಚ್ಚುವುದು ಹಾಗೂ ಜೈನ ಸಂಪ್ರದಾಯದ ಕೇಶಲೋಚನ ಆಚರಣೆ. ವಾಸ್ತು ಶಾಸ್ತ್ರದ ಕುರಿತು ಜ್ಯೋತಿಷ್ಯರ ಸಲಹೆ ಪಡೆಯುವುದು.