ಚಿಕ್ಕಮಗಳೂರು: ಜಿಲ್ಲೆಯ ಗ್ರಾಪಂ ಕಚೇರಿಯಿಂದ ಜಿಲ್ಲಾ ಧಿಕಾರಿ ಕಚೇರಿ ಸೇರಿದಂತೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಪ್ಲಾಸ್ಟಿಕ್ ಬಾಟಲ್‌ಗಳ ಬಳಕೆಯನ್ನು ಒಂದು ವಾರದೊಳಗೆ ನಿಷೇಧಿ ಸಬೇಕು. ಇಲ್ಲದಿದ್ದರೆ ಜಿಲ್ಲಾ ಧಿಕಾರಿ ಕಚೇರಿ ಎದುರು ಪ್ಲಾಸ್ಟಿಕ್ ಬಾಟಲ್ ಸುರಿದು ಪ್ರತಿಭಟಿಸುವುದಾಗಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಎಚ್ಚರಿಸಿದರು.
ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ಕಚೇರಿಗಳಲ್ಲಿ ಪ್ಲಾಸಿಕ್ ಬಾಟಲಿಗಳ ಬಳಕೆಯನ್ನು ನಿಷೇ ಧಿಸಿ ಸರ್ಕಾರ ಮಾಲಿನ್ಯ ಮಂಡಳಿ ಮೂಲಕ ಆದೇಶ ಹೊರಡಿಸಿದೆ. ಜಿಪಂ ಕೆಡಿಪಿ ಸಭೆಯಲ್ಲೂ ನಿರ್ಣಯ ಕೈಗೊಳಲಾಗಿದೆ. ಈ ಆದೇಶವನ್ನು ಸರ್ಕಾರಿ ಅಧಿ ಕಾರಿಗಳೇ ಉಲ್ಲಂಘಿಸುತ್ತಿದ್ದಾರೆ ಎಂದರು.
ಜಿಲ್ಲಾ ಧಿಕಾರಿ ಕೆ.ಎನ್. ರಮೇಶ್ ಹಾಗೂ ಜಿ ಪಂ ಸಿಇಒ ಪ್ರಭು ಕೂಡಲೇ ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡದಂತೆ ಆದೇಶ ಹೊರಡಿಸಬೇಕು ಹಾಗೂ ಪ್ಲಾಸ್ಟಿಕ್ ಬಳಕೆ ನಿಷೇಧದ ಬಗ್ಗೆ ಸರ್ಕಾರಿ ಕಚೇರಿಗಳಲ್ಲಿ ನಾಮಫಲಕ ಹಾಕಬೇಕು. ಮುಂದಿನ ಒಂದು ವಾರದಲ್ಲಿ ಸರ್ಕಾರಿ ಕಚೇರಿಗಳಲ್ಲಿ ಪ್ಲಾಸ್ಟಿಕ್ ಬಳಕೆ ತಡೆಯದಿದ್ದಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಜಿಲ್ಲಾ ಧಿಕಾರಿ ಕಚೇರಿ ಎದುರು ರಾಶಿ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದರು. ಇತ್ತೀಚೆಗೆ ನಡೆದ ಜಿಪಂ ಕೆಡಿಪಿ ಸಭೆಯಲ್ಲಿ ಅಮೃತ್ ಮಹಲ್ ಕಾವಲ್ ಒತ್ತುವರಿ ಸಮಸ್ಯೆ ಚರ್ಚೆಯಾಗಿದ್ದು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಿಖಾ ಅವರು ನ್ಯಾಯಾಲಯದ ಆದೇಶದಂತೆ ಒತ್ತುವರಿ ತೆರವುಗೊಳಿಸುವುದಾಗಿ ತಿಳಿಸಿದ್ದಾರೆ. ಶೀಘ್ರವೇ ಒತ್ತುವರಿಯನ್ನು ತೆರವುಗೊಳಿಸಬೇಕು.
