ಬಾಗಲಕೋಟೆ: ಜಿಲ್ಲಾದ್ಯಂತ ಗ್ರಾಮೀಣ ಭಾಗದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದ್ದು, ಕೂಡಲೇ ನಿಷೇಧಿಸುವಂತೆ ಒತ್ತಾಯಿಸಿ ಮದ್ಯಮಾರಾಟ ನಿಷೇಧ ಆಂದೋಲನ ನೇತೃತ್ವದಲ್ಲಿನೂರಾರು ಮಹಿಳೆಯರು ಜಿಲ್ಲಾಡಳಿತ ಭವನದ ಎದುರು ಶುಕ್ರವಾರದಿಂದ ಅನಿರ್ದಿಷ್ಟ ಹೋರಾಟಆರಂಭಿಸಿದ್ದಾರೆ.
ಜಿಲ್ಲೆಯ ವಿವಿಧ ಭಾಗದಿಂದ ಆಗಮಿಸಿರುವ ಮಹಿಳೆಯರು, ಜಿಲ್ಲಾಡಳಿತ ಭವನದ ಎದುರುಧರಣಿ ಆರಂಭಿಸಿ, ಜಿಪಂ ಸಿಇಒ ಟಿ. ಭೂಬಾಲನ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಕಾವಲು ಸಮಿತಿ ರಚಿಸಿ: ಹೋರಾಟದಲ್ಲಿ ಸಂಘಟನೆಯ ಮಹಿಳಾ ಪ್ರಮುಖರು ಮಾತನಾಡಿ, ಜಿಲ್ಲೆಯಾದ್ಯಂತ ಅಕ್ರಮ ಮದ್ಯ ಮಾರಾಟದಿಂದ ಕುಟುಂಬಗಳು ಹಾಳಾಗುತ್ತಿವೆ. ಸರ್ಕಾರ ಮದ್ಯ ಮಾರಾಟದಿಂದ ಗಳಿಸುವ ಆದಾಯಕ್ಕಿಂತ ಆರೋಗ್ಯಇಲಾಖೆಗೇ ಹೆಚ್ಚು ಖರ್ಚು ಮಾಡುತ್ತಿದೆ. ಮದ್ಯ ಸೇವನೆಯಿಂದ ಜನರ ಆರೋಗ್ಯ ಹಾಳಾಗುವ ಜತೆಗೆ ಬಡ ಕುಟುಂಬಗಳು ಬೀದಿ ಪಾಲಾಗುತ್ತಿವೆ. ಮದ್ಯಮಾರಾಟ ನಿಷೇಧಕ್ಕಾಗಿ ಕಳೆದ ಆರು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಕೂಡಲಸಂಗಮದಲ್ಲಿನದಿಯಲ್ಲಿ ನಿಂತು ಹೋರಾಟ ನಡೆಸಿದರೂ ಸರ್ಕಾರ ಎಚ್ಚೆತ್ತುಕೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಯೊಂದು ಗ್ರಾಪಂ ವ್ಯಾಪ್ತಿಯ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ 5 ಜನ ಮಹಿಳೆಯರು ಒಳಗೊಂಡ ಕಾವಲು ಸಮಿತಿ ರಚಿಸಬೇಕು. ಎಲ್ಲೇ ಅಕ್ರಮ ಮದ್ಯ ಮಾರಾಟ ನಡೆದರೂ ಅದನ್ನುತಡೆಗಟ್ಟಲು ಈ ಸಮಿತಿಯ ಕಟ್ಟುನಿಟ್ಟಾಗಿ ಕಾರ್ಯ ನಿರ್ವಹಿಸಲು ಸ್ವತಂತ್ರ ನೀಡಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ಪಂಚಾಯತ್ ರಾಜ್ ಕಾನೂನು 1993ರ ಪ್ರಕಾರ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗಾಗಿ ಪಂಚಾಯಿತಿಗಳಿಗೆ ವಿಶೇಷ ಸಮಿತಿರಚಿಸುವ ಅಧಿಕಾರ ನೀಡಲಾಗಿದೆ. ಈ ಅಧಿಕಾರದಂತೆಸಮಿತಿ ರಚಿಸಲೇಬೇಕು. ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ನಿಲ್ಲಿಸಲು ವಿಶೇಷ ಗ್ರಾಮಸಭೆ ನಡೆಸಲುಅಧಿಕೃತ ಆದೇಶ ಹೊರಡಿಸಬೇಕು. ಗ್ರಾಮ ಸಭೆಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವವರನ್ನು ಗುರುತಿಸಿ ಅವರ ಮೂಲಕ ಕ್ರಮ ಕೈಗೊಳ್ಳಬೇಕು. ಈ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮದ್ಯ ಮಾರಾಟ ನಿಷೇಧ ಆಂದೋಲನದ ಪ್ರಮುಖರಾದ ರೇಣುಕಾ ದೊಡ್ಡಮನಿ, ದುರ್ಗವ್ವ ವಡ್ಡರ, ರೇಣುಕಾ ಕುರಿ, ಮಂಜುಳಾ ಹುಲ್ಲಿಕೇರಿ, ಮೋಕ್ಷಮ್ಮ, ಗಂಗವ್ವ ಕಾರಿಕಂಠಿ, ಸೌಮ್ಯ ವಟವಟಿ, ಯಲ್ಲವ್ವ ಮಾದರ, ಸುವರ್ಣ ತೊಗರಿ, ನಾಗರತ್ನಅಬಕಾರಿ, ಶಂಕರ ಹೂಗಾರ, ಮಲ್ಲಿಕಾರ್ಜುನ ಹೊಸಮನಿ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.