Advertisement

ಅನುಸೂಚಿತ ಜಾತಿಗಳ ಉಪಯೋಜನೆ ಸಭೆ : ನೂರು ಪ್ರತಿಶತ ಗುರಿ ತಲುಪಲು ಡಿಸಿ ಸೂಚನೆ

05:03 PM Nov 26, 2020 | Suhan S |

ಯಾದಗಿರಿ: ಅನುಸೂಚಿತ ಜಾತಿಗಳ ಹಾಗೂ ಬುಡಕಟ್ಟು ಉಪ ಯೋಜನೆಯ ಅನುದಾನದ ಪ್ರಗತಿಯಲ್ಲಿ ಎಲ್ಲಾ ಇಲಾಖೆಗಳು ನೂರು ಪ್ರತಿಶತ ಗುರಿ ತಲುಪುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ| ರಾಗಪ್ರಿಯ ಆರ್‌ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಎಸ್ಸಿ, ಎಸ್ಪಿ ಹಾಗೂ ಟಿಎಸ್ಪಿ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಬಂಧಿಸಿದ ಅಧಿಕಾರಿಗಳಿಂದ ಪ್ರಗತಿಯ ಮಾಹಿತಿ ಪಡೆದರು. ಇಲಾಖೆಗಳು ಎಸ್ಸಿ-ಎಸ್ಪಿ ಹಾಗೂ ಟಿಎಸ್ಪಿ ಅನುದಾನವನ್ನು ಸರಿಯಾಗಿ ಬಳಕೆ ಮಾಡಿಕೊಂಡು ಅವಶ್ಯಕವಾದ ಗುಣಮಟ್ಟದ ಕೆಲಸವನ್ನು ಮಾಡುವಂತೆ ಸೂಚಿಸಿದರು.

ಸಿಎಚ್‌ಡಿ ಯೋಜನೆಯ ಅನುದಾನದಲ್ಲಿ 2ರಲ್ಲಿ 1 ಪೂರ್ಣಗೊಳಿಸುವ ಮೂಲಕ 56.82%, ರಾಷ್ಟ್ರೀಯ ತೋಟಗಾರಿಕಾ ಮಿಷನ್‌ ಅಡಿಯಲ್ಲಿ ಶೇ.7.32 ಸೇರಿದಂತೆ ಒಟ್ಟಾರೆ 50.55% ಗುರಿಯನ್ನು ಸಾಧಿ ಸಲಾಗಿದೆ. ಜೆಸ್ಕಾಂ ವ್ಯಾಪ್ತಿಯಲ್ಲಿ ಗಂಗಾ ಕಲ್ಯಾಣ ಯೋಜನೆಯಲ್ಲಿ 172 ಕಾಮಗಾರಿಗಳಲ್ಲಿ 139 ಪೂರ್ಣಗೊಂಡಿದ್ದು, 35.94 ಪ್ರತಿಶತ ಹಾಗೂ ಅನುಸೂಚಿತ ಜಾತಿಗಳ ಕಾಲೋನಿಗಳಲ್ಲಿನ 68 ಕಾಮಗಾರಿಗಳಲ್ಲಿ 12 ಕಾಮಗಾರಿಗಳನ್ನು ಪೂರ್ಣಗೊಳಿಸುವ ಮೂಲಕ ಶೇ.11.25 ಗುರಿಯನ್ನು ಸಾಧಿಸಲಾಗಿದೆ. ಎಸ್ಸಿ-ಎಸ್ಪಿ ಹಾಗೂ ಟಿಎಸ್ಪಿ ಅನುದಾನಕ್ಕೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆ ಎಲ್ಲರೊಡನೆಯು ನಿರಂತರ ಸಂಪರ್ಕ ಹೊಂದುವುದು ಮತ್ತು ನಿಗದಿತ ಅವಧಿಯಲ್ಲಿ ಪ್ರಗತಿ ವರದಿ ತಯಾರಿಸಬೇಕು ಎಂದು ಸೂಚಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್‌ ಸೋನವಣೆ, ಜಿಪಂ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಚನ್ನಬಸವ, ಶ್ರೀನಿವಾಸರೆಡ್ಡಿ, ಜಾಗೃತಿ ಸಮಿತಿ ಸದಸ್ಯರಾದ ನಾಗರಾಜ, ರಮೇಶ, ರಮಾದೇವಿ ಸೇರಿದಂತೆ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next