Advertisement

ಪ್ರಗತಿ ಪಥದ ಜೊತೆಗಾರ: ಲೆಕ್ಕ ಪರಿಶೋಧಕ 

06:23 AM Jul 01, 2018 | Harsha Rao |

ಸಿಎಗಳು ತಮ್ಮ ವೃತ್ತಿಪರ ಪ್ರಾವೀಣ್ಯತೆ ಮತ್ತು ನೈತಿಕತೆಯಿಂದ ಡಾ|  ಕಲಾಂ ಅವರು ಹೇಳಿದಂತೆ ನಮ್ಮ ದೇಶದ ಹಲವು ಉದ್ದಿಮೆಗಳ ಹಾಗೂ ಸಂಸ್ಥೆಗಳ ನಿರ್ವಹಣೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ನಿಜವಾಗಿಯೂ ಸಿಎಗಳು “ದೇಶದ ಪ್ರಗತಿ ಪಥದ ಜೊತೆಗಾರರು’ 

Advertisement

ಜುಲೈ 1, 2017 ರಂದು ಭಾರತದ ಆರ್ಥಿಕ ರಂಗದಲ್ಲಿಯೇ ಅತಿ ಮಹತ್ವದ, ನಮ್ಮ ಆರ್ಥಿಕ ಪ್ರಗತಿಗೆ ಸಹಕಾರಿಯಾಗುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಯನ್ನು ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದರು. ಅದೇ ದಿನ ಸಂಜೆ ಮೋದಿಯವರು ದಿಲ್ಲಿಯಲ್ಲಿ ಸೇರಿದ್ದ ಸಾವಿರಾರು ಚಾರ್ಟರ್ಡ್‌ ಅಕೌಂಟೆಂಟ್‌ಗಳನ್ನು, ಸಿಎ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಈ ಭಾಷಣವನ್ನು ವಿವಿಧ ಚಾನೆಲ್‌ಗ‌ಳು ದೇಶದಾದ್ಯಂತ ಪ್ರಸಾರ ಮಾಡಿದವು. ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ ((ICIA)ಯ ನೂರಾರು ಶಾಖೆಗಳು ತಮ್ಮ ಸಿಎ ಸದಸ್ಯರುಗಳಿಗಾಗಿ, ಸಿಎ ವಿದ್ಯಾರ್ಥಿಗಳಿಗಾಗಿ ಈ ಭಾಷಣದ ನೇರ ಪ್ರಸಾರ ಮಾಡಿದವು. ಜುಲೈ 1 ರಂದೇ ಮೋದಿಯವರು ಸಿಎಗಳನ್ನು ಉದ್ದೇಶಿಸಿ ಮಾತನಾಡಲು ಕಾರಣ ಜುಲೈ 1 ಲೆಕ್ಕಪರಿಶೋಧಕರ ದಿನ (C.A.Day)
