Advertisement

ವೈರಮುಡಿ ತಲೆ ಮೇಲೆ ಹೊತ್ತು ಸಾಗಿದ ತಹಶೀಲ್ದಾರ್‌

07:17 PM Mar 25, 2021 | Team Udayavani |

ಶ್ರೀರಂಗಪಟ್ಟಣ: ತಹಶೀಲ್ದಾರ್‌ ಎಂ.ವಿ.ರೂಪಾ ಮೇಲುಕೋಟೆ ವೈರಮುಡಿಗೆಪೂಜೆ ಸಲ್ಲಿಸಿ ತಲೆ ಮೇಲೆ ಹೊತ್ತು ಒಂದುಕಿ.ಮೀ.ಸಾಗಿದ್ದು ಗಮನ ಸೆಳೆಯಿತು.ಮಂಡ್ಯದಿಂದ ಶ್ರೀರಂಗಪಟ್ಟಣಕಿರಂಗೂರು ಬನ್ನಿ ಮಂಟಪದ ಬಳಿಆಗಮಿಸಿದ ವೈರಮುಡಿಗೆ ಗ್ರಾಮಸ್ಥರುದಸರಾ ಮಂಟಪದಲ್ಲಿ ಪೂಜೆ ಸಲ್ಲಿಸಿ ಹಳೆಕಿರಂಗೂರು ಬಳಿ ಲಕ್ಷ್ಮೀ ನಾರಾಯಣಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆನಡೆದು ಭಕ್ತರಿಗೆ ಪ್ರಸಾದ ವಿತರಣೆಮಾಡಿದರು.

Advertisement

ನಂತರ ತಹಶೀಲ್ದಾರ್‌ಎಂ.ವಿ.ರೂಪಾ ಒಂದು ಕಿ.ಮೀ.ವರೆಗೂವೈರಮುಡಿಯನ್ನು ಹೊತ್ತು ಬರೀ ಕಾಲಿನಲ್ಲಿನಡೆದು ಭಕ್ತಿ ಭಾವ ಮೆರೆದರು.ಮಂಡ್ಯ ಖಜಾನೆಯಿಂದ ನೇರವಾಗಿಎಸಿ ಶಿವಾನಂದ ಮೂರ್ತಿ ನೇತೃತ್ವದಲ್ಲಿವೈರಮುಡಿ ಉತ್ಸವಕ್ಕೆ ಮೆರಗು ನೀಡುವಕಿರೀಟ ಹಾಗೂ ಚಿನ್ನಾಭರಣ ಹೊತ್ತಹುಂಡಿ ಸಮೇತ ವಾಹನದಲ್ಲಿಮೈಸೂರು-ಬೆಂಗಳೂರು ಹೆ¨ªಾರಿಯಲ್ಲಿಆಗಮಿಸುತ್ತಿದ್ದಂತೆ ತಾಲೂಕಿನ ಗಡಿಗ್ರಾಮಕೋಡಿ ಶೆಟ್ಟಿಪುರ ಗ್ರಾಮದಲ್ಲಿ ತಹಶೀಲ್ದಾರ್‌ನೇತೃತ್ವದಲ್ಲಿ ಪುಷ್ಪಾರ್ಚನೆ ಮಾಡಿ ಸ್ವಾಗತಿಸಿಬರಮಾಡಿಕೊಳ್ಳಲಾಯಿತು.

ರಸ್ತೆ ಉದ್ದಕ್ಕೂ ವಿವಿಧ ಗ್ರಾಮಗಳಾದಗಣಂಗೂರು, ಗೌಡಹಳ್ಳಿ, ಗೌರಿಪುರ,ಕೆ.ಶೆಟ್ಟಹಳ್ಳಿ ಬಾಬುರಾಯನಕೊಪ್ಪಲುಹಾಗೂ ಕಿರಂಗೂರು ಬನ್ನಿ ಮಂಟಪದಲ್ಲಿಹಾಗೂ ಧರ್ಮರಾಯ ದೇವಾಲಯ,ಲಕ್ಷ್ಮೀನಾರಾಯಣ ದೇವಾಲಯ ಸೇರಿಆಯಾ ಗ್ರಾಮಸ್ಥರು ವಿಶೇಷ ಪೂಜೆಸಲ್ಲಿಸಿದರು. ರಸ್ತೆಯುದ್ದಕ್ಕೂ ಹರಿಕೆ ಹೊತ್ತಭಕ್ತರು ವೈರಮುಡಿಯ ಜೊತೆ ಬಂದಭಕ್ತರಿಗೆ ಮಜ್ಜಿಗೆ ಪಾನಕ ನೀಡಿಸುಧಾರಿಸಿಸುತ್ತಿದ್ದುದ್ದು ಕಂಡು ಬಂತು.ವೈರಮುಡಿಗೆ ಭಾರೀ ಬಿಗಿ ಭದ್ರತೆ ಒದಗಿಸಿಕಾವಲಿನಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next