Advertisement
ಈ ನಡುವೆಯೇ, ಪ್ರಸಕ್ತ ವರ್ಷ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ದ ವೆಬ್‌ಸೈಟ್ ಕೈಕೊಡಲು ಕಾರಣವೇನು ಎಂಬ ಬಗ್ಗೆ ಚರ್ಚೆಗಳೂ ಆರಂಭವಾಗಿವೆ. ಕೆಇಎ ಅಧಿಕಾರಿಗಳ ಪ್ರಕಾರ, 15 ವರ್ಷಗಳ ಹಳೆಯ ಸಾಫ್ಟ್ವೇರ್ ನಿಂದಾಗಿಯೇ ಈ ತಾಂತ್ರಿಕ ಸಮಸ್ಯೆಗಳಾಗುತ್ತಿವೆ. ಇದನ್ನು ಸರಿಪಡಿಸಲು ನೋಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಹಾಗೆಯೇ, ರಾಜ್ಯ ಸರಕಾರದ ಗಮನಕ್ಕೂ ತಂದು, ಸಮಸ್ಯೆಯನ್ನು ಶೀಘ್ರದಲ್ಲಿ ಬಗೆಹರಿಸುವಂತೆ ಕೋರಿಕೊಂಡಿದ್ದಾರೆ.
Related Articles
ಇದರಿಂದಾಗಿಯೂ ಸಿಇಟಿ ಕೌನ್ಸೆಲಿಂಗ್ ಕೂಡ ತಡವಾಗಿ ಆರಂಭ ವಾಯಿತು. ಅತ್ತ ನೀಟ್ ಫಲಿತಾಂಶ ಕೂಡ ಈ ಭಾರಿ ತೀರಾ ತಡವಾಗಿಯೇ ಬಂದಿದೆ. ಇದರ ಪ್ರವೇಶ ಪ್ರಕ್ರಿಯೆ ಕೂಡ ಈಗಷ್ಟೇ ನಡೆಯುತ್ತಿದೆ.
Advertisement
ಈಗಲೂ ಕಾಲ ಮಿಂಚಿಲ್ಲ. ರಾಜ್ಯ ಸರಕಾರ ಈ ಕೂಡಲೇ ಎಚ್ಚೆತ್ತು ತಾಂತ್ರಿಕವಾಗಿ ಏನೇನು ಸಮಸ್ಯೆಗಳಾಗಿವೆ ಎಂಬುದನ್ನು ನೋಡಿಕೊಳ್ಳ ಬೇಕು. ಅಲ್ಲದೆ ಇಡೀ ದೇಶದಲ್ಲೇ ಕರ್ನಾಟಕ ತಾಂತ್ರಿಕತೆಯ ವಿಚಾರದಲ್ಲಿ ಮುಂದಿ ರುವ ರಾಜ್ಯ. ಇಲ್ಲೇ ಸರ್ವರ್ ರೀತಿಯ ಸಮಸ್ಯೆಗಳು ಕಾಣಿಸಿ ಕೊಂಡರೆ ಅದು ನಾಚಿಕೆಗೇಡಿನ ವಿಚಾರವಾಗುತ್ತದೆ. ಈ ಬಗ್ಗೆ ಸರಕಾರ ಗಮನಹರಿಸಬೇಕು. ಅಲ್ಲದೆ ಈಗ ಬಳಕೆ ಮಾಡುತ್ತಿರುವ ಸಾಫ್ಟ್ ವೇರ್ ಕೂಡ 15 ವರ್ಷ ಹಳೆಯದಾಗಿದ್ದು, ಈಗಿನ ಒತ್ತಡಕ್ಕೆ ಇದು ಕಾರ್ಯ ನಿರ್ವ ಹಿಸುವ ಸಾಧ್ಯತೆಗಳು ಕಡಿಮೆಯೇ. ಇದನ್ನು ಅಪ್‌ಡೇಟ್ ಮಾಡುವತ್ತ ಗಮನ ಹರಿಸಬೇಕು.
ಹಾಗೆಯೇ ಏಕಕಾಲದಲ್ಲಿ ಬಹಳಷ್ಟು ಪರೀಕ್ಷೆಗಳು, ನೋಂದಣಿ ಪ್ರಕ್ರಿಯೆ ಗಳನ್ನು ನಡೆಸುವುದು ಕೂಡ ಸರಿಯಲ್ಲ. ಪ್ರಮುಖವಾಗಿ ಯಾವುದಾದರೂ ಒಂದು ಪ್ರವೇಶ ಪ್ರಕ್ರಿಯೆ ನಡೆಯುವಾಗ ಬೇರೆಯವುಗಳಿಗೆ ಮತ್ತೂಂದು ಸಮಯ ನೀಡುವುದು ಉತ್ತಮ.