ಜಿಲ್ಲಾ ಧಿಕಾರಿ ಸೇರಿದಂತೆ ಉನ್ನತ ಅಧಿ ಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ತಿಳಿಸಿದರು. ಜಿಲ್ಲೆಯಲ್ಲಿ ಅಮೃತ್ ಮಹಲ್ ತಳಿ ಸಂರಕ್ಷಿಸುವುದರಲ್ಲಿ ನಿರ್ಲಕ್ಷé ವಹಿಸಲಾಗಿದೆ. ಜಾನುವಾರು ಸಂರಕ್ಷಣೆಗೆ ಸೂಕ್ತ ಶೆಡ್ ನಿರ್ಮಿಸಿಲ್ಲ. ಸ್ವತ್ಛತೆ ಕಾಯ್ದುಕೊಂಡಿಲ್ಲ. ಗೊಬ್ಬರ ಮಾರಾಟದ ಲೆಕ್ಕ ಇಟ್ಟಿಲ್ಲ, ಅಮೃತ್ ಮಹಲ್ ಕಾವಲ್‌ನ 4,500 ಎಕರೆ ಭೂಮಿ ಒತ್ತುವರಿಯಾಗಿದೆ. ಒತ್ತುವರಿಯನ್ನು ಶೀಘ್ರವೇ ತೆರವುಗೊಳಿಸಬೇಕು. ದೇಶದಲ್ಲೇ ಅತ್ಯಂತ ಪ್ರಸಿದ್ಧ ಅಮೃತ್ ಮಹಲ್ ತಳಿ ಸಂರಕ್ಷಣೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಗ್ರಾಪಂಗಳಿಗೆ 15ನೇ ಹಣಕಾಸು ಯೋಜನೆಯಡಿ ರಾಜ್ಯ ಸರ್ಕಾರ ಅನುದಾನ ಬಿಡುಗಡೆಗೊಳಿಸಿದ್ದು, ಅನುದಾನ ಬಳಸದಂತೆ ಸರ್ಕಾರ ಪಂಚಾಯತ್ ಅಧಿ ಕಾರಿಗಳಿಗೆ ಮೌಖೀಕ ಆದೇಶ ಹೊರಡಿಸಿದ್ದಾರೆ. ಇದರಿಂದ ಗ್ರಾಮೀಣ ಅಭಿವೃದ್ಧಿ ಸಾಧ್ಯವಿಲ್ಲ, ಕೂಡಲೇ ಕ್ರಿಯಾಯೋಜನೆ ಕೈಗೊಂಡು ಅನುದಾನ ಸಮರ್ಪಕ ಬಳಕೆಗೆ ಮುಂದಾಗಬೇಕು ಎಂದರು.
ಚಿಕ್ಕಮಗಳೂರು ನಗರಸಭೆಗೆ ಚುನಾವಣೆ ನಡೆಯದೆ ವರ್ಷಗಳೇ ಕಳೆದಿದ್ದು, ಚುನಾವಣಾ ಆಯೋಗ ಮೀಸಲು ಪಟ್ಟಿ ಪ್ರಕಟಿಸಿದೆ. ಬಿಜೆಪಿ ಮುಖಂಡರಿಗೆ ನಗರಸಭೆ ಚುನಾವಣೆ ನಡೆಯುವುದು ಬೇಕಿಲ್ಲ. ಜನಪ್ರತಿನಿ ಧಿಗಳ ಆಡಳಿತ ಮಂಡಳಿ ಬಂದರೆ ದುರಾಡಳಿತ, ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ. ಈ ಕಾರಣಕ್ಕೆ ಮೀಸಲಾತಿ ಕರಡಿನಲ್ಲಿ ಉದ್ದೇಶಪೂರ್ವಕವಾಗಿ ಲೋಪದೋಷ ಇರುವಂತೆ ಬಿಜೆಪಿಯವರೇ ನೋಡಿಕೊಂಡಿದ್ದಾರೆ.
ಮೀಸಲು ಕರಡಿನಲ್ಲಿ ದೋಷಗಳಿದ್ದಲ್ಲಿ ಯಾರಾದರೂ ನ್ಯಾಯಾಲಯದ ಮೊರೆ ಹೋಗುತ್ತಾರೆ. ಇದರಿಂದ ಚುನಾವಣೆ ವಿಳಂಬವಾಗುತ್ತದೆ. ಬಿಜೆಪಿಯವರಿಗೆ ಇದೇ ಬೇಕಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಯುವ ಜನತಾದಳ ಮುಖಂಡರಾದ ಗೋಪಿ, ಪೂರ್ಣೇಶ್, ಪ್ರದೀಪ್, ಕುಮಾರ್ ಇದ್ದರು.