Advertisement

ದೇವರಿಗೆ ಭಕ್ತಿ ಭಾವದ ಸಮರ್ಪಣೆಯೇ ಮುಖ್ಯ

04:16 PM May 22, 2021 | Team Udayavani |

ರಾಮನಗರ: ಹಬ್ಬ-ಹರಿದಿನಗಳಲ್ಲಿ ದೇವರಿಗೆ ನಾವುಎನನ್ನು ಅರ್ಪಿಸಿದೆವು ಎಂಬುದು ಮುಖ್ಯವಲ್ಲ,ಯಾವ ಭಾವದಿಂದ ಅರ್ಪಿಸಿದ್ದೇವೆ ಎಂಬುದೇಮುಖ್ಯವಾಗಿದೆ ಎಂದು ಶ್ರೀ ವಾಸವಿ ಪೀಠಾದಿಪತಿಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

Advertisement

ಶುಕ್ರವಾರ ವಾಸವಿ ಜಯಂತಿ ಅಂಗವಾಗಿ ನಗರದ ಎಂ.ಜಿ.ರಸ್ತೆಯಲ್ಲಿರುವ ಶ್ರೀ ಕನ್ನಿಕಾಪರಮೇಶ್ವರಿ ಅಮ್ಮನವರ ದೇವಾಲಯದಲ್ಲಿ ನಡೆದ ಪೂಜಾಕೈಂಕರ್ಯಗಳ ನೇರ ಪ್ರಸಾರದಲ್ಲಿ ಆಶೀವರ್ಚನನೀಡಿದ ಅವರು, ವಾಸವಿ ಜಯಂತಿ ಹಿಂದಿನ ತತ್ವಗಳನ್ನು ಕಿರಿಯರಿಗೆ ತಿಳಿಸಿಕೊಡಬೇಕು. ದೇವರಿಗೆಭಕ್ತಿಯಿಂದ ಒಂದೇ ಒಂದು ಹೂ ಅಥವಾ ಒಂದುಉದ್ದರಣೆ ನೀರು ಅಥವಾ ಒಂದೇ ಒಂದು ಫ‌ಲವನ್ನು ನೀಡಿದರು ದೇವರು ಸ್ವೀಕರಿಸಿ ಆಶೀರ್ವದಿಸುತ್ತಾನೆ ಎಂದು ಹೇಳಿದರು.

ಕೋವಿಡ್ಮುಕ್ತ ವಿಶ್ವಕ್ಕಾಗಿ ಪ್ರಾರ್ಥಿಸಿ: ಕರ್ನಾಟಕ ಆರ್ಯವೈಶ್ಯ ಮಹಾಸಭಾದ ಅಧ್ಯಕ್ಷ ರಾ.ಪ.ರವಿಶಂಕರ್‌ ಮಾತನಾಡಿ, ವಾಸವಿ ಜಯಂತಿಯ ಈಸಂದರ್ಭದಲ್ಲಿ ಸಕಲರು ಪ್ರಾರ್ಥಿಸಿ ಇಡೀ ಜಗತ್ತುಕೋವಿಡ್‌ ಸಾಂಕ್ರಮಿಕ ರೋಗದಿಂದ ಮುಕ್ತಗೊಳಿಸುವಂತೆ ಪ್ರಾರ್ಥನೆ ಮಾಡಿ ಎಂದರು.ಆರ್ಯವೈಶ್ಯ ಸಮುದಾಯ ಪ್ರತಿ ವರ್ಷವಾಸವಿ ಜಯಂತಿಯನ್ನು ವಾಸವಿ ದೇವಾಲಯಗಳ ಜತೆಗೂಡಿ ಆಚರಿಸುವುದು ವಾಡಿಕೆ, ಆದರೆ ಈಬಾರಿ ಕೋವಿಡ್‌ ಹಿನ್ನೆಲೆ ಇದು ಸಾಧ್ಯವಾಗಿಲ್ಲ.ಆದರೆ ಪ್ರತಿಯೊಂದು ಕುಟುಂಬವೂ ತಮ್ಮ ಮನೆಗಳಲ್ಲೇ ಪೂಜಿಸಿ ಕೃತಾರ್ಥರಾಗಿದ್ದಾರೆ ಎಂದರು.

ಕೋವಿಡ್‌ ಸೋಂಕು ಆರ್ಯವೈಶ್ಯರನ್ನು ಬಾಧಿಸಿದೆ. ಆದರೆ ಶೇ 90ಕ್ಕೂ ಹೆಚ್ಚು ಮಂದಿ ಗುಣಮುಖರಾಗಿದ್ದಾರೆ. ಕೋವಿಡ್‌ ಲಾಕ್‌ಡೌನ್‌ ಮುಗಿದಾಕ್ಷಣ ಕೋವಿಡ್‌ ಮುಕ್ತಾವಾಯಿತು ಎಂಬ ಭಾವನೆಬೇಡ ಎಂದು ಎಚ್ಚರಿಸಿದ ಅವರು, ಇದು ಕ್ಲಿಷ್ಟಸಂದರ್ಭ ಹೀಗಾಗಿ ಸಮಾಜದಲ್ಲಿ ಪರಸ್ಪರ ಸಹಕಾರ ಮುಖ್ಯ. ಹಸಿದವರಿಗೆ ಆಹಾರ, ಶಿಕ್ಷಣಾರ್ಥಿಗಳಿಗೆ ಸಹಕಾರ, ಔಷಧೋಪಚಾರಕ್ಕೆ ಸಹಕಾರ ನೀಡುವಂತೆ ಮತ್ತು ಸರ್ಕಾರದ ಮಾರ್ಗಸೂಚಿಗಳನ್ನುತಪ್ಪದೆ ಪಾಲಿಸಿ ಎಂದರು. ಸುಮಾರು 2 ಗಂಟೆಗಳಕಾಲ ದೇಗುಲದಲ್ಲಿ ನಡೆದ ಕಾರ್ಯಕ್ರಮಗಳ ಕುರಿತುನೇರ ಪ್ರಸಾರ ವ್ಯವಸ್ಥೆ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next