1,00000 – ಲಾಕ್ ಡೌನ್‌ನಿಂದಾಗಿ ಉದ್ಯೋಗಗಳಿಗೆ ಆಗುವ ನಷ್ಟ
4.6 ಬಿಲಿಯನ್ ಡಾಲರ್- ಭಾರತ ಚೀನಾದಿಂದ ಆಮದು ಮಾಡಿಕೊಳ್ಳುವ ಕಾರು ಉಪಕರಣಗಳು
Advertisement
ಲಾಕ್‌ಡೌನ್ ತಂದಿರುವ ಸಂಕಷ್ಟಗಳು ಅಷ್ಟಿಷ್ಟಲ್ಲ. ಕಳೆದೊಂದು ವರ್ಷದಿಂದ ಒಂದಿಲ್ಲೊಂದು ಕಾರಣದಿಂದ ಕಷ್ಟಗಳ ಸರಪಳಿಗೆ ಸಿಲುಕಿಕೊಂಡಿದ್ದ ದೇಶದ ಆಟೋ ಉದ್ಯಮಕ್ಕೆ, ಈಗ ಕೋವಿಡ್ ವೈರಸ್ ಮಾರಕವಾಗಿ ಪರಿಣಮಿಸಿದೆ. ಫೆಬ್ರವರಿ ಆರಂಭದಿಂದಲೇ ಆಟೋ ಉದ್ಯಮದ ಮೇಲೆ ಈ ಕೊರೊನಾ ಕರಿನೆರಳು ಬಿದ್ದಿದೆ. ಚೀನಾದಲ್ಲಿ ಈ ಮಾರಕ ರೋಗ ಹರಡಲು ಶುರುವಾಗಿದ್ದು, ಜನವರಿ ಮಧ್ಯಭಾಗದಲ್ಲಿ. ಇದಾದ ಕೆಲವೇ ದಿನಗಳಲ್ಲಿ, ವಿಶ್ವ ಆರೋಗ್ಯ ಸಂಸ್ಥೆಯು ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಣೆ ಮಾಡಿತು.ಹಾಗೆಯೇ, ಚೀನಾದ ವುಹಾನ್ ಪ್ರಾಂತ್ಯವನ್ನೇ ಸಂಪೂರ್ಣವಾಗಿ ಕ್ವಾರಂಟೈನ್ ಮಾಡಲಾಯಿತು. ಇದಾದ ಬಳಿಕ, ಜಗತ್ತಿನಾದ್ಯಂತ ಒಂದು ರೀತಿಯ ಆತಂಕ ಶುರುವಾಗಿಬಿಟ್ಟಿತು. ಫೆಬ್ರವರಿ ಆರಂಭದಲ್ಲಿ ದೆಹಲಿಯಲ್ಲಿ ಆಟೋ ಎಕ್ಸ್ ಪೋ ನಡೆಯಿತಲ್ಲ; ಇಡೀ ಜಗತ್ತೇ, ಎಲೆಕ್ಟ್ರಿಕ್ ವಾಹನಗಳ ಕಡೆ ಹೊರಳಲು ಸಜ್ಜಾಗಿದ್ದ ಸಂದರ್ಭ ಅದಾಗಿತ್ತು. ಲಿಥಿಯಂ ಬ್ಯಾಟರಿ ಉದ್ಯಮದಲ್ಲಿ ಹೊಂದಿರುವ ಏಕಸ್ವಾಮ್ಯ, ಆಟೋಮೊಬೈಲ್ ಉಪಕರಣಗಳ ಮೇಲೆ ಸಾಧಿಸಿರುವ ಹಿಡಿತ ಹಾಗೂ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯಲ್ಲಿ ಹೊಂದಿರುವ ಪಾರಮ್ಯದ ಕಾರಣಕ್ಕೆ,
ಆ ಎಕ್ಸ್ ಪೋದಲ್ಲಿ ಚೀನಾದ ಉಪಸ್ಥಿತಿ ಕಡ್ಡಾಯ ಎಂಬಂತೆ ಇರಬೇಕಾಗಿತ್ತು. ಆ ಸಮಯದಲ್ಲಿ ಭಾರತದಲ್ಲಿ ಯಾವುದೇ ಕೇಸ್ ಇರದಿದ್ದರೂ, ಕೊರೊನಾ ಕಾರಣದಿಂದ ಚೀನಾದ
ಕಂಪನಿಗಳು ಹೆಚ್ಚಾಗಿ ಬರಲೇ ಇಲ್ಲ. ಇದರಿಂದಾಗಿ ಭಾರತಲ್ಲಿನ ಆಟೋಮೊಬೈಲ್ ಉದ್ಯಮಕ್ಕೆ ಸಾಕಷ್ಟು ಹೊಡೆತ ಬಿತ್ತು ಎಂದು ಆ ಕ್ಷೇತ್ರದ ತಜ್ಞರು ಹೇಳುತ್ತಾರೆ.