ತಮ್ಮ ಭಾಷಣದಲ್ಲಿ ಪ್ರಧಾನಿಯವರು ಸಿಎಗಳನ್ನು ಉದ್ದೇಶಿಸಿ ಹೇಳಿದ್ದು ಹೀಗೆ: “” 1. ನೀವು ದೇಶದ ಆರ್ಥಿಕ ಸ್ವಾಸ್ಥ್ಯ ಹಾಗೂ ಸಾಮಾಜಿಕ ಕ್ಷೇಮದ ಹೊಣೆ ಹೊತ್ತಿರುವ ವೈದ್ಯರುಗಳು. 2.ಆರ್ಥಿಕ ಜಗತ್ತಿನ ಸಂತರು, ಋಷಿಗಳು ನೀವೇ. 3.ಸಿಎಗಳ ದೃಢೀಕರಣ ಪತ್ರ / ಆಡಿಟ್‌ ರಿಪೋರ್ಟುಗಳ ಮೇಲೆ ಇಡೀ ದೇಶ ನಂಬಿಕೆಯಿರಿಸಿದೆ. ಹಾಗಾಗಿ ಆ ನಂಬಿಕೆ ಹುಸಿಗೊಳಿಸಬೇಡಿ. ನಿಮ್ಮಲ್ಲಿರುವ ಅಪ್ರಾಮಾಣಿಕರನ್ನು ತೊಲಗಿಸಿ. 4. ಸ್ವಾತಂತ್ರÂ ಸಂಗ್ರಾಮದಲ್ಲಿ ಭಾಗವಹಿಸಿದ ಅನೇಕ ವಕೀಲರುಗಳಂತೆ, ಭ್ರಷ್ಟಾಚಾರದ ವಿರುದ್ಧ ಈ ಯುದ್ಧದಲ್ಲಿ ನೀವು ಭಾಗವಹಿಸಿ ದೇಶಪ್ರೇಮ ತೋರಿಸಿ. 5. ನೀವು ದೇಶದ ಆರ್ಥಿಕ ವ್ಯವಸ್ಥೆಯ ರಾಯಭಾರಿಗಳು. ನಿಮ್ಮ ಸಹಿ ದೇಶದ ಪ್ರಧಾನಿಯ ಸಹಿಗಿಂತಲೂ ಹೆಚ್ಚು ಬಲಶಾಲಿ. 6. ಭಾರತದ 75ನೇ ಸ್ವಾತಂತ್ರೊàತ್ಸವದ ಸಂದರ್ಭದಲ್ಲಿ (2022) ತಲುಪಲೇ ಬೇಕಾದ ನಿಮ್ಮ (ICIA)ಯ ಗುರಿಯನ್ನು, ಯೋಜನೆಗಳನ್ನು ನಿರ್ಧರಿಸಿರಿ. 7. ಜಗತ್ತಿನಾದ್ಯಂತ ಹರಡಿರುವ ಶೇ.90ಕ್ಕೂ ಹೆಚ್ಚು ಪ್ರಸಿದ್ಧ ಕಂಪೆನಿಗಳ ಲೆಕ್ಕಪರಿಶೋಧನೆ ನಡೆಸುತ್ತಿರುವ ಕೇವಲ 4 ಮಹಾ (ವಿದೇಶಿ) ಲೆಕ್ಕಪರಿಶೋಧನೆ (Big4) ಸ್ಥಾನಗಳನ್ನು ಭಾರತದ 4 ಲೆಕ್ಕಪರಿಶೋಧನಾ ಸಂಸ್ಥೆಗಳು ತುಂಬಲಿ ಎಂದು ಹಾರೈಸುತ್ತೇನೆ.”

