ಮುಳಬಾಗಿಲು: ಡಿಸಿಸಿ ಬ್ಯಾಂಕ್ ಮಾದರಿ ಬ್ಯಾಂಕ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಶೀಘ್ರದಲ್ಲೇಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆ ರೈತರು ಸಾಲ ಕೇಳಿದಅರ್ಧ ಗಂಟೆಯಲ್ಲೇ ಸಾಲ ನೀಡಲು ಸುಸಜ್ಜಿತವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಡಿಸಿಸಿ ಬ್ಯಾಂಕ್‌ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.
ಮುಳಬಾಗಿಲು ಡಿಸಿಸಿ ಬ್ಯಾಂಕ್ ಶಾಖಾ ಕಚೇರಿಯಲ್ಲಿ ವಿಎಸ್‌ಎಸ್‌ಎನ್ ಅಧ್ಯಕ್ಷ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಸಭೆ ನಡೆಸಿ ಪ್ರಗತಿ ಪರಿಶೀಲನೆ ಬಗ್ಗೆ ಮಾಹಿತಿ ನೀಡಿದ ಅವರು, ತಾಲೂಕಿನ 24 ವಿಎಸ್‌ಎಸ್‌ಎನ್‌ಗಳಿಂದ ಸಂಗ್ರಹ 2 ಕೋಟಿ ರೂ.ಠೇವಣಿ ಹಣ ಬ್ಯಾಂಕಿಗೆ ಜಮೆ ಮಾಡಿದ್ದು,ಇನ್ನೂ 6 ಕೋಟಿ ರೂ.ಗುರಿಯನ್ನು ಮಾ.28ರವರೆಗೆಮುಟ್ಟಬೇಕು. ತಾಲೂಕಿನಿಂದ 8 ಕೋಟಿ ರೂ. ಠೇವಣಿ ಸಂಗ್ರಹಿಸುವ ಗುರಿ ಪೂರ್ಣವಾಗಬೇಕು ಎಂದರು.
ಜಿಲ್ಲೆಯಲ್ಲಿ 100 ಕೋಟಿ ರೂ.ಠೇವಣಿ ಸಂಗ್ರ ಹಣೆ ಮೂಲಕ ಬ್ಯಾಂಕಿನ ಆರ್ಥಿಕ ಚಟುವಟಿಕೆಗಳು ಅಭಿವೃದ್ಧಿ ಪಥದತ್ತ ಸಾಗಬೇಕಾಗಿದೆ. ಇದಕ್ಕೆ ವಿಎಸ್‌ಎಸ್‌ಎನ್ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಹಾಗೂ ಆಡಳಿತ ಮಂಡಳಿನಿರ್ದೇಶಕರು ಸಮ ರೋಪಾದಿಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದರು.
