ಬೆಂಗಳೂರು:ನರೇಂದ್ರ ಮೋದಿ ಅವರು ಪ್ರಜಾಪ್ರಭುತ್ವದ ಆಶಯಗಳನ್ನು ಗಾಳಿಗೆ ತೂರಿದ್ದಾರೆ ಎಂದು ರಾಜ್ಯಸಭೆ ಪ್ರತಿಪಕ್ಷನಾಯಕ ಮಲ್ಲಿಕಾರ್ಜುನ ಖರ್ಗೆಆರೋಪಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದಮಾಜಿ ಪ್ರಧಾನಿ ದಿವಂಗತ ಜವಹರ್‌ಲಾಲ್‌ನೆಹರು 57 ನೇ ಪುಣ್ಯಸ್ಮರಣೆಯಲ್ಲಿ ಮಾತನಾಡಿದ ಅವರು, ಪ್ರಧಾನಿಯವರು ಸಂಸತ್‌ಗೆಬರಲ್ಲ, ಯಾವುದೇ ಚರ್ಚೆಯಲ್ಲೂ ಪಾಲ್ಗೊಳ್ಳುವುದಿಲ್ಲ. ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಬೆಲೆಕೊಡುತ್ತಿಲ್ಲ ಎಂದು ದೂರಿದರು.
ದೇಶದಲ್ಲಿ ಯಾರಾದರೂ ವೈಜ್ಞಾನಿಕ ಹಾಗೂವಾಸ್ತವ ಅಂಶ ಹೇಳಿದರೆ ದೇಶದ್ರೋಹಿ ಪಟ್ಟಕಟ್ಟಲಾಗುತ್ತಿದೆ. ಇದೊಂದು ಅಪಾಯಕಾರಿಪರಿಸ್ಥಿತಿ ಎಂದು ಆತಂಕ ವ್ಯಕ್ತಪಡಿಸಿದರು.
ಜವಹರ್ ಲಾಲ್ ನೆಹರು ಅವರು ಆಧುನಿಕಭಾರತದ ನಿರ್ಮಾತೃ. ಅವರ ದೂರದೃಷ್ಟಿಯಿಂದ ದೇಶ ಸಾಕಷ್ಟು ಅಭಿವೃದ್ಧಿಯಾಯಿತು.ಪ್ರಧಾನಿಯಾಗಿ ಕ್ರಾಂತಿಕಾರಕ ನಿರ್ಧಾರಕೈಗೊಂಡಿದ್ದರು ಎಂದು ಸ್ಮರಿಸಿದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷಸಲೀಂ ಅಹಮದ್, ಪರಿಷತ್ ಮಾಜಿ ಸಭಾಪತಿಬಿ.ಎಲ್.ಶಂಕರ್ ಹಾಗೂ ಕಾಂಗ್ರೆಸ್‌ಮುಖಂಡರು, ಮತ್ತಿತರರು ಉಪಸ್ಥಿತರಿದ್ದರು.ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಮಾಜಿ ಸ್ಪೀಕರ್ ಕೃಷ್ಣ, ಮಾಜಿಸಚಿವ ಕೆ.ಬಿ.ಶಾಣಪ್ಪ ಸೇರಿದಂತೆ ಅಗಲಿದಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.