ಮೋದಿಯವರ ಈ ಮಾತುಗಳು ಲೆಕ್ಕಪರಿಶೋಧಕರ ಮಹತ್ವ, ಸಮಾಜಕ್ಕೆ ಅವರ ಕೊಡುಗೆ, ದೇಶದ CAಗಳ ಮೇಲಿಟ್ಟಿರುವ ನಿರೀಕ್ಷೆ, ನಂಬಿಕೆಗಳನ್ನು ಸಾರುತ್ತದೆ. ಈ ವರ್ಷ ಮತ್ತೆ ಜುಲೈ 1 ಬಂದಿದೆ. ICIAಗೆ 70 ವರ್ಷ ತುಂಬಿದೆ. ಈ ಸಂದರ್ಭದಲ್ಲಿ ಲೆಕ್ಕ ಪರಿಶೋಧಕರ ಬಗ್ಗೆ ICIA ಬಗ್ಗೆ ಕಿರು ಪರಿಚಯ.

1949ನೇ ಇಸವಿ ಜುಲೈ ತಿಂಗಳ ಒಂದನೇ ತಾರೀಕಿನಂದು ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯ (ಇನ್‌ಸ್ಟಿಟ್ಯೂಟ್‌ ಆಫ್ ಚಾರ್ಟರ್ಡ್‌ ಅಕೌಂಟಂಟ್ಸ್‌ ಆಫ್ ಇಂಡಿಯಾ- ICIA)ಉದಯವಾಯಿತು. ಅಂದಿನಿಂದ ಜುಲೈ ಒಂದನ್ನು “CA Day’ಯಾಗಿ ಆಚರಿಸಲಾಗುತ್ತಿದೆ. ಲೆಕ್ಕ ಪರಿಶೋಧಕ ಎಂದರೆ ತಮ್ಮ ತೆರಿಗೆ ಸಂಬಂಧಿ ವಿಷಯ/ವ್ಯವಹಾರಗಳಿಗೆ ಸಲಹೆ ಮತ್ತು ಸೂಚನೆ ನೀಡುವ ಓರ್ವ ವ್ಯಕ್ತಿ ಎನ್ನುವುದು ಸಾಮಾನ್ಯರ ಕಲ್ಪನೆ. ಇನ್ನು ಕೆಲವರು ಲೆಕ್ಕಪತ್ರಗಳನ್ನು ಬರೆಯುವ ವ್ಯಕ್ತಿಗಳೆಲ್ಲಾ ಲೆಕ್ಕ ಪರಿಶೋಧಕರೆಂದು ತಪ್ಪಾಗಿ ಭಾವಿಸಿರುತ್ತಾರೆ.ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯ ಸದಸ್ಯತ್ವ ಹೊಂದಿದವರು ಮಾತ್ರ “ಚಾರ್ಟರ್ಡ್‌ ಅಕೌಂಟಂಟ್‌ಗಳು’. ICIAಸದಸ್ಯರಲ್ಲದ ವ್ಯಕ್ತಿಗಳು ಲೆಕ್ಕ ಪರಿಶೋಧಕರಾಗಲು ಸಾಧ್ಯವಿಲ್ಲ. ಚಾರ್ಟರ್ಡ್‌ ಅಕೌಂಟೆಂಟ್‌ಗಳು ತೆರಿಗೆ ವಿಷಯ ಹಾಗೂ ಲೆಕ್ಕಪತ್ರಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ನುರಿತವರಾಗಿದ್ದು ಹಲವಾರು ಸೇವೆಗಳನ್ನು ನೀಡುತ್ತಿರುವುದು ನಿಜವಾದರೂ, ಅದಕ್ಕಿಂತ ಮೇಲಾಗಿ ಸಮಾಜದ ಹಿತ, ದೇಶದ ಏಳಿಗೆಯಂತಹ ಹಲವಾರು ಮಹತ್ವದ ಕಾರ್ಯಗಳನ್ನು ಮಾಡುತ್ತಿದ್ದಾರೆ.

ಐಇಐಅಸದಸ್ಯರಲ್ಲಿ ಎರಡು ವರ್ಗದವರಿದ್ದಾರೆ. ಮೊದಲನೆಯ ವರ್ಗದ ಸದಸ್ಯರು ICIAಸದಸ್ಯತ್ವ ಪ್ರಮಾಣಪತ್ರ ಮಾತ್ರವೇ ಹೊಂದಿದ್ದು, ವೃತ್ತಿ ನಿರ್ವಹಣಾ ಪ್ರಮಾಣ ಪತ್ರವನ್ನು ಪಡೆದಿರುವುದಿಲ್ಲ. ಈ ವರ್ಗದ ಸದಸ್ಯರು ಕಂಪನಿಗಳಲ್ಲಿ, ಬ್ಯಾಂಕುಗಳಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ (ಅಧ್ಯಾಪಕರಾಗಿ), ಇನ್ನಿತರ ಸಂಸ್ಥೆಗಳಲ್ಲಿ (ಖಾಸಗಿ ಯಾ ಸರಕಾರಿ/ಅರೆ ಸರಕಾರಿ) ಉದ್ಯೋಗಿಗಳಾಗಿ ದುಡಿಯುತ್ತಿರುತ್ತಾರೆ.