ಸತ್ಯಾಗ್ರಹದಿಂದ ವಸೂಲಿ ಮಾಡಿ: ಎಂಎಸ್ ಐಎಲ್ ಗೋದಾಮು ಸ್ಥಾಪನೆಗೆ ಬ್ಯಾಂಕ್ ಮುಂ ದಾ ಗಿದೆ. ಎಲ್ಲ ವಿಎಸ್‌ಎಸ್‌ಎನ್ ಗಣಕೀಕೃತ ಗೊಂಡಿದ್ದು, ಆನ್‌ಲೈನ್ ಮೂಲಕವೇ ವ್ಯವಹಾರ ಮಾಡಲಾಗುತ್ತಿದೆ. ಇ-ಶಕ್ತಿ ಆ್ಯಪ್‌ಗ್ಳು ಅಪ್‌ಲೋಡ್‌ಮಾಡಲಾಗುತ್ತಿದೆ. ಮೈಕ್ರೋ ಎಟಿಎಂ ಮೂಲಕ ಮಹಿಳಾ ಸ್ವ-ಸಹಾಯ ಸಂಘ ಸೇರಿ ಖಾತೆದಾರರಿಗೆ ಆರ್ಥಿಕ ವ್ಯವಹಾರಗಳು ಮನೆ ಬಾಗಿಲಿಗೆ ನೀಡ ಬೇಕಾಗಿದೆ. ಸಾಧನೆ ಕೇವಲ 20 ರಷ್ಟು ಆಗಿದ್ದು, ಇನ್ನೂ 80ರಷ್ಟು ಸಾಧನೆ ಮಾಡ ಬೇಕಾಗಿದೆ. ಕೋಲಾರ- ಚಿಕ್ಕಬಳ್ಳಾ ಪುರ ಜಿಲ್ಲೆಗಳ ವಿಎಸ್‌ಎಸ್ ಎನ್ ಆಡಳಿತ ಮಂಡಳಿ ಕಾರ್ಯ ನಿರ್ವಹಿಸ ಬೇ ಕು. ಸಾಲ ಪಡೆದ ವರು ಮರು ಪಾವತಿ ಮಾಡದಿದ್ದಲ್ಲಿ ಅವರ ಮನೆ ಬಾಗಿಲಿ ನಲ್ಲಿ ಸತ್ಯಾಗ್ರಹ ಮಾಡಿವಸೂಲಿ ಮಾಡ ಬೇಕಾಗಿದೆ ಎಂದು ಸೂಚಿಸಿದರು.
ಸಹಕಾರ ಇಲಾಖೆ ಎ.ಅರ್.ಸಿ.ಎಸ್.ನೀಲಪ್ಪ ನವರ್, ಡಿಸಿಸಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಶಿವ ಕುಮಾರ್, ಠೇವಣಿ ಘಟಕದ ವ್ಯವಸ್ಥಾಪಕ ದೊಡ್ಡ ಮುನಿ, ಕೇಂದ್ರ ಬ್ಯಾಂಕ್ ವ್ಯವಸ್ಥಾಪಕ ಕೀಲಂ ಉಲ್ಲ, ಮುಳಬಾಗಿಲು ಶಾಖಾ ಬ್ಯಾಂಕ್ ವ್ಯವಸ್ಥಾಪಕ ಸಿ.ಚೆಲುವಸ್ವಾಮಿ, ರಾಮಕೃಷ್ಣಾರೆಡ್ಡಿ, ಪೆತ್ತಾಂಡ್ಲಹಳ್ಳಿಪಿ.ಎಂ.ಸೂರ್ಯನಾರಾಯಣಗೌಡ, ಪಿ.ಎಸ್. ರಮೇಶ್ ಬಾಬು ಇದ್ದರು.
ಜನೌಷಧ ಕೇಂದ್ರ ತೆರೆಯಲು ಸಿದ್ಧ :
ಪ್ರತಿ ವಿಎಸ್‌ಎಸ್‌ಎನ್‌ನಲ್ಲಿ ಪ್ರಧಾನಮಂತ್ರಿಜನೌಷಧ ಕೇಂದ್ರ ತೆರೆಯಲು ಸಿದ್ಧರಾಗಬೇಕುಕೃಷಿ ಉತ್ಪನ್ನ, ಗೃಹ ಉತ್ಪನ್ನ ಮಾರಾಟ ಮಾಡುವಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು.ಆಗಲೇ ಸಂಘ ಅಭಿವೃದ್ಧಿ ಪಥ ದತ್ತ ಸಾಗಲುಸಾಧ್ಯ. ಇದರಿಂದ ಸ್ಥಳೀಯ ವಾಗಿ ಉದ್ಯೋಗಲಭ್ಯವಾಗುತ್ತದೆ. ನಗರದ ಮೇಲೆ ಅವಲಂಬನೆಕಡಿಮೆಯಾಗುತ್ತದೆ. ಕೃಷಿ ಮತ್ತಿತರಚಟುವಟಿಕೆಗಳಿಗೆ ಹೆಚ್ಚು ಸಮಯ ನೀಡಲುಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಬ್ಯಾಲಹಳ್ಳಿ ಗೋವಿಂದಗೌಡ ಸಲಹೆ ನೀಡಿದರು.