Advertisement
ಎಸ್.ಐ.ಹೊನ್ನಲಗೆರೆ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನಡೆದಸರ್ವಸದಸ್ಯರ ವಾರ್ಷಿಕ ಮಹಾಸಭೆಯಲ್ಲಿಮಾತನಾಡಿ, ಹೈನುಗಾರಿಕೆಯು ಒಂದು ಉಪಕಸುಭಾಗಿದೆ. ಹೈನುಗಾರಿಕೆಯಿಂದ ಉತ್ತಮ ಲಾಭಾಂಶವನ್ನು ಕಾಣಬಹುದು.ಆದ್ದರಿಂದ ರೈತರು ಹೆಚ್ಚು ಹೈನುಗಾರಿಕೆಯಲ್ಲಿ ತೊಡಗಬೇಕು ಎಂದರು.
Related Articles
Advertisement
ನೀರಿನ ಯೋಜನೆ ಆರಂಭಿಸಲು ಸರ್ವೆ :
ಮದ್ದೂರು: ಮದ್ದೂರಮ್ಮ ಕೆರೆಯಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಯನ್ನುಆರಂಭಿಸಲು ಒತ್ತುವರಿಯಾಗಿದ್ದ ಸರ್ಕಾರಿ ಜಮೀನನ್ನು ಕಂದಾಯ ಇಲಾಖೆ ಅಧಿಕಾರಿಗಳು ಸರ್ವೆ ಕಾರ್ಯ ನಡೆಸಿ, ತೆರವುಗೊಳಿಸಿದರು.
ತಾಲೂಕಿನ ದೇಶಹಳ್ಳಿ ಗ್ರಾಮದ ಮದ್ದೂರಮ್ಮ ಕೆರೆ ಬದಿಯಲ್ಲಿದ್ದ ಗುಂಡು ತೋಪು ಸರ್ವೆ ನಂ.59ರ 4 ಎಕರೆ 7 ಗುಂಟೆ ಜಮೀನನ್ನು ತಹಶೀಲ್ದಾರ್ ವಿಜಯಕುಮಾರ್ ಆದೇಶದ ಮೇಲೆ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಸರ್ವೆ ಕಾರ್ಯ ಕೈಗೊಂಡು ಜಾಗ ಗುರುತಿಸಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಗೆ ಕೈಗೊಳ್ಳಲು ಅವಕಾಶ ಕಲ್ಪಿಸಿದರು.
17ಕ್ಕೂ ಹೆಚ್ಚು ಮಂದಿ ಒತ್ತುವರಿ: ಮದ್ದೂರಮ್ಮ ಕೆರೆ ಬದಿಯಲ್ಲಿದ್ದ ಸರ್ಕಾರಿ ಜಮೀನನ್ನು ದೇಶಹಳ್ಳಿ ಗ್ರಾಮದ17ಕ್ಕೂ ಹೆಚ್ಚು ಮಂದಿ ರೈತರು ಒತ್ತುವರಿ ಮಾಡಿಕೊಂಡಿದ್ದರು. ಕಳೆದ ವಾರದ ಹಿಂದೆ ತಾಲೂಕು ಆಡಳಿತ ನೋಟಿಸ್ ಜಾರಿ ಮಾಡಿ, ಜಮೀನನ್ನು ತೆರವುಗೊಳಿಸುವಂತೆ ಆದೇಶ ನೀಡಲಾಯಿತು. ಹೀಗಾಗಿ ಸ್ಥಳಕ್ಕೆ ಕಂದಾಯ, ಪೊಲೀಸ್ ಹಾಗೂ ಇನ್ನಿತರೆ ಅಧಿಕಾರಿಗಳು ಭೇಟಿ ನೀಡಿ, ಸರ್ಕಾರಿ ಜಮೀನನ್ನು ವಶಕ್ಕೆ ಪಡೆದರು. ಕೆಲ ರೈತರು ಜಮೀನಿನಲ್ಲಿ ಬೆಳೆ ಬೆಳೆದಿದ್ದು, ಒಂದು ವಾರ ಅವಕಾಶ ನೀಡಲಾಗಿದೆ. ಕಟಾವು ಮುಗಿದ ಬಳಿಕ ಸರ್ಕಾರಿ ವಶಕ್ಕೆ ಪಡೆಯುವುದಾಗಿ ಅಧಿಕಾರಿಗಳು ತಿಳಿಸಿದರು.
ಕಂದಾಯ ರಾಜಸ್ವ ನಿರೀಕ್ಷಕ ವೆಂಕಟೇಶ್, ತಾಲೂಕು ಸರ್ವೆ ಅಧಿಕಾರಿಹನುಮೇಗೌಡ, ಗ್ರಾಮಲೆಕ್ಕಿಗಡಿ.ತಿಮ್ಮಯ್ಯಹಾಗೂ ಪೊಲೀಸ್ ಅಧಿಕಾರಿಗಳು ಹಾಜರಿದ್ದರು.