Advertisement

ಇನ್ನೊಂದು ವರ್ಗದ ಸದಸ್ಯರುಗಳು ಐಇಐಅ ಸದಸ್ಯತ್ವದ ಜೊತೆಗೆ ಅದರಿಂದ ವೃತ್ತಿ ನಿರ್ವಹಣಾ ಪ್ರಮಾಣಪತ್ರವನ್ನು ಪಡೆದಿರುತ್ತಾರೆ.ಇಂತಹ ವೃತ್ತಿ ನಿರತ ಸದಸ್ಯರುಗಳು ಸ್ವಂತ ನೆಲೆಯಲ್ಲಿ ಯಾ ಪಾಲುದಾರಿಕೆಯಲ್ಲಿ ಖಾಸಗಿಯಾಗಿ ತಮ್ಮ ಲೆಕ್ಕ ಪರಿಶೋಧನಾ ಕಚೇರಿಗಳನ್ನು ತೆರೆದು ಸ್ವತಂತ್ರರಾಗಿ ಲೆಕ್ಕ ಪರಿಶೋಧನಾ ವೃತ್ತಿಯಲ್ಲಿ ತೊಡಗಲು ಅರ್ಹರಿರುತ್ತಾರೆ. ಈ ವರ್ಗದ ಸದಸ್ಯರುಗಳಿಗೆ ವೃತ್ತಿಧರ್ಮವನ್ನು ಪಾಲಿಸಲು ಐಇಐಅ ಹಲವಾರು ಮಾರ್ಗದರ್ಶಿ ಸೂತ್ರಗಳನ್ನು ಜಾರಿಗೊಳಿಸಿದೆ. ಇದಕ್ಕೆ ತಪ್ಪಿದಲ್ಲಿ ಶಿಸ್ತು ಕ್ರಮ ಎದುರಿಸಲು ಸಿದ್ಧರಿರಬೇಕು.

ಮೊದಲನೆಯ ವರ್ಗದ ಸದಸ್ಯರು ತಮ್ಮ ಉದ್ಯೋಗದಾತರಿಗೆ ಸಾಮಾನ್ಯವಾಗಿ ದೈನಂದಿನ ಲೆಕ್ಕ ಪತ್ರಗಳ ನಿರ್ವಹಣೆ, ಸಂಸ್ಥೆಗೆ ಸಂಬಂಧಿಸಿದ ತೆರಿಗೆಗಳ ಬಗ್ಗೆ ಸಲಹೆ/ನಿರ್ವಹಣೆ, ಆಂತರಿಕ ಲೆಕ್ಕ ಪರಿಶೋಧನೆ, ಹಣಕಾಸಿನ/ಹೂಡಿಕೆಗಳ ನಿರ್ವಹಣೆ, ಸಂಸ್ಥೆಯ ತೆರಿಗೆ ಸಂಬಂಧಿ ತಗಾದೆ, ವ್ಯಾಜ್ಯಗಳ ಉಸ್ತುವಾರಿ, ನಿರ್ವಹಣೆ ಮತ್ತು ನಾನಾ ರೀತಿಯ ಆರ್ಥಿಕ, ವ್ಯಾವಹಾರಿಕ, ಉದ್ದಿಮೆಗಳಿಗೆ ಸಂಬಂಧಿಸಿದ ಕಾಯಿದೆ, ಕಾನೂನುಗಳ ಬಗ್ಗೆ ಸಲಹೆ ಮತ್ತು ಸಮರ್ಥ ನಿರ್ವಹಣೆ ನೋಡಿಕೊಳ್ಳುತ್ತಾರೆ.

