Advertisement
ಅವರು ಬೆಜ್ಜ ಧೂಮಾವತಿ ಬಂಟ ದೈವಗಳ ಕ್ಷೇತ್ರದ ಶ್ರೀ ದೈವಗಳ ಭಂಡಾರ ಮನೆಯ ಪುನ: ಪ್ರತಿಷ್ಠಾ ಬ್ರಹ್ಮಕಲಶೋತ್ಸವದಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಕೃಷ್ಣ ಪೂಜಾರಿ ದೇರಂಬಳ ವಹಿಸಿದ್ದರು. ವಿಶ್ವ ಹಿಂದೂ ಪರಿಷತ್ ಮಾತೃ ಮಂಡಳಿ ಜಿಲ್ಲಾ ಅಧ್ಯಕ್ಷೆ ಮೀರಾ ಆಳ್ವ, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಕೌಡೂರು ಬೀಡು ಮಾರಪ್ಪ ಭಂಡಾರಿ, ಮೀಂಜ ಗ್ರಾಮ ಪಂಚಾಯತ್ ಸದಸ್ಯೆ ಕುಸುಮ ಮೋಹನ್ ಶುಭಾಶಂಸನೆಗೈದರು.
ಭಂಡಾರ ಮನೆಯ ನಿರ್ಮಾಣದ ಕಾಷ್ಠ ಶಿಲ್ಪಿ ಬಾಬುರಾಜ ಆಚಾರ್ಯ ಕಡಂಬಾರು ಹಾಗೂ ಕಲ್ಲಿನ ಕೆಲಸ (ಮೇಸ್ತ್ರಿ)ವನ್ನು ಪೂರೈಸಿದ ಬಾಲಕೃಷ್ಣ ಶೆಟ್ಟಿ ಕಡಂಬಾರು ಅವರನ್ನು ಬ್ರಹ್ಮಕಲಶೋತ್ಸವ ಸಮಿತಿ ವತಿಯಿಂದ ಶಾಲು ಹೊದೆಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಅನನ್ಯ ಪ್ರಾರ್ಥನೆ ಹಾಡಿದರು. ದುರ್ಗಾ ಮಾತೃ ಮಂಡಳಿ ಬೆಜ್ಜದ ಅಧ್ಯಕ್ಷೆ ಶೋಭಾ ಸ್ವಾಗತಿಸಿ, ಶಶಿ ಕುಮಾರ್ ಕುಳೂರು ಕಾರ್ಯಕ್ರಮ ನಿರೂಪಿಸಿ, ಚಂದ್ರಹಾಸ ಶೆಟ್ಟಿ ಬೆಜ್ಜ ವಂದಿಸಿದರು. ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದರಿಂದ ಬಂಜಿಗ್ ಹಾಕೋಡಿc ನಾಟಕ ಪ್ರದರ್ಶನಗೊಂಡಿತು. ಹೊಸಂಗಡಿ ಅಯ್ಯಪ್ಪ ಕ್ಷೇತ್ರದಿಂದ ವಾದ್ಯಘೋಷ ಗಳೊಂದಿಗೆ, ಸಂಘ ಸಂಸ್ಥೆ, ಮಠ, ಮಂದಿರಗಳ ಸಹಕಾರದೊಂದಿಗೆ, ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಹರಿದು ಬಂತು. ತಂತ್ರಿವರ್ಯರ ಆಗಮನದೊಂದಿಗೆ ಪೂರ್ಣಕುಂಭ ಸ್ವಾಗತ, ವಿವಿಧ ವೇದಿಕೆ ಕಾರ್ಯಕ್ರಮಗಳು ನಡೆಯಿತು.
Related Articles
ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿ, ದೈವಗಳ ಆರಾಧನೆ ಪ್ರಾಚೀನ ಕಾಲದಿಂದಲೇ ಆಚರಿಸುತ್ತಾ ಬಂದಿರುವ ಆಚರಣೆ. ಅವುಗಳ ಆಚರಣೆಯ ಪದ್ಧತಿ ಉಳಿದವುಗಳಿಗಿಂತ ಭಿನ್ನವಾಗಿದೆ. ಸನಾತನ ಧರ್ಮದ ಸಂಸ್ಕಾರ ಹಾಗೂ ಆಚರಣೆಗಳು ಸದಾ ಸನ್ಮಾರ್ಗದೆಡೆಗೆ ನಮ್ಮನ್ನು ಮುನ್ನಡೆಸುತ್ತವೆ. ಇದು ಪುರಾಣ ಇತಿಹಾಸಗಳಲ್ಲಿಯೂ ಉಲ್ಲೇಖನಿಯವಾಗಿರುವುದು ಕಂಡು ಬರುತ್ತದೆ. ಆದ್ದರಿಂದ ಪ್ರತಿ ಆಚರಣೆಗಳಲ್ಲೂ ದೈವಿಕ ಮಹತ್ವವನ್ನು ಪಾಲಿಸುವುದು ಕರ್ತವ್ಯ ಎಂದರು.
Advertisement