Advertisement

ನಗರದಲ್ಲಿ ಪ್ಲಾಸ್ಟಿಕ್‌ ಬಳಕೆ ನಿಷೇಧಿಸಿ

05:24 PM Apr 26, 2019 | Suhan S |

ಹಾಸನ: ನಗರ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್‌ ಬಳಕೆ ಸಂಪೂರ್ಣ ನಿಷೇಧಿಸಬೇಕು. ಕಪ್ಪುಬಣ್ಣದ ಪ್ಲಾಸ್ಟಿಕ್‌ ಉತ್ಪಾದನೆ ಮಾರಾಟದ ಮೇಲೆ ನಿಗಾ ವಹಿಸಿ ಬಟ್ಟೆ ಬ್ಯಾಗ್‌ಗಳನ್ನು ಕಡಿಮೆ ದರದಲ್ಲಿ ತಯಾರಿಸಿ ಗ್ರಾಹಕರ ಬಳಕೆಗೆ ಲಾಭವಾಗುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಹೇಳಿದರು.

Advertisement

ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಹಾಸನ ನಗರಸಭೆ ವ್ಯಾಪ್ತಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಅಭಿವೃದ್ಧಿ ಯೋಜನೆಗಳು, ಕುಡಿಯುವ ನೀರಿನ ಯೋಜನೆಯ ಮಾಹತಿ ಪಡೆದ ಅವರು, ಹಾಸನ ನಗರದಲ್ಲಿ ಕಸಲೇವಾರಿ ತೃಪ್ತಿಕರವಾಗಿಲ್ಲ. ನಗರಸಭೆ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು. ನಗರದಲ್ಲಿ ಅಂಗಡಿ, ಹೋಟೆಲ್ಗಳ ಸಾರ್ವಜನಿಕರಿಗೆ ಸ್ವಚ್ಛತಾ ಪ್ರಜ್ಞೆ, ಜವಾಬ್ದಾರಿಗಳ ಬಗ್ಗೆ ಅರಿವು ಮೂಡಿಸಬೇಕು. ಎಲ್ಲಾ ಮನೆಗಳಿಂದ ಸ್ವಚ್ಛತಾ ಸೆಸ್‌ ಸಂಗ್ರಹಿಸಬೇಕು ಎಂದರು. ಅಮೃತ್‌ ಯೋಜನೆಯಡಿ ಕೈಗೊಂಡಿರುವ ಕುಡಿಯುವ ನೀರಿನ ಯೋಜನೆಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಉಪವಿಭಾಗಾಧಿಕಾರಿ, ತಹ ಶೀಲ್ದಾರ್‌ ಹಂತದಲ್ಲಿ ಪ್ರತ್ಯೇಕ ಸಭೆ ನಡೆಸುವಂತೆ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು.

ಸ್ವಯಂ ಸೇವಾ ಸಂಸ್ಥೆಗಳು ಕೆರೆಗಳ ಪುನಶ್ಚೇತನ ಹಾಗೂ ಪರಿಸರ ಕಾಳಜಿ ಚಟುವಟಿಕೆಯಲ್ಲಿ ತೊಡಗಿವೆ ಇದೇ ರೀತಿ ನಗರಸಭೆಯಿಂದ ಎಲ್ಲರ ಸಹಕಾರ ದಿಂದ ಕೆರೆ, ವಾರ್ಡ್‌ಗಳ ಅಭಿವೃದ್ಧಿ ಕೈ ಗೊಳ್ಳಬೇಕು ಎಂದರು. ನಗರಸಭೆ ಆಯುಕ್ತೆ ರೂಪಶೆಟ್ಟಿ ಮತ್ತಿತರರು ಸಭೆ ಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next