ವೃತ್ತಿ ನಿರತ ಸದಸ್ಯರು ಈ ಮೇಲೆ ಹೇಳಿದ ಎಲ್ಲಾ ಸೇವೆಗಳನ್ನು ಸ್ವತಂತ್ರವಾಗಿ ನಿರ್ವಹಿಸುವುದರ ಜೊತೆಗೆ ವಿವಿಧ ರೀತಿಯ ದಾಖಲೆ, ಅಂಕಿಅಂಶ, ವರಮಾನ ಮುಂತಾದವುಗಳ ಪ್ರಮಾಣೀಕರಣ ಮಾಡಲು ಅರ್ಹರಿರುತ್ತಾರೆ. ವೃತ್ತಿ ನಿರತ CA ICIAಪ್ರಚುರ ಪಡಿಸಿದ ಲೆಕ್ಕ ಪತ್ರ ಸಂಬಂಧಿ, ವೃತ್ತಿ ಸಂಬಂಧಿ ಹಾಗೂ ನೈತಿಕ ಮಾನದಂಡಗಳನ್ನು ಪಾಲಿಸುತ್ತಾ ಲೆಕ್ಕ ಪರಿಶೋಧನೆ ಹಾಗೂ ಅದಕ್ಕೆ ಸಂಬಂಧಿಸಿದ ಕಾರ್ಯಗಳನ್ನು ಮಾಡುತ್ತಾರೆ.ICIAಯ ಈ ಮಾನದಂಡಗಳು ಉನ್ನತ ಮಟ್ಟದ್ದಾಗಿದ್ದು ಬಹುಮಾನ್ಯತೆ ಪಡೆದಿದ್ದು ICIA ಸದಸ್ಯರುಗಳು ಜಾಗತಿಕವಾಗಿ ಗುರುತಿಸಲ್ಪಟ್ಟಿದ್ದಾರೆ. ಲೆಕ್ಕ ಪರಿಶೋಧನೆಯನ್ನು ಪರಿಣಾಮ ಕಾರಿಯಾಗಿ ಮತ್ತು ನಂಬಲರ್ಹವಾಗಿ ಮಾಡುವ ಕಾರಣದಿಂದಾಗಿ ನಮ್ಮ ದೇಶದ ಕೆಲವೊಂದು ಕಾಯಿದೆ ಕಾನೂನುಗಳಲ್ಲಿ ಲೆಕ್ಕ ಪರಿಶೋಧನೆಯನ್ನು ಕಡ್ಡಾಯವಾಗಿ ಇಅಗಳೇ ಮಾಡಬೇಕೆಂದೂ ಮತ್ತು ಅವರು ನೀಡುವ ವರದಿಯ ಮೇಲೆ ಕಾನೂನಿನ ಕ್ರಮಕೈಗೊಳ್ಳುವ ಬಗ್ಗೆ ಉಲ್ಲೇಖವಿದೆ.

ಈ ರೀತಿಯ ಲೆಕ್ಕ ಪರಿಶೋಧಕರು ನಡೆಸುವ ಲೆಕ್ಕ ಪರಿಶೋಧನೆ, ನೀಡುವ ವರದಿ/ಪ್ರಮಾಣಪತ್ರಗಳು ಯಾವುದೇ ಸಂಘ, ಸಂಸ್ಥೆ, ಕಂಪೆನಿಯ ಅಳಿವು  -ಉಳಿವು, ಪ್ರಗತಿ, ಬೆಳವಣಿಗೆಯಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ. 

