Advertisement

ಅಧ್ಯಕ್ಷರಾದ್ರೆ ಕಲ್ಯಾಣ ನಿಧಿ ನೆರವು ಪ್ರಮಾಣ ಏರಿಕೆ

04:38 PM May 21, 2022 | Team Udayavani |

ಮೈಸೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ತಾವು ಆಯ್ಕೆಯಾದರೆ ಮಂಡಳಿಯ ಕಲ್ಯಾಣ ನಿಧಿಯಿಂದ ಸಂಕಷ್ಟದಲ್ಲಿರುವ ಸದಸ್ಯರಿಗೆ ನೀಡುತ್ತಿರುವ 2.5 ಲಕ್ಷ ರೂ. ನೆರವನ್ನು ಐದು ಲಕ್ಷ ರೂ.ಗೆ ಏರಿಸುವು ದಾಗಿ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಕನ್ನಡ ಚಲನಚಿತ್ರ ನಿರ್ಮಾಪಕ ಸಾ.ರಾ.ಗೋವಿಂದು ಹೇಳಿದರು.

Advertisement

ಕನ್ನಡ ಚಿತ್ರರಂಗದಲ್ಲಿ ಕಳೆದ 40 ವರ್ಷಗಳಿಂದ ಇದ್ದೇನೆ. ತಮ್ಮ ತಂಡ ಚುನಾಯಿತರಾದರೆ ಮಂಡಳಿಯ ಕಲ್ಯಾಣ ನಿಧಿಯಿಂದ ಸಂಕಷ್ಟದಲ್ಲಿರುವ ಸದಸ್ಯರಿಗೆ ನೀಡುತ್ತಿರುವ 2.5 ಲಕ್ಷ ರೂ. ನೆರವನ್ನು ಐದು ಲಕ್ಷ ರೂ.ಗೆ ಏರಿಸುತ್ತೇವೆ ಎಂದು ಭರವಸೆ ನೀಡಿದರು.

ಚುನಾವಣೆಯಲ್ಲಿ ಎದುರಾಳಿ ಭಾ.ಮ.ಹರೀಶ್‌ ಅವರ ಆರೋಪಕ್ಕೆ ಉತ್ತರಿಸಲಾರೆ. ಎದುರಾಳಿಗಳು ಮತದಾರರನ್ನು ತಪ್ಪುದಾರಿಗೆ ಎಳೆಯುವುದು ಬೇಡ. ಒಂದು ಸಿನಿಮಾವನ್ನೂ ಮಾಡಿರುವುದಿಲ್ಲ, ಸಿನಿಮಾ ಬಿಡುಗಡೆ ಮಾಡಿರುವುದಿಲ್ಲ. ವಾಣಿಜ್ಯ ಮಂಡಳಿಗೆ ಬಂದು ಬೀಗಹಾಕುತ್ತಾರೆ. ಏಕೆ ನಾಟಕ ಆಡ್ತೀರಿ? ಚುನಾವಣೆಯಲ್ಲಿ ನೇರವಾಗಿ ಹೋರಾಟ ನಡೆಸಬೇಕು. ನಮಗೂ ಹೇಳಲು ಸಾಕಷ್ಟು ವಿಷಯವಿದೆ. ಆದರೆ, ಹೇಳುವುದಿಲ್ಲ ಎಂದು ವಿವರಿಸಿದರು.

ಸ್ನೇಹಿತರ ಒತ್ತಾಯಕ್ಕೆ ಕಟ್ಟುಬಿದ್ದು ಅಧ್ಯಕ್ಷ ಸ್ಥಾನಕ್ಕೆ ಮತ್ತೂಮ್ಮೆ ಸ್ಫರ್ಧಿಸಿದ್ದೇನೆ. ಈವರೆಗೂಯಾವುದೇ ಚುನಾವಣೆಯಲ್ಲಿ ಯಾರನ್ನೂ ದೂಷಿಸಿರಲಿಲ್ಲ ಎಂದ ಸಾ.ರಾ.ಗೋವಿಂದು, ಮೈಸೂರಿನ ಜಯಲಕ್ಷ್ಮೀಪುರಂನಲ್ಲಿರುವ ವಾಣಿಜ್ಯ ಮಂಡಳಿಯ ನಿವೇಶನದಲ್ಲಿ ಕಟ್ಟಡವನ್ನು ನಿರ್ಮಿಸಿ ಸದಸ್ಯರ ಉಪಯೋಗಕ್ಕೆ ನೀಡುವ ಉದ್ದೇಶವಿದೆ ಎಂದು ತಿಳಿಸಿದರು.

ಮೈಸೂರಿನಲ್ಲಿಯೇ ಚಿತ್ರನಗರಿ ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಚಿತ್ರನಗರಿ ಸ್ಥಾಪನೆಗೆ ಶಂಕುಸ್ಥಾಪನೆನೆರವೇರಲಿದೆ. ರಾಜ್ಯ ಸರ್ಕಾರ ಕನ್ನಡ ಚಲನಚಿತ್ರ ರಂಗಕ್ಕೆ ಸಾಕಷ್ಟು ನೆರವು, ಉತ್ತೇಜನ ನೀಡುತ್ತಿದೆ. ನೆರೆಯ ರಾಜ್ಯಗಳಲ್ಲಿ ಅಲ್ಲಿನ ಸರ್ಕಾರ ಈ ಪ್ರಮಾಣದಲ್ಲಿ ಅಲ್ಲಿನ ಚಲನಚಿತ್ರರಂಗಕ್ಕೆ ನೆರವಾಗುತ್ತಿಲ್ಲ ಎಂದರು.

Advertisement

ಮಂಡಳಿಯಲ್ಲಿ 1,750 ಮತದಾರರಿದ್ದಾರೆ. ನಿರ್ಮಾಪಕರು, ಪ್ರದರ್ಶಕರು, ವಿತರಕರ ವಲ ಯದಿಂದ ಚುನಾವಣೆ ನಡೆಯಲಿದೆ. ಮೇ 28ರಂದು ಬೆಂಗಳೂರಿನ ಗುರುರಾಜ ಕಲ್ಯಾಣ ಮಂಟಪದಲ್ಲಿ ಮಧ್ಯಾಹ್ನ 2 ರಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ ಎಂದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಎನ್‌.ಎಂ.ಸುರೇಶ್‌ ಮಾತನಾಡಿ, ಎದುರಾಳಿಗಳು ಸಾ.ರಾ.ಗೋವಿಂದು ಅವರವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿ ದ್ದಾರೆ. ಭಾ.ಮ.ಹರೀಶ್‌ ಇನ್ನೊಮ್ಮೆ ಇದೇ ರೀತಿಮಾತಾಡಿದರೆ ದಾಖಲೆಗಳ ಸಮೇತ ಅವರಬಗ್ಗೆ ನಾವೂ ಮಾತಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಚುನಾವಣೆಗೆ ಸ್ಪರ್ಧಿಸಿರುವ ಕೆ.ಎಂ.ವೀರೇಶ್‌, ವಿ.ಸುಬ್ರಮಣಿ, ಪಿ.ಎಸ್‌.ಜ್ಞಾನೇಶ್ವರಐತಾಳ್‌, ಜಿ.ಪಿ.ಕುಮಾರ್‌, ಜಯಸಿಂಹ ಮುಸುರಿ ಅವರು ಪತ್ರಿಕಾಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next