Advertisement

ದೆಹಲಿ-ಮುಂಬೈ ವಿಮಾನದಲ್ಲಿ ವೈದ್ಯೆಗೆ ಕಿರುಕುಳ… 47 ವರ್ಷದ ಪ್ರೊಫೆಸರ್ ಬಂಧನ

01:52 PM Jul 28, 2023 | Team Udayavani |

ನವದೆಹಲಿ: ದೆಹಲಿ-ಮುಂಬೈ ವಿಮಾನದಲ್ಲಿ ಮಹಿಳಾ ವೈದ್ಯೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ 47 ವರ್ಷದ ಪ್ರಾಧ್ಯಾಪಕನನ್ನು ದೆಹಲಿ ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ.

Advertisement

ಬುಧವಾರ ಈ ಘಟನೆ ನಡೆದಿದ್ದು ಎನ್ನಲಾಗಿದ್ದು. 24 ವರ್ಷದ ವೈದ್ಯೆ ಹಾಗೂ 47 ವರ್ಷದ ಪ್ರಾಧ್ಯಾಪಕ ದೆಹಲಿಯಿಂದ ಮುಂಬೈಗೆ ಹೊರಟ ವಿಮಾನದಲ್ಲಿ ಪರಸ್ಪರರ ಪಕ್ಕದಲ್ಲಿ ಕುಳಿತಿದ್ದರು ಎನ್ನಲಾಗಿದೆ ಈವೇಳೆ ವೈದ್ಯೆಯ ಜೊತೆ ಪ್ರಾಧ್ಯಾಪಕ ಅನುಚಿತವಾಗಿ ವರ್ತಿಸಿದ್ದಾರೆ. ಆ ಬಳಿಕ ಇಬ್ಬರ ನಡುವೆ ವಾಗ್ವಾದ ನಡೆದಿದ್ದು ಕೂಡಲೇ ವಿಮಾನ ಸಿಬಂದಿ ಬಳಿ ವೈದ್ಯೆ ವಿಚಾರ ತಿಳಿಸಿದ್ದಾರೆ.

ವಿಮಾನ ಮುಂಬೈ ವಿಮಾನ ನಿಲ್ದಾಣ ತಲುಪುತ್ತಿದ್ದಂತೆ ವೈದ್ಯೆ ಸಹಾರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಪ್ರೊಫೆಸರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: ಉಡುಪಿ ವಿಡಿಯೋ ಚಿತ್ರೀಕರಣ ಪ್ರಕರಣ ಮುಚ್ಚಿಹಾಕಲು ಪ್ರಯತ್ನ: ಕೋಟ ಶ್ರೀನಿವಾಸ ಪೂಜಾರಿ

Advertisement

Udayavani is now on Telegram. Click here to join our channel and stay updated with the latest news.

Next