Advertisement

University: ಮಂಗಳೂರು ವಿ.ವಿ.ಯಲ್ಲಿ “ಪ್ರೊಫೆಸರ್‌ ಆಫ್ ಪ್ರಾಕ್ಟೀಸ್‌”

12:04 AM Sep 11, 2023 | Team Udayavani |

ಮಂಗಳೂರು: ಇನ್ನು ಮುಂದೆ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋ ತ್ತರ ತರಗತಿಗಳಿಗೆ ವಿವಿಧ ಕ್ಷೇತ್ರದ ಸಾಧಕರು, ತಜ್ಞರು ಕೂಡ ಪಾಠ ಮಾಡಲಿದ್ದಾರೆ.
ಹೀಗೊಂದು ಬದಲಾವಣೆಗೆ ವಿ.ವಿ. ಮುನ್ನುಡಿ ಬರೆದಿದೆ. ಉನ್ನತ ಶಿಕ್ಷಣದಲ್ಲಿ ಪುಸ್ತಕದ ಪಾಠ ಒಂದೇ ಆಧಾರವಾಗಬಾರದು; ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ತಜ್ಞರ ಅನುಭವ ಪಾಠವೂ ವಿದ್ಯಾರ್ಥಿಗಳಿಗೆ ಲಭಿಸಲಿ ಎಂಬುದು ಉದ್ದೇಶ.

Advertisement

ಮೊದಲಿಗೆ ಸ್ನಾತ ಕೋತ್ತರ ವಿಭಾಗದಲ್ಲಿ ಪರಿಚಯಿಸಲಾಗು ತ್ತಿದ್ದು, ಮುಂದೆ ಪದವಿಯಲ್ಲೂ ಜಾರಿ ಯಾಗುವ ಸಾಧ್ಯತೆ ಇದೆ. ವಿ.ವಿ. ವ್ಯಾಪ್ತಿಯ ಕಾಲೇಜುಗಳಲ್ಲಿಯೂ ಅಳವಡಿಸಿಕೊಳ್ಳಲು ಅವಕಾಶವಿದೆ. ಇದಕ್ಕೆ “ಪ್ರೊಫೆಸರ್‌ ಆಫ್‌ ಪ್ರಾಕ್ಟೀಸ್‌’ ಎಂದು ಕರೆಯಲಾಗುತ್ತದೆ.

ಇಂತಹ ಬೋಧಕ ವಿಷಯ ತಜ್ಞರಿಗೆ ಮಂಗಳೂರು ವಿ.ವಿ. ಅಥವಾ ಇತರ ಮೂಲ ದಿಂದ ಸಂಭಾವನೆ ನೀಡಲು ಅವಕಾಶವಿದೆ. ಜತೆಗೆ ಕೈಗಾರಿಕೆ ಸಹಿತ ವಿವಿಧ ಕ್ಷೇತ್ರದ ಸಾಧಕರು ವಿದ್ಯಾರ್ಥಿಗಳಿಗೆ ಸ್ವ ಆಸಕ್ತಿಯಿಂದಲೇ ಪ್ರಾಯೋಗಿಕ ಮಾಹಿತಿ ನೀಡಬಹುದು. ಸೀಮಿತ ಅವಧಿಯ ಸೇವೆ ಇದಾಗಿರುತ್ತದೆ.

ಎಂಜಿನಿಯರ್‌, ವಿಜ್ಞಾನಿ, ತಂತ್ರಜ್ಞ, ಉದ್ಯಮಿ, ಆಡಳಿತಾತ್ಮಕ ನಿರ್ವಹಣೆ, ಲೆಕ್ಕ ಪರಿಶೋಧಕರು, ವಾಣಿಜ್ಯ, ಸಮಾಜ ವಿಜ್ಞಾನ, ಪತ್ರಿಕೋದ್ಯಮಿ, ಸಾಹಿತಿ, ಕಲೆ, ನಾಗರಿಕ ಸೇವೆ, ಸೈನಿಕರು, ವಕೀಲರು ಹೀಗೆ ವಿವಿಧ ಕ್ಷೇತ್ರದ ಅನುಭವಿಗಳಿಂದ ಬೋಧನೆಗೆ ಅವಕಾಶವಿದೆ.

ಇದರಿಂದ ವಿದ್ಯಾರ್ಥಿಗಳು ಪುಸ್ತಕದಿಂದ ಕಲಿಯುವುದಕ್ಕಿಂತಲೂ ಹೆಚ್ಚಾಗಿ ಆ ಕ್ಷೇತ್ರದ ಸಾಧಕರ ಅನುಭವಗಳನ್ನು ಕೇಳಿ ಹೊಸ ತಿಳಿವಳಿಕೆ ಪಡೆಯಲು ಸಾಧ್ಯವಾಗಲಿದೆ.

Advertisement

ಏನಿದು? ಪ್ರೊಫಸೆರ್‌ ಆಫ್‌ ಪ್ರಾಕ್ಟೀಸ್‌
ವಿವಿಧ ಕ್ಷೇತ್ರಗಳ ಸಾಧಕರು ವೃತ್ತಿಪರ ಬೋಧಕರಲ್ಲದಿದ್ದರೂ ಪಿಎಚ್‌ಡಿ ಇತ್ಯಾದಿ ಪದವಿ ಇಲ್ಲದಿದ್ದರೂ ಅದ್ವಿತೀಯ ಸಾಧನೆ, ಅನುಭವ ಹೊಂದಿರುತ್ತಾರೆ. ಅಂಥವರನ್ನು ಮಂಗಳೂರು ವಿ.ವಿ.ಯೇ ಆಯ್ಕೆ ಮಾಡಿ ವಿದ್ಯಾರ್ಥಿಗಳಿಗೆ ಅವರ ಅನುಭವ ಕಥನವನ್ನು ತಿಳಿಸುವುದೇ “ಪ್ರೊಫೆಸರ್‌ ಆಫ್‌ ಪ್ರಾಕ್ಟೀಸ್‌’.

ಪ್ರೊಫೆಸರ್‌ ಆಫ್ ಪ್ರಾಕ್ಟೀಸ್‌ ಎಂಬ ಈ ಹೊಸ ಕಾರ್ಯಕ್ರಮದಿಂದ ವಿದ್ಯಾರ್ಥಿಗಳು ಪಠ್ಯ ಕಲಿಕೆಯ ಜತೆಗೆ ಸಮಾಜದ ನೈಜ ವಿಚಾರಗಳನ್ನು ಅರಿಯಲು ಅವಕಾಶ ಸಿಗಲಿದೆ.
– ಪ್ರೊ| ಜಯರಾಜ್‌ ಅಮೀನ್‌,ಕುಲಪತಿ, ಮಂಗಳೂರು ವಿಶ್ವವಿದ್ಯಾನಿಲಯ

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next