ಲಾಕ್‌ಡೌನ್ ಸಂಕಷ್ಟ ಇದಾದ ಮೇಲೆ ಶುರುವಾದದ್ದು ಲಾಕ್ ಡೌನ್. ಮಾ.25ರಂದು ಇಡೀ ದೇಶ ಲಾಕ್‌ಡೌನ್‌ನೊಳಗೆ ಬಂಧಿಯಾಯಿತು. ಇದರಿಂದಾಗಿ ಎಲ್ಲಾ ಆಟೋ
ಕಾರ್ಖಾನೆಗಳು, ಡೀಲರ್ ಶಿಪ್‌ಗಳು ಮುಚ್ಚಿದವು.
ಮನೆಯಿಂದಲೇ ಕೆಲಸ ಮಾಡುವಂತೆ ಅಥವಾ ಮನೆಯಲ್ಲೇ ಇರುವಂತೆ ಸೂಚಿಸಿವೆ. ಎಷ್ಟೋ ಉದ್ಯಮಗಳು ಕಾರ್ಮಿಕರಿಗೆ ವೇತನವನ್ನೂ ನೀಡಲಾಗುತ್ತಿಲ್ಲ. ಇದಕ್ಕೆ ಕಾರಣ, ಉತ್ಪಾದನೆ ಝೀರೋಗೆ ಬಂದು ಬಿಟ್ಟಿದೆ. ಒಂದು ಲೆಕ್ಕಾಚಾರದ ಪ್ರಕಾರ, ಎಲ್ಲಾ ಕಾರ್ಖಾನೆಗಳು ಮುಚ್ಚಿರುವುದರಿಂದ, ದಿನಕ್ಕೆ 2,300 ಕೋಟಿ ರೂ. ನಷ್ಟವಾಗುತ್ತಿದೆ. ಈ ಅಪಾರ ನಷ್ಟದ ಕಾರಣಕ್ಕೇ ಸುಮಾರು 1 ಲಕ್ಷ ಉದ್ಯೋಗಗಳಿಗೆ ಕುತ್ತು ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹೀಗಾಗಿ, ಸರ್ಕಾರ ಏನಾದರೂ ಪ್ಯಾಕೇಜ್ ಘೋಷಣೆ ಮಾಡಲಿದೆಯೇ ಎಂದು ಇಡೀ ಇಂಡಸ್ಟ್ರಿ ಎದುರು ನೋಡುತ್ತಿದೆ. ವಾಹನ ಖರೀದಿ
ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಶನ್ ಪ್ರಕಾರ, ದೇಶದಲ್ಲಿ 26 ಸಾವಿರ ಡೀಲರ್ ಶಿಪ್‌ಗಳಿವೆ. ಇವರ ಬಳಿ 6,340 ಕೋಟಿ ರೂ. ಮೌಲ್ಯದ ಬಿಎಸ್4 ಮಾದರಿಯ ವಾಹನಗಳಿವೆ. ಇದರಲ್ಲಿ 3,850 ಕೋಟಿ ಮೌಲ್ಯದ ಏಳು ಲಕ್ಷ ದ್ವಿಚಕ್ರ ವಾಹನಗಳು, 1,050 ಕೋಟಿ ಮೌಲ್ಯದ 15 ಸಾವಿರ ಪ್ರಯಾಣಿಕರ ವಾಹನಗಳು, 1,440 ಕೋಟಿ ಮೌಲ್ಯದ 12 ಸಾವಿರ ನಿಧಾನಗತಿಯ ಟ್ರಕ್‌ಗಳು ಬಾಕಿ ಉಳಿದಿವೆ. ಸುಪ್ರೀಂ ಕೋರ್ಟ್ ಲಾಕ್ ಡೌನ್ ಮುಗಿದ ಮೇಲೆ ದೆಹಲಿ ಎನ್‌ಸಿಆರ್ ಹೊರತುಪಡಿಸಿ 10 ದಿನಗಳ ಕಾಲ ಈ ವಾಹನಗಳ ಮಾರಾಟಕ್ಕೆ ಆಸ್ಪದ ನೀಡಿದ್ದರೂ ಲಾಕ್‌ಡೌನ್ ಮುಗಿದ ತಕ್ಷಣ ಜನ ವಾಹನ ಖರೀದಿಗೆ ಬರುತ್ತಾರಾ ಎಂಬ ಪ್ರಶ್ನೆ ಹಾಗೆಯೇ ಉಳಿದಿದೆ.
Related Articles
Advertisement
ಸೋಮಶೇಖರ ಸಿ.ಜೆ.