Advertisement
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನೂತನ ಮಾರುಕಟ್ಟೆಗೆ ರಾಮನಗರದ ಹೆಸರನ್ನೇ ಇಡಲಾಗುತ್ತದೆ. ವಂದಾರಗುಪ್ಪೆ ಬಳಿ 75 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಮಾರುಕಟ್ಟೆ ನಿರ್ಮಿಸುವ ಯೋಜನೆ ಸಿದ್ಧವಾಗಿದೆ. ಈಗಾಗಲೇ, ನಬಾರ್ಡ್‌ನಿಂದ 35 ಕೋಟಿ ರೂ. ಬಿಡುಗಡೆಯೂಆಗಿದೆ. ಪ್ರಬಲವಾದ ಕಾರಣಗಳಿಲ್ಲದೇ, ರೀಲರ್‌ಗಳು ಉತ್ತಮವಾದ ಯೋಜನೆ ಅನುಷ್ಠಾನಕ್ಕೆ ಅಡ್ಡಿ ಪಡಿಸುವುದು ಸರಿಯಲ್ಲ ಎಂದರು.
Related Articles
Advertisement
ಸುದ್ದಿಗೋಷ್ಠಿಯಲ್ಲಿ ರೇಷ್ಮೆ ಬೆಳೆಗಾರರ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ರವಿ, ಜೆಡಿಎಸ್ ತಾಲೂಕು ಅಧ್ಯಕ್ಷ ರಾಜಶೇಖರ್, ರೇಷ್ಮೆ ಬೆಳೆಗಾರರ ಹಿತರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ಗೌತಮ್ ಗೌಡ ಇದ್ದರು
ಏತಕ್ಕಾಗಿ ನೂತನ ಮಾರುಕಟ್ಟೆ? :
ನೂತನ ಮಾರುಕಟ್ಟೆ ನಿರ್ಮಾಣ ಏತಕ್ಕಾಗಿ ಎಂಬ ಬಗ್ಗೆ ವಿವರಣೆ ನೀಡಿದ ಶಾಸಕ ಎ.ಮಂಜುನಾಥ್, ಹಾಲಿ ಮಾರುಕಟ್ಟೆಯಲ್ಲಿ ಸ್ಥಳದ ಕೊರತೆ ಇದೆ. ಇಲ್ಲಿ ಪ್ರತಿ ನಿತ್ಯ 20 ರಿಂದ 24 ಟನ್ ವಹಿವಾಟು ನಡೆಸಲು ಮಾತ್ರ ಸಾಧ್ಯವಿದೆ. ಪ್ರಸ್ತುತ ದಿನಗಳಲ್ಲಿ ಕಲಬುರ್ಗಿ, ಬಳ್ಳಾರಿ ಸೇರಿದಂತೆ ಕೇರಳ, ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಳಿಂದಲೂ ರೈತರು ರೇಷ್ಮೆಗೂಡು ತಂದು ಮಾರಾಟ ಮಾಡು ತ್ತಿರುವುದ್ದಾರೆ. ನಿತ್ಯ 40 ರಿಂದ 50 ಟನ್ ರೇಷ್ಮೆವಹಿವಾಟು ನಡೆಯುತ್ತಿದೆ. ಮಾರುಕಟ್ಟೆಯಲ್ಲಿ ವಾಹನ ಪಾರ್ಕಿಂಗ್‌ಗೆ ಸ್ಥಳಾವಕಾಶದ ಕೊರತೆಯಿದೆ. ಹೆಚ್ಚಿನ ಗೂಡು ಬಂದಾಗ ಸ್ಥಳದ ಅಭಾವ, ರೈತರಿಗೆ ಉಪಹಾರ, ವಾಸ್ತವ್ಯದ ವ್ಯವಸ್ಥೆ ಇಲ್ಲ. ರೈತರಿಗೆ ಭದ್ರತೆ, ಆರೋಗ್ಯ ಸಮಸ್ಯೆ ಎದುರಾದಲ್ಲಿ ಪ್ರಥಮ ಚಿಕಿತ್ಸೆ ನೀಡಲು ಸೌಲಭ್ಯಗಳಿಲ್ಲ. ಹೈಟೆಕ್ ಮಾರುಕಟ್ಟೆಯಲ್ಲಿ ಈ ಸಮಸ್ಯೆಗಳು ನೀಗಲಿವೆ ಎಂದು ಸಮರ್ಥಿಸಿಕೊಂಡರು.
ನೂತನ ಮಾರುಕಟ್ಟೆ ನಿರ್ಮಾಣ ದಿಂದ ರೀಲರ್‌ಗಳಿಗೆ ಸಮಸ್ಯೆ ಇದ್ದರೆ ಅಥವಾ ಬೇಡಿಕೆಗಳನ್ನು ಗಮನಕ್ಕೆ ತರಬ ಹುದು. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಡಿಸಿಎಂ ಡಾ. ಸಿ. ಎನ್.ಅಶ್ವತ್ಥನಾರಾಯಣ, ಸಚಿವ ಸಿ.ಪಿ.ಯೋಗೇಶ್ವರ್, ಕೆಪಿಸಿಸಿ ಅಧ್ಯಕ್ಷಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಅವರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲು ಸಹಕಾರ ನೀಡುತ್ತೇನೆ. –ಎ.ಮಂಜುನಾಥ್, ಶಾಸಕ
ರಾಮನಗರ-ಚನ್ನಪಟ್ಟಣ ಮಧ್ಯ ಭಾಗದಲ್ಲಿ ಹೈಟೆಕ್ ರೇಷ್ಮೆ ಗೂಡು ಮಾರುಕಟ್ಟೆ ನಿರ್ಮಾಣಕ್ಕೆ ಬೆಳೆಗಾರರ ಸಂಪೂರ್ಣ ಸಹಕಾರವಿದೆ. ಪ್ರತಿ ವಿಚಾರದಲ್ಲಿಯೂ, ರೀಲರ್‌ಗಳು ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ. –ಕೆ.ರವಿ, ಪ್ರಧಾನ ಕಾರ್ಯದರ್ಶಿ, ರೇಷ್ಮೆ ಬೆಳೆಗಾರರ ಹಿತರಕ್ಷಣಾ ಸಮಿತಿ