“ಹಲವಾರು ವರ್ಷಗಳಿಂದ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ ಹಾಗೂ ಅದರ ಸದಸ್ಯರು ತಮ್ಮ ಜ್ಞಾನದ ಶಾಖೆಗಳನ್ನು, ಲೆಕ್ಕಪತ್ರ ಶಾಸ್ತ್ರದ ಮಜಲುಗಳನ್ನು ಅಭಿವೃದ್ಧಿಗೊಳಿಸುತ್ತಾ ಬಂದಿದ್ದಾರೆ. ನಮ್ಮ ರಾಷ್ಟ್ರೀಯ ಅಗತ್ಯಗಳಲ್ಲೊಂದು – ಹೂಡಿಕೆಗಳಿಂದ ಹೇಗೆ ಅತ್ಯಧಿಕ ಆರ್ಥಿಕ ಲಾಭಗಳನ್ನು ಗಳಿಸುವುದು? ನಿಮ್ಮ (CAಗಳ) ಮೂಲಭೂತ ನೈಪುಣ್ಯತೆ ಇದರಲ್ಲಿದೆ.ಸಿಎಗಳಿಗೆ ಲೆಕ್ಕ ಪರಿಶೋಧನೆಯ, ಆರ್ಥಿಕ ಸಲಹೆಯ, ಹಣಕಾಸಿನ ನಿರ್ವಹಣೆಯ ಬಗ್ಗೆ ಸಂಪೂರ್ಣ ಅನುಭವ, ಪ್ರಾವೀಣ್ಯವಿದೆ. ಹಾಗಾಗಿ ಹಲವು ಉದ್ದಿಮೆಗಳ ಹಾಗೂ ಸಂಸ್ಥೆಗಳ ನಿರ್ವಹಣೆ ಅವರಿಂದ ಮಾತ್ರ ಸಾಧ್ಯ’. ಇದು ಭಾರತದ ಮಾಜಿ ರಾಷ್ಟ್ರಪತಿ ಡಾ| ಎ.ಪಿ.ಜೆ. ಅಬ್ದುಲ್‌ ಕಲಾಂ ಅವರು 2005ರಲ್ಲಿ ಸಿಎಗಳ ಸಮಾವೇಶದಲ್ಲಿ ನುಡಿದ ಮಾತುಗಳು.

ಭಾರತ ಸರಕಾರದ ಕಂಪನಿ ವ್ಯವಹಾರಗಳ ಸಚಿವಾಲಯದ ನಿರ್ವಹಣಾ ನಿಯಂತ್ರಣಕ್ಕೊಳಪಟ್ಟು ICIAಕಾರ್ಯ ನಿರ್ವಹಿಸುತ್ತಿದೆ. ICIAಯಲ್ಲಿ 5 ಪ್ರಾದೇಶಿಕ ಮಂಡಳಿಗಳಿದ್ದು ದೇಶದಾದ್ಯಂತ 150 ಶಾಖೆಗಳೂ, ವಿದೇಶಗಳಲ್ಲಿ 26 ಚಾಪ್ಟರ್‌ಗಳು ಕಾರ್ಯನಿರ್ವಹಿಸುತ್ತಿವೆ. 66 ವರ್ಷಗಳ ಹಿಂದೆ ಕೇವಲ 1700 ಸದಸ್ಯರಿಂದ ಸ್ಥಾಪಿತವಾದ ಈ ಸಂಸ್ಥೆಯಲ್ಲಿ ಈಗ 2,85,000ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಸುಮಾರು 8,75,000ಕ್ಕೂ ಹೆಚ್ಚು ಸಿ.ಎ. ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ICIAಲೆಕ್ಕಪತ್ರಗಳಿಗೆ, ಲೆಕ್ಕ ಪರಿಶೋಧನೆಗೆ ಸಂಬಂಧಿಸಿದ ಭಾರತದ ಪ್ರಮುಖ ಸಂಸ್ಥೆಯಾಗಿದೆ. ಸದಸ್ಯರ ಸಂಖ್ಯೆಗೆ ಹೋಲಿಸಿದಲ್ಲಿ ಇಂತಹ ಸಂಸ್ಥೆಗಳಲ್ಲಿ ವಿಶ್ವದಲ್ಲಿಯೇ ಎರಡನೇ ಸ್ಥಾನದಲ್ಲಿದೆ.

