Advertisement

“ಬುದ್ಧ, ಗಾಂಧಿ ತತ್ವಾದರ್ಶದಿಂದ ಉತ್ತಮ ಸಮಾಜ ನಿರ್ಮಾಣ’

03:25 PM Mar 16, 2017 | Harsha Rao |

ಸೋಮವಾರಪೇಟೆ: ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬರೂ ಬುದ್ಧ ಹಾಗೂ ಗಾಂಧೀಜಿಯವರ ತತ್ವಾದರ್ಶಗಳನ್ನು ಪಾಲಿಸಿದರೆ ಮಾತ್ರ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಡಾ| ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಕುಲಸಚಿವರಾದ ಪ್ರೊ| ನಿರಂಜನ ವಾನಳ್ಳಿ ಹೇಳಿದರು. 
ಒಕ್ಕಲಿಗರ ಸಮಾಜದಲ್ಲಿ ಆಯೋಜಿಸಿದ್ದ ಲಯನ್ಸ್‌ ಸಂಸ್ಥೆಯ ಪ್ರಾಂತೀಯ ಸಮ್ಮೇಳನದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿ ಅವರು ಮಾತನಾಡಿದರು. 

Advertisement

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲರೂ ಒತ್ತಡದಿಂದ ಕೆಲಸ ನಿರ್ವಹಿಸುವ ಅನಿವಾರ್ಯತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ತಾಳ್ಮೆ ಕಳೆದುಕೊಂಡರೆ ಜೀವನದಲ್ಲಿ ಬಹಳಷ್ಟನ್ನು ಕಳೆದುಕೊಳ್ಳಬೇಕಾಗುತ್ತದೆ. 

ವಾಮಮಾರ್ಗದಿಂದ ಗಳಿಸುವ ಹತ್ತು ಪೈಸೆಗಿಂತ ಶ್ರಮಪಟ್ಟು ಗಳಿಸಿದ ಐದು ಪೈಸೆ ಶ್ರೇಷ್ಠವಾಗಿದೆ. ಈ ನಿಟ್ಟಿನಲ್ಲಿ ಪ್ರಾಮಾಣಿಕವಾದ ದುಡಿಮೆಯಿಂದ ಗೌರವಯುತವಾದ ಬದುಕು ಸಾಗಿಸಲು ಮುಂದಾಗಬೇಕು ಎಂದು ಹೇಳಿದರು.
ಹಿಂದೆ ಗುರುಹಿರಿಯರನ್ನು ಭಕ್ತಿ ಪೂರ್ವಕವಾಗಿ ಕಾಣಲಾಗುತ್ತಿತ್ತು. ಆದರೆ ಇಂದು ಹೆತ್ತವರನ್ನು ವೃದ್ಧಾ ಶ್ರಮಕ್ಕೆ ಸೇರಿಸುವ ಮೂಲಕ ಅಮಾ ನವೀಯವಾಗಿ ನಡೆದುಕೊಳ್ಳುತ್ತಿ ರುವುದು ದುರಂತ. ಇತ್ತೀಚಿನ ದಿನಗಳಲ್ಲಿ ಸಂಬಂಧಗಳಿಗೆ ಬೆಲೆಯೇ ಇಲ್ಲದಂತಾಗಿದೆ ಎಂದು ವಾನಳ್ಳಿ ವಿಷಾದಿಸಿದರು. 

ವೇಗವಾಗಿ ಬೆಳೆಯುತ್ತಿರುವ ಯುಗದಲ್ಲಿ ಶ್ರೀಮಂತರು-ಬಡವರ ಮಧ್ಯೆ ಕಂದಕ ಏರ್ಪಟ್ಟಿದೆ. ಇಂತಹ ಸಂದರ್ಭದಲ್ಲಿ ಲಯನ್ಸ್‌ನಂತಹ ಸೇವಾ ಮನೋಭಾವವುಳ್ಳ ಸಂಸ್ಥೆಗಳ ಪಾತ್ರ ಹಿರಿದಾಗಿದೆ ಎಂದು ಪ್ರಶಂಸಿದರು.

ಪ್ರಾಂತೀಯ ಅಧ್ಯಕ್ಷ ಎಸ್‌. ಬಿ. ಲೀಲಾರಾಂ, ಪ್ರಾಂತೀಯ ಸಮ್ಮೇಳನ ಸಮಿತಿ ಅಧ್ಯಕ್ಷ ಎ.ಆರ್‌.ಮುತ್ತಣ್ಣ, ಕಾರ್ಯದರ್ಶಿ ಜೆ.ಸಿ. ಶೇಖರ್‌, ಖಜಾಂಚಿ ಜಗದೀಶ್‌, ವಲಯಾಧ್ಯಕ್ಷರಾದ ಸಿ.ಕೆ. ರಕ್ಷಿತ್‌, ಪಿ. ಧನು ಉತ್ತಯ್ಯ, ಪಿ.ಎಂ. ಅಪ್ಪಣ್ಣ, ಮುಖ್ಯಸಲಹೆಗಾರರಾದ ಯಮುನಾ ಚಂಗಪ್ಪ, ಲಯನ್ಸ್‌ ಜಿಲ್ಲಾ ರಾಜ್ಯಪಾಲ ಅರುಣ್‌ ಶೆಟ್ಟಿ, ಸೋಮವಾರಪೇಟೆ ಲಯನ್ಸ್‌ ಅಧ್ಯಕ್ಷ ಎ.ಎಸ್‌.ಮಹೇಶ್‌, ಕಾರ್ಯದರ್ಶಿ ಮಂಜುನಾಥ್‌ ಚೌಟ ಹಾಗೂ ವಿವಿಧ ಜಿಲ್ಲೆಗಳ ಲಯನ್ಸ್‌ ಸಂಸ್ಥೆಯಿಂದ ಆಗಮಿಸಿದ್ದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next