ICIAನೀಡುವ ಸಿಎ ಪದವಿಗೆ ದೇಶಾದ್ಯಂತ ಮಾತ್ರವಲ್ಲದೆ ವಿದೇಶಗಳಲ್ಲೂ ಬೇಡಿಕೆಯಿದೆ. ಇದು ಸಾಧ್ಯವಾಗಿರುವುದು ಅದರ ಶಿಕ್ಷಣ, ತರಬೇತಿ ಮತ್ತು ಪರೀಕ್ಷೆಗಳ ಗುಣಮಟ್ಟ ದಿಂದಾಗಿ. ಸಿಎ ಶಿಕ್ಷಣ, ತರಬೇತಿ ಮತ್ತು ಪರೀಕ್ಷೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಐ.ಎಫ್.ಎ.ಸಿ.ಯಿಂದ ಗುರುತಿ ಸಲ್ಪಟ್ಟಿದೆ. ಸಿಎ ಶಿಕ್ಷಣ ಮತ್ತು ತರಬೇತಿಗಳು ಜತೆಯಾಗಿ ಸಾಗಿ ವಿದ್ಯಾರ್ಥಿಗಳು ಪರಿಪೂರ್ಣವಾಗಿ ಲೆಕ್ಕಪತ್ರಗಳ ನಿರ್ವಹಣೆಯ, ಲೆಕ್ಕ ಪರಿಶೋಧನೆಯ, ಆರ್ಥಿಕ ಸಲಹೆಯ, ಹಣಕಾಸಿನ ನಿರ್ವ ಹಣೆಯ ಪ್ರಾವೀಣ್ಯ ಸಾಧಿಸುವಲ್ಲಿ ನೆರವಾಗುತ್ತವೆ. ಒಬ್ಬ ಸಿಎ ತನ್ನ ವೃತ್ತಿಯಲ್ಲಿ ಅತ್ಯುನ್ನತವಾದ ವೃತ್ತಿಪರ ನೈತಿಕತೆಯನ್ನು ಹೊಂದಿರುತ್ತಾನೆ. ICIA ಈ ನಿಟ್ಟಿನಲ್ಲಿ ತನ್ನ ಸದಸ್ಯರಿಗಾಗಿ ಹಲವಾರು ನೈತಿಕ ಮಾನದಂಡಗಳನ್ನು ತಂದಿದೆ. ಉದಾಹರಣೆಗೆ:

– ಸಿಎ ತನ್ನ ವೃತ್ತಿಯ ಜೊತೆ ಇನ್ನಿತರ ವೃತ್ತಿ/ವ್ಯವಹಾರ ನಡೆಸುವಂತಿಲ್ಲ
– ಕಕ್ಷಿಗಾರರನ್ನು ಸೆಳೆಯುವಂತಿಲ್ಲ
– ಜಾಹೀರಾತು, ಪ್ರಭಾವ, ಪ್ರಚಾರ ಮಾಡುವಂತಿಲ್ಲ

ಹಾಗಾಗಿ ಸಿಎಗಳು ತಮ್ಮ ವೃತ್ತಿಪರ ಪ್ರಾವೀಣ್ಯತೆ ಮತ್ತು ನೈತಿಕತೆಯಿಂದ ಡಾ| ಎ.ಪಿ.ಜೆ. ಅಬ್ದುಲ್‌ ಕಲಾಂ ಅವರು ಹೇಳಿದಂತೆ ನಮ್ಮ ದೇಶದ ಹಲವು ಉದ್ದಿಮೆಗಳ ಹಾಗೂ ಸಂಸ್ಥೆಗಳ ನಿರ್ವಹಣೆಯಲ್ಲಿ ಮುಂಚೂಣಿಯಲ್ಲಿದ್ದಾರೆ. 

ನಿಜವಾಗಿಯೂ ಸಿಎಗಳು ICIA ಹೇಳುವಂತೆ “ದೇಶದ ಪ್ರಗತಿ ಪಥದ ಜೊತೆಗಾರರು’ (Partners in nation building).

– ಭಾರತೀಶ ಬಲ್ಲಾಳ

Advertisement

Udayavani is now on Telegram. Click here to join our channel and stay updated with the latest news.

Next